ETV Bharat / state

ರಾಜ್ಯದಲ್ಲಿ ಕೋವಿಡ್​ ಭಾರಿ ಇಳಿಮುಖ.. ಇಂದು 49 ಸೋಂಕಿತರು ಸಾವು

author img

By

Published : Feb 7, 2022, 9:24 PM IST

ಇವತ್ತಿನ ಪಾಸಿಟಿವ್ ದರ ಶೇ. 6.19 ಹಾಗೂ ಸಾವಿದ ದರ ಶೇ. 0.79ರಷ್ಟಿದೆ. ವಿಮಾನ‌ ನಿಲ್ದಾಣದಲ್ಲಿ 1,284 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 677 ವಿದೇಶಿಗರು ಹೈರಿಸ್ಕ್ ದೇಶದಿಂದ ಬಂದಿಳಿದಿದ್ದಾರೆ..

karnataka covid cases today
ಕರ್ನಾಟಕ ಕೋವಿಡ್​

ಬೆಂಗಳೂರು : ರಾಜ್ಯದಲ್ಲಿ ದಿನನಿತ್ಯದ ಕೋವಿಡ್​ ಪ್ರಕರಣಗಳಲ್ಲಿ ಭಾರಿ ಇಳಿಮುಖ ಕಂಡು ಬಂದಿದೆ. ಇಂದು 99,254 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 6,151 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,02,309 ಏರಿಕೆ ಆಗಿದೆ.

ಇತ್ತ 16,802 ಸೋಂಕಿತರು ಗುಣಮುಖರಾಗಿದ್ದು, ಈತನಕ 37,75,799 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 39,396 ಸಕ್ರಿಯ ಪ್ರಕರಣಗಳು ಇವೆ. ‌ಸೋಂಕಿಗೆ 49ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,396 ಏರಿಕೆ ಕಂಡಿದೆ.

ಇದನ್ನೂ ಓದಿ: ಶಾಸಕ ರಾಜಕುಮಾರ್​ ಬಳಿ 2 ಕೋಟಿ ರೂ. ಬೇಡಿಕೆ‌ ಆರೋಪ : ನಾಳೆ ವಿಚಾರಣೆಗೆ ಹಾಜರಾಗಲು ಸಂತ್ರಸ್ತೆಗೆ ನೋಟಿಸ್​

ಇವತ್ತಿನ ಪಾಸಿಟಿವ್ ದರ ಶೇ. 6.19 ಹಾಗೂ ಸಾವಿದ ದರ ಶೇ. 0.79ರಷ್ಟಿದೆ. ವಿಮಾನ‌ ನಿಲ್ದಾಣದಲ್ಲಿ 1,284 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 677 ವಿದೇಶಿಗರು ಹೈರಿಸ್ಕ್ ದೇಶದಿಂದ ಬಂದಿಳಿದಿದ್ದಾರೆ.

ರಾಜಧಾನಿ ಕೋವಿಡ್ ​: ಬೆಂಗಳೂರಿನಲ್ಲಿ 2,718 ಮಂದಿಗೆ ಇಂದು ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,60,176ಕ್ಕೆ ಏರಿದೆ. 6,726 ಜನರು ಡಿಸ್ಜಾರ್ಜ್ ಆಗಿದ್ದು, ಇಲ್ಲಿಯತನಕ 17,07,853 ಗುಣಮುಖರಾಗಿದ್ದಾರೆ. 15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,691ಕ್ಕೆ ಏರಿದೆ. ಸದ್ಯ 39,396 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಮಾಹಿತಿ:

  • ಅಲ್ಪಾ- 156
  • ಬೇಟಾ-08
  • ಡೆಲ್ಟಾ ಸಬ್ ಲೈನ್ ಏಜ್- 4,431
  • ಇತರೆ- 286
  • ಒಮಿಕ್ರಾನ್-1,115
ETV Bharat Logo

Copyright © 2024 Ushodaya Enterprises Pvt. Ltd., All Rights Reserved.