ETV Bharat / state

ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ.. ದೋಷಾರೋಪ ಪಟ್ಟಿ ರೆಡಿ ಮಾಡಿದ ಎಸ್ಐಟಿ ಟೀಂ

author img

By

Published : Aug 16, 2019, 3:28 PM IST

ಎಂ.ಎಂ.ಕಲ್ಬುರ್ಗಿ

ಪ್ರಗತಿಪರ ಚಿಂತಕ ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ಟೀಂ ದೋಷಾರೋಪ ಪಟ್ಟಿಯನ್ನ ರೆಡಿ ಮಾಡಿದ್ದು, ಸದ್ಯದಲ್ಲೇ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಬೆಂಗಳೂರು: ಕಲ್ಬುರ್ಗಿ ಹತ್ಯೆ ಪ್ರಕರಣ ತನಿಖೆ ವೇಳೆ ಎಸ್ಐಟಿ ಮುಂದೆ ಹತ್ಯೆಯ ಕುರಿತ ಸಂಪೂರ್ಣ ಮಾಹಿತಿಯನ್ನ ಆರೋಪಿಗಳು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಎಸ್​ಐಟಿ ದೋಷಾರೋಪ ಪಟ್ಟಿ ತಯಾರಿಸಿದ್ದು, ಈ ಪಟ್ಟಿಯಲ್ಲಿ ಅಮೋಲ್ ಕಾಳೆ, ಪ್ರವೀಣ್, ಗಣೇಶ್ ಮಿಸ್ಕಿನ್, ಅಮಿತ್ ಬುದ್ಧಿ ಹೆಸರಿರುವುದಾಗಿ ತಿಳಿದುಬಂದಿದೆ.

ಕಲ್ಬುರ್ಗಿ ಅವರು ಸಾರ್ವಜನಿಕರ ಸಭೆಯಲ್ಲಿ ಕೆಲವು ಕಡೆ ಧರ್ಮ ವಿರೋಧಿ ಹೇಳಿಕೆ ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ರು. ಅಪಾರ ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

2015 ರಲ್ಲಿ ಧರ್ಮ ರಕ್ಷಿಸುವ ಕೆಲಸ ಮಾಡುವ ಬಗ್ಗೆ ಅಮೋಲ್ ಕಾಳೆ, ಪ್ರವೀಣ್, ಗಣೇಶ್ ಮಿಸ್ಕಿನ್, ಅಮಿತ್ ಬುದ್ಧಿ ಸಭೆ ಮಾಡಿ ಹುಬ್ಬಳಿಯಲ್ಲಿ ಕಲ್ಬುರ್ಗಿ ಹತ್ಯೆ ಬಗ್ಗೆ ಚರ್ಚೆ ಮಾಡಿದ್ದರು. 3 ತಿಂಗಳು ಕಲ್ಬುರ್ಗಿ ಪೂರ್ವಾಪರ ಚಲನವಲನಗಳ ಬಗ್ಗೆ ತಿಳಿದುಕೊಂಡು ಅಮೋಲ್ ಕಾಳೆ ಸೂಚನೆಯಂತೆ ಉಳಿದ ಆರೋಪಿಗಳು ಕೊಲೆ ಮಾಡಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ ಎಂದು ಎಸ್​ಐಟಿ ಹೇಳಿದೆ.

ಅಮೋಲ್ ಕಾಲೆ ಸೂರ್ಯ ವಂಶಿಗೆ ಬೈಕ್ ಕದ್ದು ತರುವಂತೆ ಸೂಚಿಸಿದ್ದನಂತೆ. ಅಷ್ಟೇ ಏಕೆ ಬ್ಬಳಿಯಿಂದ ಬೈಕ್ ಕದ್ದು ತಂದು ಬೈಕ್ ಅನ್ನ ಗಣೇಶ್​ಗೆ ನೀಡುವಂತೆ ಸೂಚಿಸಿದ್ದ. ನಂತ್ರ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್, ಅಮೀತ್ ಬುದ್ಧಿಗೆ ಮಹಾರಾಷ್ಟ್ರ, ಬೆಳಗಾವಿ ಅರಣ್ಯ ಪ್ರದೇಶದಲ್ಲಿ ಏರ್ ಗನ್, ಪಿಸ್ತೂಲ್ ಹಾಗೂ ನಾಡ ಬಾಂಬ್ ಬಳಕೆ ತಯಾರಿಕೆ ಹೇಗೆ ಎನ್ನುವ ಬಗ್ಗೆ ತರಬೇತಿ ನೀಡಿ ಆಗಸ್ಟ್ 3 ರಂದು ಕಲ್ಬುರ್ಗಿ ಮನೆ ನೋಡಿಕೊಂಡು ಹೋಗಿ ಆಗಸ್ಟ್ 30ರಂದು ಕಲ್ಬುರ್ಗಿ ಹತ್ಯೆ ಬಗ್ಗೆ ಡೇಟ್ ಫಿಕ್ಸ್ ಮಾಡಿದ್ದರು ಎಂದು ಎಸ್​ಐಟಿ ರೆಡಿ ಮಾಡಿರುವ ಚಾರ್ಜ್​ಶೀಟ್​ನಲ್ಲಿ ವಿವರಿಸಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಿಗೆ ಗೊತ್ತಾಗಿದೆ.

ಆಗಸ್ಟ್ 30 ರಂದು ಕದ್ದ ಬೈಕ್ ನಲ್ಲಿ ಬಂದಿದ್ದ ಗಣೇಶ್ ಮತ್ತು ಪ್ರವೀಣ್ ಸ್ಟೂಡೇಂಟ್ಸ್ ರೀತಿ ಬಂದು ಮನೆ ಬಾಗಿಲು ಬಡಿದಿದ್ದಾರೆ. ಈ ವೇಳೆ ಕಲ್ಬುರ್ಗಿ ಪತ್ನಿ ಉಮಾದೇವಿ ಮನೆ ಬಾಗಿಲು ತೆರೆದಾಗ ನಾವು ಸ್ಟೂಡೆಂಟ್ಸ್, ಕಲ್ಬುರ್ಗಿಯವರ ಹತ್ತಿರ ಮಾತನಾಡಬೇಕು ಎಂದಿದ್ದಾರೆ. ಎಂ.ಎಂ.ಕಲ್ಬುರ್ಗಿ ಏನ್ ಅಪ್ಪ ಅಂತ ಮಾತನಾಡಿಸಲು ಬಂದಾಗ ಗುಂಡು ಹಾರಿಸಿ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.‌ ಸದ್ಯ ದೋಷಾರೋಪ ಪಟ್ಟಿ ರೆಡಿ ಮಾಡಿದ್ದು, ಕೆಲವೇ ದಿನದಲ್ಲಿ ಕೋರ್ಟ್​ಗೆ ಎಸ್​​ಐಟಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

Intro:ಪ್ರಗತಿಪರ ಚಿಂತಕ ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ
ದೋಷಾರೋಪ ಪಟ್ಟಿ ರೆಡಿ ಮಾಡಿದ ಎಸ್ಐಟಿ ಟೀಂ

ಪ್ರಗತಿಪರ ಚಿಂತಕ ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ಟೀಂ ದೋಷಾರೋಪ ಪಟ್ಟಿಯನ್ನ ರೆಡಿ ಮಾಡಿ ಸದ್ಯದಲ್ಲೇ ನ್ಯಾಯಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಈಗಾಗ್ಲೆ ತನಿಖೆ ಮಾಡಿದ‌ ಎಸ್ಐಟಿ ಮುಂದೆ ಹತ್ಯೆಯ ಕುರಿತ ಸಂಪೂರ್ಣ ಮಾಹಿತಿಯನ್ನ ಆರೋಪಿಗಳು ಬಿಚ್ಚಿಟ್ಟಿದ್ದಾರೆ . ಪ್ರಕರಣದಲ್ಲಿ ಅಮೋಲ್ ಕಾಳೆ ,ಪ್ರವೀಣ್,ಗಣೇಶ್ ಮಿಸ್ಕಿನ್ ,ಅಮಿತ್ ಬುದ್ಧಿ ಭಾಗಿಯಾಗಿದ್ದಾರೆ.

ಈ ಆರೋಪಿಗಳು ಕಲಬುರ್ಗಿ ಸಾರ್ವಜನಿಕರ ಸಭೆಯಲ್ಲಿ ಕೆಲವು ಕಡೆ ಧರ್ಮ ವಿರೋಧಿ  ಹೇಳಿಕೆ ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ರು .ಈ ಮಹಾ ಚಿಂತಕ ಅಪಾರ ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

2015 ರಲ್ಲಿ ಧರ್ಮ ರಕ್ಷಿಸುವ ಕೆಲಸ ಮಾಡುವ ಬಗ್ಗೆ
ಅಮೋಲ್ ಕಾಳೆ ,ಪ್ರವೀಣ್,ಗಣೇಶ್ ಮಿಸ್ಕಿನ್ ,ಅಮಿತ್ ಬುದ್ಧಿ ಸಭೆ ಮಾಡಿ ಹುಬ್ಬಳಿಯಲ್ಲಿ ಕಲ್ಬುರ್ಗಿ ಹತ್ಯೆ ಬಗ್ಗೆ ಚರ್ಚೆ ಮಾಡಿ ಕಲ್ಬುರ್ಗಿ ಪೂರ್ವಾಪರ ಚಲನವಲನಗಳನ್ನ 3 ತಿಂಗಳು ಸರ್ವೇ ಮಾಡಿ‌ ಅಮೋಲ್ ಕಾಳೆ ಸೂಚನೆಯಂತೆ ಉಳಿದ ಆರೋಪಿಗಳು ಕೊಲೆ ಮಾಡಿದ್ರು..

ನಂತ್ರ ಅಮೋಲ್ ಕಾಲೆ ಸೂರ್ಯ ವಂಶಿಗೆ ಬೈಕ್ ಕದ್ದು ತರುವಂತೆ ಸೂಚಿಸಿದ್ದ. ಹೀಗಾಗಿ ಹುಬ್ಬಳಿಯಿಂದ ಬೈಕ್ ಕದ್ದು ತಂದು ನಂತ್ರ ಬೈಕ್ ಅನ್ನ ಅಮೋಲ್ ಕಾಳೆ ಗಣೇಶ್ ವಂಶಿಗೆ ನೀಡುವಂತೆ ಅಮೋಲ್ ಕಾಲೆ ಸೂಚಿಸಿದ್ದ. ನಂತ್ರ ಅಮೋಲ್ ಕಾಳೆ ಗಣೇಶ್ ಮಿಸ್ಕಿನ್ , ಪ್ರವೀಣ್ ,ಅಮೀತ್ ಬುದ್ಧಿಗೆ ಮಹಾರಾಷ್ಟ್ರ ,ಬೆಳಗಾವಿ ಅರಣ್ಯ ಪ್ರದೇಶದಲ್ಲಿ ಏರ್ ಗನ್ ,ಪಿಸ್ತೂಲ್ ಹಾಗೂ ನಾಡ ಬಾಂಬ್ ಬಳಕೆ ತಯಾರಿಕೆ ಹೇಗೆ ಅನ್ನೋದ್ರ ತರಬೇತಿ ನೀಡಿ ಆಗಸ್ಟ್ 3 ರಂದು ಕಲ್ಬುರ್ಗಿ ಮನೆ ನೋಡಿಕೊಂಡು ಹೋಗಿ ಆಗಸ್ಟ್ 30ರಂದು ಕಲ್ಬುರ್ಗಿ ಹತ್ಯೆ ಬಗ್ಗೆ ಡೇಟ್ ಫಿಕ್ಸ್  ಮಾಡಿದ್ದರು.

ಆಗಸ್ಟ್ 30 ರಂದು ಕದ್ದ ಬೈಕ್ ನಲ್ಲಿ ಬಂದಿದ್ದ ಗಣೇಶ್ ,ಪ್ರವೀಣ್
ಸ್ಟೂಡೇಟ್ ರೀತಿ ಬಂದು ಮನೆ ಬಾಗಿಲು ಬಡಿದಿದ್ದಾರೆ. ಈ ವೇಳೆ
ಕಲ್ಬುರ್ಗಿ ಪತ್ನಿ ಉಮಾದೇವಿ ಮನೆ ಬಾಗಿಲು ತೆರೆದಾಗ ನಾವು ಸ್ಟೂಡೆಂಟ್ ಕಲ್ಬುರ್ಗಿಯವರ ಹತ್ತಿರ ಮಾತನಾಡಬೇಕು ಎಂದಿದ್ದಾರೆ.

ಈ ವೇಳೆ ಸಾಹಿತಿ ಎಂ.ಎಂ.ಕಲ್ಬುರ್ಗಿ ಏನ್ ಅಪ್ಪ ಅಂತ ಮಾತನಾಡಿಸಲು ಬಂದಾಗ ಎದೆಗೆ ‌ಗುಂಡು ಹಾರಿಸಿ ಓಡಿ ಹೋಗಿದ್ದಾರೆ.‌ ಸದ್ಯ ದೋಷಾರೋಪ ಪಟ್ಟಿ ರೆಡಿ ಮಾಡಿದ್ದು ಕೆಲವೇ ದಿನದಲ್ಲಿ ಎಂ.ಎಂ. ಕಲ್ಬರ್ಗಿ ಹತ್ಯೆ ತನಿಖೆಯ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ.Body:KN_BNG_06_KAlBURGI_7204498Conclusion:KN_BNG_06_KAlBURGI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.