ETV Bharat / state

ಬೆಂಗಳೂರು ಶಾಸಕರ ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಧ್ವನಿ ಎತ್ತಿದ ಮೋಹಕ ತಾರೆ

author img

By

Published : Sep 7, 2022, 2:03 PM IST

-rain-problem
ಬೆಂಗಳೂರಿನ ಶಾಸಕರ ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಧ್ವನಿ ಎತ್ತಿದೆ ಮೋಹಕ ತಾರೆ

ಬೆಂಗಳೂರಿನ ಶಾಸಕರ ರಿಯಲ್ ಎಸ್ಟೇಟ್ ದಂಧೆಯ ಕುರಿತಂತೆ ರಮ್ಯ ಟ್ವೀಟ್​ ಮಾಡಿದ್ದು, ಮತ ಚಲಾಯಿಸುವಾಗ ಜವಾಬ್ದಾರಿಯಿಂದ ಚಲಾಯಿಸಬೇಕು ಎಂದಿದ್ದಾರೆ.

ಬೆಂಗಳೂರು : ಉತ್ತರ ಪ್ರದೇಶ, ತಮಿಳುನಾಡು, ಕೇರಳದಲ್ಲಿ ಕುಂಬದ್ರೋಣ ಮಳೆಯಿಂದ ಜಲ ಪ್ರಳಯವನ್ನ ನೋಡಿದ್ದೆವು. ಇದೀಗ ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಜನತೆ ಕೂಡ ತತ್ತರಿಸಿ ಹೋಗಿದ್ದಾರೆ. ಬೆಂಗಳೂರು ಕೂಡ ಜಲ ಪ್ರಳಯದಿಂದ ರೋಸಿ ಹೋಗಿ ರಾಜ್ಯ ಸರ್ಕಾರದ ಬಗ್ಗೆ ಅವಸ್ಥೆಯ ಸಾರ್ವಜನಿಕರು ಸರ್ಕಾರಕ್ಕೆ ಇಡೀ ಶಾಪ ಹಾಕುತ್ತಿದ್ದಾರೆ. ಉದ್ಯಮಿಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮಳೆಯ ಕುರಿತಾಗಿ ಸಾಕಷ್ಟು ಚರ್ಚೆ ನಡೆಸಲಾಗುತ್ತದೆ. ಸದ್ಯ ಈ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ, ಬೆಂಗಳೂರಿನ ಶಾಸಕರ ರಿಯಲ್ ಎಸ್ಟೇಟ್ ದಂಧೆಯ ಕುರಿತಂತೆ ಧ್ವನಿ ಎತ್ತಿದ್ದಾರೆ.

ಕರ್ನಾಟಕದ ಎಷ್ಟು ಶಾಸಕರು ಮತ್ತು ಸಂಸದರು ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರಿನ 28 ಶಾಸಕರುಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಾಡುತ್ತಿದ್ದಾರೆ ಅಂತಾ ರಮ್ಯಾ ಶಾಕ್ ಆಗುವ ವಿಚಾರವನ್ನ ತಮ್ಮ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಲು ಯಾಕೆ ಕೇವಲ ಹಣ ಇರುವವರಿಗೆ ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೀಡಲಾಗುತ್ತಿದೆ? ಯೋಚನೆ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡಲು ಚುನಾವಣಾ ಆಯೋಗ ನಿಗದಿಪಡಿಸಿದ ಮೊತ್ತ 40 ಲಕ್ಷ ರೂ. ಆದರೆ ಚುನಾವಣೆಗಳ್ಯಾಕೆ ಕೋಟಿಗಳಲ್ಲಿ ನಡೆಯುತ್ತಿದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

  • How many MLA’s and MP’s of Karnataka have real estate business’ would you know? Someone said 26 out of 28 mla’s are into real estate 😵‍💫 That’s a staggering number!

    — Divya Spandana/Ramya (@divyaspandana) September 6, 2022 " class="align-text-top noRightClick twitterSection" data=" ">

ಅಲ್ಲದೆ ಈ 26 ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ ಶಾಸಕರು ಜನರಿಂದ ಆಯ್ಕೆಯಾದವರು. ಹೀಗಾಗಿ ದಯವಿಟ್ಟು ವೋಟ್ ಮಾಡಿ, ಸ್ವಲ್ಪ ಆಲೋಚಿಸಿ ವೋಟ್ ಮಾಡಿ. ನಗರದಲ್ಲಿರುವ ಹೆಚ್ಚಿನವರು ಮತದಾನವನ್ನೇ ಮಾಡುವುದಿಲ್ಲ. ಆದರೆ ಇಂತಹ ನೆರೆ ಪರಿಸ್ಥಿತಿ ಬಂದಾಗ ನಾವು ಕೋಪಗೊಳ್ಳುತ್ತೇವೆ. ನಮ್ಮ ಈ ಪರಿಸ್ಥಿತಿಗೆ ನಮ್ಮನ್ನು ನಾವೇ ದೂಷಿಸಬೇಕಿದೆ ಎಂದು ರಮ್ಯಾ ಟ್ವಿಟ್ಟರ್ ವೇದಿಕೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಮ್ಯಾ ಟ್ಟೀಟ್ ಅನುಗುಣವಾಗಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ಇತ್ತೀಚಿನ ವರದಿಯಲ್ಲಿ ರಾಜ್ಯದ ಶಾಸಕರು ಸರಾಸರಿ ದೇಶದಲ್ಲೇ ಅತ್ಯಂತ ಶ್ರೀಮಂತರು ಎಂದು ಹೇಳಿತ್ತು. ವರದಿಯಲ್ಲಿ ನಮೂದಿಸಿರುವ ಬೆಂಗಳೂರಿನ ಶಾಸಕರ ಆದಾಯವು ಅನುಮಾನಾಸ್ಪದವಾಗಿದೆ. ಸದ್ಯ ರಮ್ಯಾ ಮಾಡಿರುವ ಟ್ಟೀಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಭಾರಿ ಮಳೆ: ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಂದ್.. ಅಪಾರ್ಟ್​ಮೆಂಟ್​​ಗಳು ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.