ETV Bharat / state

ರಾಜ್ಯದಲ್ಲಿಂದು 197 ಮಂದಿಯಲ್ಲಿ ಕೋವಿಡ್ ಸೋಂಕು ದೃಢ: ಓರ್ವ ಸಾವು

author img

By

Published : May 31, 2022, 9:58 PM IST

ಕೋವಿಡ್
ಕೋವಿಡ್

ರಾಜ್ಯದಲ್ಲಿಂದು 197 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 273 ಸೋಂಕಿತರು ಗುಣಮುಖರಾಗಿದ್ದಾರೆ. ಮಂಗಳವಾರ ಸೋಂಕಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.

ಬೆಂಗಳೂರು: ರಾಜ್ಯದಲ್ಲಿಂದು 17,716 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 197 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,52,102 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 1.11% ಕ್ಕೆ ಏರಿಕೆ ಕಂಡಿದೆ. ಇತ್ತ 273 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ ಒಟ್ಟು 39,09,966 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಓರ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,065 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,029 ರಷ್ಟಿದೆ. ವಿಮಾನ‌ ನಿಲ್ದಾಣದಲ್ಲಿ 4,771ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 178 ಮಂದಿಗೆ ಸೋಂಕು ತಗುಲಿದ್ದು, 17,87,717ಕ್ಕೆ ಏರಿಕೆ ಆಗಿದೆ. 250 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 17,68,816 ಏರಿಕೆ‌ ಕಂಡಿದೆ. ಸದ್ಯ ಸಾವಿನ ಸಂಖ್ಯೆ 16,963 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1937 ರಷ್ಟಿದೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್:

ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್ ಲೈನೇಜ್- 4623

ಇತರೆ- 331

ಒಮಿಕ್ರಾನ್- 5422

BAI.1.529- 1005

BA1- 100

BA2- 4317

ಒಟ್ಟು- 10,540

ETV Bharat Logo

Copyright © 2024 Ushodaya Enterprises Pvt. Ltd., All Rights Reserved.