ETV Bharat / state

ಆರೆಸ್ಸೆಸ್​ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ: ಆರೋಪಿ ಅಸೀಂ ಷರೀಫ್ ಜಾಮೀನು ಅರ್ಜಿ ವಜಾ

author img

By

Published : Aug 3, 2019, 11:01 AM IST

ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಅಸೀಂ ಷರೀಫ್ ಜಾಮೀನು ಅರ್ಜಿಯನ್ನ ಹೈಕೋರ್ಟ್​ ವಜಾ ಗೊಳಿಸಿದೆ.

ಜಾಮೀನು ಅರ್ಜಿ ವಜಾ

ಬೆಂಗಳೂರು: ಆರ್​ಎಸ್​ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಅಸೀಂ ಷರೀಫ್ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

ಆರೋಪಿ ಅಸೀಂ ಷರೀಫ್ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದ. ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರವಿ ಮಳೀಮಠ ಮತ್ತು ಎಸ್.ಪಿ.ಸಂದೇಶ ಅವರು ಪೀಠದಲ್ಲಿ ಈ ಜಾಮೀನು ಅರ್ಜಿ ವಿಚಾರಣೆ ನಡೆಯಿತು.

ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ–1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್‌ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣ ಸುಮ್ಮನೆ ಇದಕ್ಕೆ ಭಯೋತ್ಪಾದಕರೆ ಬಣ್ಣ ಕಟ್ಟಲಾಗಿದೆ ಎಂದು ಆರೋಪಿ ಷರೀಫ್ ಪರ ವಕೀಲರು ವಾದ ಮಂಡಿಸಿದ್ರು.

ಈ ವೇಳೆ ಎನ್ಐಎ ಪರ ವಕೀಲ ಪ್ರಸನ್ನ ಕುಮಾರ್ ವಾದ ‌ಮಾಡಿ, ಆರ್​ಎಸ್​ಎಸ್ ಸಂಘಟನೆ ಗುರಿಯಾಗಿಸಿಕೊಂಡು ಕೊಲೆ‌ ಮಾಡಲಾಗಿದೆ. ಕೊಲೆಗೂ ಮುನ್ನ ಮತ್ತು ಕೊಲೆ ನಂತರ ಇತರೆ ಆರೋಪಿಗಳೊಂದಿಗೆ ಷರೀಫ್ ಸಂಪರ್ಕ ಹೊಂದಿದ್ದ ಹೀಗಾಗಿ ಸಂಘಟಿತ ಅಪರಾಧ ಕಾಯ್ದೆಯಡಿ ಕೇಸ್ ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ರು.

ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಗಂಭೀರ ಪ್ರಕರಣವಾದ ಕಾರಣ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನ ವಜಾ ಗೊಳಿಸಿದೆ.

Intro:ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಅಸೀಂ ಷರೀಫ್ ಜಾಮೀನು ಅರ್ಜಿ ವಜಾ

ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಅಸೀಂ ಷರೀಫ್ ಸಲ್ಲಿಸಿದ ಜಾಮೀನು ಅರ್ಜಿ
ವಜಾಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

ಆರೋಪಿ ಅಸೀಂ ಷರೀಫ್ ಜಾಮೀನು ಅರ್ಜಿ ಕೋರಿ ಹೈಕೋರ್ಟ್ಗೆ ಅರ್ಜಿಸಲ್ಲಿಕೆ ಮಾಡಿದ್ರು ಈ ಅರ್ಜಿ ವಿಚಾರಣೆ ವಿಭಾಗೀಯ ಪೀಠದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ಎಸ್.ಪಿ.ಸಂದೇಶ ಅವ್ರ ಪೀಠದಲ್ಲಿ ನಡೆಯಿತು.

ಈ ವೇಳೆ ಆರೋಪಿ ಪರ ವಕೀಲರು ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ–1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್‌ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು..ಆದರೆ ಇದೊಂದು ಕೊಲೆ ಪ್ರಕರಣ ಸುಮ್ಮನೇ ಇದಕ್ಕೆ ಭಯೋತ್ಪಾದಕರೆ ಬಣ್ಣ ಕಟ್ಟಲಾಗಿದೆ ಎಂದ್ರು.

ಈ ವೇಳೆ ಎನ್ ಐಎ ಪರ ವಕೀಲ ಪ್ರಸನ್ನ ಕುಮಾರ್ ವಾದ ‌ಮಾಡಿ ಆರ್ ಎಸ್ ಎಸ್ ಸಂಘಟನೆ ಗುರಿಯಾಗಿಸಿಕೊಂಡು ಕೊಲೆ‌ಮಾಡಲಾಗಿದೆ. ಹಾಗೆ ಕೊಲೆಗು ಮುನ್ನ ನಂತರ ಇತರೆ ಆರೋಪಿಗಳೊಂದಿಗೆ ಷರೀಫ್ ಸಂಪರ್ಕ ಹೊಂದಿದ್ದಹೀಗಾಗಿ ಸಂಘಟಿತ ಅಪರಾಧ ಕಾಯ್ದೆಯಡಿ ಕೇಸ್ ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ರು.

ಈ ವೇಳೆ ನ್ಯಾಯಪೀಠ ಗಂಭೀರ ಪ್ರಕರಣವಾದ ಕಾರಣ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನ ರದ್ದು ಮಾಡಿದೆ.Body:KN_BNG_8_RUDRESH_7204498Conclusion:KN_BNG_8_RUDRESH_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.