ETV Bharat / state

SSLC ಪೂರಕ ಪರೀಕ್ಷೆ : ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ವಿಸ್ತರಣೆ

author img

By

Published : Aug 30, 2021, 4:09 PM IST

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ನೋಂದಣಿ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಲಾಗಿದೆ..

sslc-supplementary-exam-student-registration-date-extension
SSLC ಪೂರಕ ಪರೀಕ್ಷೆ: ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ವಿಸ್ತರಣೆ

ಬೆಂಗಳೂರು : ಕೋವಿಡ್ ಭೀತಿ ಇದ್ದ ಕಾರಣಕ್ಕೆ ಈ ಬಾರಿ ಸುಮಾರು 5,063 ವಿದ್ಯಾರ್ಥಿಗಳು ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಬದಲಿಗೆ ಮುಂದಿನ ಸಲ ಪರೀಕ್ಷೆ ಬರೆಯುವ ಆಯ್ಕೆ ತೆಗೆದುಕೊಂಡಿದ್ದರು. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 3ನೇ ವಾರ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ ನಡೆಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ಪ್ರಥಮ ಪ್ರಯತ್ನ ಅಂತಲೇ ಇವರನ್ನು ಪರಿಗಣಿಸಲಾಗುತ್ತಿದೆ.

2020-21ನೇ ಸಾಲಿನ ಎಸ್​​ಎಸ್​​ಎಲ್​ಸಿ ಪೂರಕ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆಗಸ್ಟ್ 18ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿತ್ತು.

ಆದರೆ, ರಾಜ್ಯದ ಕೆಲವು ಶಾಲೆಗಳಿಂದ ಹಾಗೂ ಪೋಷಕರಿಂದ ಮಂಡಳಿಗೆ ದೂರವಾಣಿ ಕರೆ ಬಂದಿದೆ. ವಿದ್ಯಾರ್ಥಿಗಳ ನೋಂದಣಿ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಲು ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಅವಕಾಶ ನೀಡಲಾಗಿದೆ‌.

ಪರೀಕ್ಷಾ ಶುಲ್ಕ :

ಶಾಲಾ ವಿದ್ಯಾರ್ಥಿಗಳಿಗೆ (ಹೊಸಬರು)
ಪರೀಕ್ಷಾ ಶುಲ್ಕ- 485 ರೂಪಾಯಿ
22 (ಲ್ಯಾಮಿನೇಷನ್ ಶುಲ್ಕ)
ಒಟ್ಟು - 507 ರೂಪಾಯಿ

ಪುನರಾವರ್ತಿತ ಅಭ್ಯರ್ಥಿಗಳು
ಒಂದು ವಿಷಯಕ್ಕೆ - ರೂ. 320
ಎರಡು ವಿಷಯಕ್ಕೆ - ರೂ. 386
ಮೂರು ವಿಷಯ/ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ- ರೂ. 520

ಶುಲ್ಕ ವಿನಾಯಿತಿ : ಪರಿಶಿಷ್ಟ ಜಾತಿ-ಪಂಗಡ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ, ಕೋವಿಡ್-19 ಮತ್ತು ಇತರೆ ಅನಾರೋಗ್ಯ ಕಾರಣದಿಂದ 2020-21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸದ ಸರ್ಕಾರಿ ಪ್ರೌಢ ಶಾಲೆ/ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಶಾಲಾ ವಿದ್ಯಾರ್ಥಿಗಳಾಗಿ (CCERF) ಪ್ರಥಮ ಬಾರಿಗೆ ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೆ ಮಾತ್ರ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದೆ. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದ್ದಾರೆ.

* ವಿದ್ಯಾರ್ಥಿಗಳ ಮಾಹಿತಿ ಅಪಲೋಡ್ ಮಾಡಲು ಸೆಪ್ಟೆಂಬರ್ 9ರ ತನಕ ಅವಕಾಶ
* ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ಸೆಪ್ಟೆಂಬರ್ 6ರ ತನಕ ಅವಕಾಶ
* ಬ್ಯಾಂಕ್​ಗೆ ಜಮೆ ಮಾಡಲು ಸೆಪ್ಟೆಂಬರ್ 8ರವರೆಗೆ ಅವಕಾಶ
* ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳು ಶುಲ್ಕ ಪಾವತಿಸಲು ಸೆಪ್ಟೆಂಬರ್ 8ರ ವರೆಗೆ ಕಾಲಾವಕಾಶ
* ನಾಮಿನಲ್ ರೋಲ್ ಮತ್ತು ಸಂಬಂಧಿಸಿದ ಇತರೆ ದಾಖಲೆ ಸೆಪ್ಟೆಂಬರ್ 14 ಕೊನೆಯ ದಿನಾಂಕ

ವೇಳಾಪಟ್ಟಿ ಹೀಗಿದೆ :

27-9-2021

ಬೆಳಗ್ಗೆ 10-30ರಿಂದ ಮಧ್ಯಾಹ್ನ 1:30ರವರೆಗೆ
ಮುಖ್ಯ ವಿಷಯಗಳು:
ಗಣಿತ, ವಿಜ್ಞಾನ ಸಮಾಜ ವಿಜ್ಞಾನ
ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ಥಾನ ಸಂಗೀತ/ಕರ್ನಾಟಕ ಸಂಗೀತ

ಮಧ್ಯಾಹ್ನ 2:30- 5:00
ಎಲಿಮೆಂಟ್ಸ್​ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್
ಎಂಜಿನಿಯರಿಂಗ್ ಗ್ರಾಫಿಕ್ಸ್ 2
ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಎಂಜಿನಿಯರಿಂಗ್
ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

29-9-2021
ಭಾಷಾ ವಿಷಯ
• ಪ್ರಥಮ ಭಾಷೆ
ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
• ದ್ವಿತೀಯ ಭಾಷೆ
ಇಂಗ್ಲಿಷ್ ಕನ್ನಡ
• ತೃತೀಯ ಭಾಷೆ
ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು

ಇದನ್ನೂ ಓದಿ: Video - ಶ್ರೀಕೃಷ್ಣ ಜನ್ಮಾಷ್ಟಮಿ.. RSS ಕೇಂದ್ರದಲ್ಲಿ ಕೊಳಲು ನುಡಿಸಿದ 200 ಕ್ಕೂ ಹೆಚ್ಚು ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.