ETV Bharat / state

ಮಂಗಳೂರು ಸ್ಫೋಟ ಪ್ರಕರಣ: ತ್ವರಿತ ತನಿಖೆಯಾಗಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲಿ: ಸಿದ್ದರಾಮಯ್ಯ

author img

By

Published : Nov 20, 2022, 9:51 PM IST

siddaramaiah reacts on mangaluru bomb blast
ಮಂಗಳೂರು ಸ್ಫೋಟ ಘಟನೆ ತನಿಖೆಯಾಗಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲಿ: ಸಿದ್ದರಾಮಯ್ಯ

ಮಂಗಳೂರು ಸ್ಫೋಟ ಪ್ರಕರಣ ತ್ವರಿತಗತಿಯ ತನಿಖೆಯಾಗಲಿ ಹಾಗೂ ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆಯಾಗಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್​ ಮುಖಾಂತರ ಒತ್ತಾಯಿಸಿದ್ದಾರೆ.

ಬೆಂಗಳೂರು: ಮಂಗಳೂರು ಆಟೋರಿಕ್ಷಾ ಬ್ಲಾಸ್ಟ್​ಗೆ ಮಾಜಿ ಮುಖ್ಯಮಂತ್ರಿ ಟ್ವಿಟ್ಟರ್​ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿರುವ ಮಂಗಳೂರು ನಗರದ ಬಾಂಬು ಸ್ಫೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಳವಳಕಾರಿಯಾದ ಈ ಘಟನೆಯ ಬಗ್ಗೆ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿರುವ ಮಂಗಳೂರು ನಗರದ ಬಾಂಬು ಸ್ಪೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

    ಕಳವಳಕಾರಿಯಾದ ಈ ಘಟನೆಯ ಬಗ್ಗೆ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು.#ManagaluruBlast
    1/2

    — Siddaramaiah (@siddaramaiah) November 20, 2022 " class="align-text-top noRightClick twitterSection" data=" ">

ಗೃಹ ಇಲಾಖೆ ವೈಫಲ್ಯ: ಮಂಗಳೂರು ಬಾಂಬು ಸ್ಫೋಟ ಮತ್ತೊಮ್ಮೆ ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಈ ಘಟನೆಯ ಬಗ್ಗೆ ಊಹಾಪೋಹಗಳ ಸುದ್ದಿಗಳನ್ನು ನಂಬಿ ಉದ್ರಿಕ್ತರಾಗದೆ ಜನತೆ ಸಂಯಮ ಮತ್ತು ಎಚ್ಚರದಿಂದ ಇರಬೇಕೆಂದು ರಾಜ್ಯದ ಜನರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್​ ಮಾಡುವ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಹಿಂದ ವೋಟ್ ಡಿಲಿಷನ್ ಬಿಜೆಪಿಗರ ಕುತಂತ್ರ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.