ETV Bharat / state

ಶೆಟ್ಟರ್ ಕ್ಷಮೆ ಕೇಳಿ ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು: ಈಶ್ವರಪ್ಪ

author img

By

Published : Apr 17, 2023, 4:16 PM IST

Updated : Apr 17, 2023, 5:04 PM IST

shettar-should-apologize-and-come-back-to-the-party-ks-eshwarappa
ಶೆಟ್ಟರ್ ಕ್ಷಮೆ ಕೇಳಿ ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು: ಕೆಎಸ್​​ ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ ಅವರಿಂದು ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಜಗದೀಶ್​​ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ​ ಕುರಿತು ಮಾತನಾಡಿದರು.

ಶೆಟ್ಟರ್ ಕ್ಷಮೆ ಕೇಳಿ ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು: ಈಶ್ವರಪ್ಪ

ಶಿವಮೊಗ್ಗ: "ಜಗದೀಶ್ ಶೆಟ್ಟರ್ ಅವರು 40 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ ವ್ಯಕ್ತಿ. ಅವರೊಬ್ಬ ಸಿದ್ಧಾಂತವಾದಿ. ಆದರೆ, ಟಿಕೆಟ್​​​ ಕೊಡಲಿಲ್ಲ, ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳಿದ್ದು ಕೇಳಿ ಬಹಳ ನೋವಾಯಿತು" ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಜಗದೀಶ್ ಶೆಟ್ಟರ್ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ. ಹುಬ್ಬಳ್ಳಿಯಲ್ಲಿ ತಿರಂಗ ಧ್ವಜಕ್ಕಾಗಿ ಹೋರಾಟ ಮಾಡಿದ್ದರು. ಶೆಟ್ಟರ್​​ ಹೋರಾಟದ ಭೂಮಿಯಿಂದ ಬಂದವರು. ಅಂತಹ ಭೂಮಿಯಿಂದ ಬಂದು ಕಾಂಗ್ರೆಸ್​​​ ಸೇರಿದ್ದಾರೆ. ಕಾಂಗ್ರೆಸ್ ನಿಮಗೆ ಒಂದು ಟಿಕೆಟ್​​ ಕೊಟ್ಟಿರಬಹುದು, ಆದರೆ ಹೋರಾಟದ ಮಣ್ಣಿನಲ್ಲಿ ನೀವು ಗೆಲ್ಲುವುದಿಲ್ಲ" ಎಂದರು.

"ಕಾಂಗ್ರೆಸ್​​ನಲ್ಲೇ ಹಲವು ಗುಂಪುಗಳಿದ್ದಾವೆ. ಇವರು ಯಾವ ಗುಂಪಿಗೆ ಸೇರುತ್ತಾರೋ ಗೊತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಬಿಲ್ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಆಗ ನಿಮ್ಮ ಸಿದ್ಧಾಂತ ಎಲ್ಲಿ ಹೋಗುತ್ತದೆ ಎಂದು ಪ್ರಶ್ನಿಸಿದರು. ಒಂದು ಟಿಕೆಟ್​​ಗಾಗಿ​​ ನಿಮ್ಮ ಇಡೀ ಸಿದ್ಧಾಂತವನ್ನು ಗಾಳಿಗೆ ತೂರಿದರಲ್ಲ, ಕೇವಲ ಅಧಿಕಾರಕ್ಕಾಗಿ ನೀವು ಕಾಂಗ್ರೆಸ್ ಸೇರುತ್ತೀರಾ ಎಂದಿದ್ದರೆ, ಪಕ್ಷ ನಿಮ್ಮನ್ನು ಇಷ್ಟು ಬೆಳೆಸುತ್ತಿರಲಿಲ್ಲ. ಸಾಮಾನ್ಯ ಕಾರ್ಯಕರ್ತರಾಗಿದ್ದ ನಿಮ್ಮನ್ನು ಆರು ಬಾರಿ ಶಾಸಕರನ್ನಾಗಿ ಮಾಡಿದರು. ವಿಪಕ್ಷ ನಾಯಕ, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ ಮಾಡಿದರು. ಆದರೂ ಪಕ್ಷ ಚೆನ್ನಾಗಿ ನಡೆಸಿಕೊಂಡಿಲ್ಲ ಅಂತ ಹೇಳುತ್ತಿದ್ದೀರಿ" ಎಂದು ಬೇಸರ ವ್ಯಕ್ತಪಡಿಸಿದರು.

"ಕಾಂಗ್ರೆಸ್ ಟಿಕೆಟ್​​​ ಕೊಟ್ಟರೆ ನೀವು ಗೆಲ್ಲುವುದಿಲ್ಲ. ಆದರೆ ಮರು ಚಿಂತನೆ ಮಾಡುವುದಕ್ಕೆ ಇನ್ನೂ ಅವಕಾಶವಿದೆ. ನಿಮ್ಮ ಇಡೀ ಕುಟುಂಬ ಧರ್ಮಕ್ಕಾಗಿ, ದೇಶಕ್ಕಾಗಿ ಹೋರಾಟ ಮಾಡಿದ ಕುಟುಂಬ. ಕಾಂಗ್ರೆಸ್ ಸೇರ್ಪಡೆಯಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದೆಯೇ ಎಂದು ಪ್ರಶ್ನಿಸಿದರು. ನೀವು ಕ್ಷಮೆ ಕೇಳಿ, ಧರ್ಮ ಉಳಿಸಿದ, ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು, ಈಗಲೂ ಕಾಲ ಮಿಂಚಿಲ್ಲ‌ ನೀವು ವಾಪಸ್ ಬರಬಹುದು ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿ ಬಯ್ಯಲ್ಲ, ಅಲ್ಲಿದ್ದವರ ಬಗ್ಗೆ ಬೇಸರವಿದೆ: ಜಗದೀಶ್​ ಶೆಟ್ಟರ್​

ಧರ್ಮೇಂದ್ರ ಪ್ರಧಾನ್ ಅವರು ಜಗದೀಶ್ ​ಶೆಟ್ಟರ್ ಮತ್ತು ನೀವು ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಕರೆ ಮಾಡಿದ್ದರು. ನಾನು ತಕ್ಷಣವೇ ನಿವೃತ್ತಿ ಪತ್ರ ಬರೆದೆ. ನಂತರ ಜಗದೀಶ್​​ ಶೆಟ್ಟರ್​ಗೆ​ ಕರೆ ಮಾಡಿ ಮಾತನಾಡಿದಾಗ ನನಗೆ ಬೇಸರವಾಗಿದೆ ಎಂದು ಹೇಳಿದ್ದರು. ಅವರನ್ನು ನಾನು ಸಂಪರ್ಕಿಸಲಿಲ್ಲ ಎಂದು ಹೇಳಿದರು. ಶೆಟ್ಟರ್ ಸಂಘ ಪರಿವಾರದಿಂದ ಬಂದವರು. ಹೀಗಾಗಿ ಅವರು ಪಕ್ಷ ಬಿಟ್ಟಿದ್ದು ನೋವಾಗಿದೆ. ವಾಪಸ್ ಬಂದರೆ ಬಹಳ ಸಂತೋಷ. ಇಲ್ಲದಿದ್ದರೆ ನೋವಾಗುತ್ತದೆ, ಕಾರ್ಯಕರ್ತರ ನೋವಿನ ಬಗ್ಗೆ ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಎಲ್ಲವೂ ಉತ್ತಮವಾಗಿದೆ.. ಪಕ್ಷವನ್ನು ಬೆಳೆಸಲು ಶ್ರಮಿಸುತ್ತೇನೆ: ಜಗದೀಶ್​ ಶೆಟ್ಟರ್​

Last Updated :Apr 17, 2023, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.