ETV Bharat / state

ಇಂದು 1,610 ಮಂದಿಗೆ ಕೊರೊನಾ ಸೋಂಕು ದೃಢ: 32 ಸೋಂಕಿತರ ಸಾವು

author img

By

Published : Aug 7, 2021, 7:43 PM IST

ಕೊರೊನಾ
corona

ರಾಜ್ಯದಲ್ಲಿ ಇಂದು ಹೊಸದಾಗಿ 1,619 ಮಂದಿಗೆ ಸೋಂಕು ದೃಢಪಟ್ಟಿದೆ. ಈ ದಿನ ಸುಮಾರು 1,640 ಸೋಂಕಿತರು ಗುಣಮುಖರಾಗಿದ್ದಾರೆ. ಈ ದಿನ 32 ಸೋಂಕಿತರು ಮೃತಪಟ್ಟಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿಂದು 1,47,868 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1619 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,16,927 ಕ್ಕೆ ಏರಿಕೆಯಾಗಿದೆ. ಈ ಮೂಲಕ ಪಾಸಿಟಿವಿಟಿ ದರ ಶೇ1.08 ರಷ್ಟಿದೆ.

ಈ ದಿನ 1,640 ಸೋಂಕಿತರು ಗುಣಮುಖರಾಗಿದ್ದು, ಈವರಗೆ 28,55,862 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ 24,266 ಸಕ್ರಿಯ ಪ್ರಕರಣಗಳಿವೆ. ಇಂದು 32 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,773ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ1.98 ರಷ್ಟಿದೆ. ವಿಮಾನ ನಿಲ್ದಾಣದಿಂದ 993 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 24 ಮಂದಿ ಯುಕೆಯಿಂದ ಆಗಮಿಸಿದ್ದಾರೆ.

ರೂಪಾಂತರಿ ಅಪಡೇಟ್ಸ್

1) ಡೆಲ್ಟಾ ( Delta/B.617.2) -1089

2)ಅಲ್ಪಾ(Alpha/B.1.1.7) - 155

3) ಕಪ್ಪಾ (Kappa/B.1.617) 159

4) ಬೇಟಾ ವೈರಸ್ (BETA/B.1.351) -7

5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ

6) ಈಟಾ (ETA/B.1.525) - 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.