ETV Bharat / state

ಬೆಳೆಹಾನಿ ಪರಿಹಾರ ಜಮೆ ಆಯ್ತಾ ಅಥವಾ ಇಲ್ವಾ? ಹೀಗೆ ಚೆಕ್ ಮಾಡಿ..

author img

By

Published : Oct 15, 2022, 5:42 PM IST

ಬೆಳೆಹಾನಿ ಪರಿಹಾರ ಜಮೆ ಆಯ್ತಾ ಅಥವಾ ಇಲ್ಲ? ಹೀಗೆ ಚೆಕ್ ಮಾಡಿ
Crop loss compensation deposit or not? Check like this

ಬೆಳೆ ಹಾನಿ ಪರಿಹಾರ ರೈತರಿಗೆ ದ್ವಿಗುಣವಾಗಿ ಸಿಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೈತರು ಪರಿಹಾರ ಹಣವನ್ನು ಪಡೆದುಕೊಳ್ಳಬಹುದು. ಒಣ ಭೂಮಿಗೆ ರಾಜ್ಯ ಸರ್ಕಾರದಿಂದ 6500 ರೂ. ಹಾಗೂ ಕೇಂದ್ರ ಸರ್ಕಾರದಿಂದ 6 ಸಾವಿರ ರೂ. ಒಟ್ಟು ಸೇರಿ 12,500 ರೂ. ಪ್ರತಿ ಹೆಕ್ಟೇರ್​​ಗೆ ನೀವು ಪಡೆದುಕೊಳ್ಳಬಹುದು.

ಬೆಂಗಳೂರು : ಇನ್ನೂ ಹಲವಾರು ರೈತರಿಗೆ ಬೆಳೆ ಹಾನಿ ಜಮೆ ಆಗಿಲ್ಲ. ಈ ಜಿಲ್ಲೆಗೆ ಬೆಳೆ ಹಾನಿ ಜಮೆ ಆಗಿಲ್ಲ ಮತ್ತು ನಮ್ಮ ತಾಲೂಕಿಗೆ ಬೆಳೆಹಾನಿ ಜಮೆ ಆಗಿಲ್ಲವೆಂಬ ಮಾತುಗಳು ರೈತರಿಂದ ಕೇಳಿ ಬರುತ್ತಿರುತ್ತವೆ. ನೀವು ಹೇಗೆ ಬೆಳೆ ಹಾನಿ ಚೆಕ್ ಮಾಡಿಕೊಳ್ಳುವುದು ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಪರಿಹಾರ ಜಮಾ ಆಗುತ್ತಿಲ್ಲವೆಂದರೆ ಯಾವ ಕ್ರಮ ಕೈಗೊಳ್ಳಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಅತಿವೃಷ್ಟಿಯಿಂದ ಈಗ ಅಲ್ಲಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ರೈತರು ಈಗ ಕಚೇರಿಗೆ ಅಲೆದಾಡದೆ ಮೊಬೈಲ್ ಫೋನ್ ಮುಖಾಂತರವೇ ಕ್ಷಣದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಪರಿಹಾರ ಜಮೆ ಆಗಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು. ಇದರ ಜೊತೆಗೆ ನಿಮ್ಮ ಖಾತೆಗೆ ಮೊದಲನೇ ಹಂತ ಮತ್ತು ಎರಡನೇ ಹಂತ ಪರಿಹಾರ ಹಣ ಬಿಡುಗಡೆಯಾದಲ್ಲಿ ನಿಮ್ಮ ಆಧಾರ ಕಾರ್ಡ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದು.

ಇನ್ನೂ ಜಮೆಯಾಗಿಲ್ಲವೆಂದರೆ ಏನು ಮಾಡಬೇಕು, ಇದಕ್ಕೆ ಎಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಯಾರ ಬಳಿ ಮಾಹಿತಿ ಕೇಳಬೇಕಾಗುತ್ತದೆ ಎಂಬುದನ್ನು ನೋಡೋಣ.

ಬೆಳೆ ಹಾನಿ ಪರಿಹಾರ ರೈತರಿಗೆ ದ್ವಿಗುಣವಾಗಿ ಸಿಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೈತರು ಪರಿಹಾರ ಹಣವನ್ನು ಪಡೆದುಕೊಳ್ಳಬಹುದು. ಒಣ ಭೂಮಿಗೆ ರಾಜ್ಯ ಸರ್ಕಾರದಿಂದ 6500 ರೂ. ಹಾಗೂ ಕೇಂದ್ರ ಸರ್ಕಾರದಿಂದ 6 ಸಾವಿರ ರೂ. ಒಟ್ಟು ಸೇರಿ 12,500 ರೂ. ಪ್ರತಿ ಹೆಕ್ಟೇರ್​​ಗೆ ನೀವು ಪಡೆದುಕೊಳ್ಳಬಹುದು. ಇದರ ಜೊತೆಗೆ ತೋಟಗಾರಿಕೆ ಮತ್ತು ನೀರಾವರಿಗೆ 25 ಸಾವಿರ ರೂ. ನಿಂದ 28 ಸಾವಿರ ರೂ. ಪರಿಹಾರದ ಹಣವನ್ನು ಸರ್ಕಾರವು ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತದೆ.

ಒಂದು ವೇಳೆ ಇದುವರೆಗೆ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತ ಜಮೆ ಆಗಿಲ್ಲವೆಂದರೆ ನೀವು ನಿಮ್ಮ ಗ್ರಾಮ ಪಂಚಾಯತ್​ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ನೋಂದಣಿ ಮಾಡಿಸಿಕೊಂಡಿದ್ದಿರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಬೇಕಾಗುತ್ತದೆ. ಇದರ ಜೊತೆಗೆ ನೋಂದಣಿ ಆಗಲಿಲ್ಲವೆಂದರೆ ನೀವು ಈಗಲೇ ನಿಮ್ಮ ಪಹಣಿ ಹಾಗೂ ಆಧಾರ ಕಾರ್ಡ್ ಜೊತೆಗೆ ಬ್ಯಾಂಕ್ ಖಾತೆಯ ಪ್ರತಿ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಗ್ರಾಮ ಪಂಚಾಯತಿಯ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗೆ ನಿಮ್ಮ ಎಲ್ಲಾ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಸಬೇಕು.

ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾಧಿಕಾರಿಯು ನಿಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸುತ್ತಾರೆ. ಇದರ ಜೊತೆಗೆ ಕಂದಾಯ ಇಲಾಖೆಯಲ್ಲಿ ಮಾಹಿತಿ ದಾಖಲು ಮಾಡುತ್ತಾರೆ. ಕಂದಾಯ ಇಲಾಖೆಯ ವೆಬ್ ಸೈಟ್ ನಲ್ಲಿ ಬೆಳೆ ಹಾನಿ ಪರಿಹಾರ ಬಗ್ಗೆ ನಿಮ್ಮ ದಾಖಲಾತಿಗಳು ಅಪ್ಲೋಡ್ ಆದಲ್ಲಿ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಬೆಳೆಹಾನಿ ಪರಿಹಾರ ನೇರವಾಗಿ ಜಮೆ ಆಗುತ್ತದೆ. ಬೆಳೆ ಹಾನಿ ಪರಿಹಾರದ ಪೋರ್ಟಲ್ ನಲ್ಲಿ ನಿಮ್ಮ ಮಾಹಿತಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳುವುದು ಅತೀ ಮುಖ್ಯ. ಬೆಳೆ ಹಾನಿ ಪರಿಹಾರ ಜಮೆ ಆಗದೆ ಇದ್ದಲ್ಲಿ ನೀವು ಗ್ರಾಮ ಲೆಕ್ಕಾಧಿಕಾರಿಗಳಿಗೆ ಮಾಹಿತಿ ತಿಳಿಸಬಹುದು. ಪೋರ್ಟಲ್ ನಲ್ಲಿ ನಮೂದಿತ ಆಗಿದೆಯೋ ಅಥವಾ ಇಲ್ಲವೋ ಬೆಳೆ ಪರಿಹಾರ ಬರುತ್ತದೆಯೋ ಅಥವಾ ಇಲ್ಲವೋ ಎಂಬ ಮಾಹಿತಿಯನ್ನು ಅವರಿಗೆ ನೀವು ಕೇಳಬಹುದು.

ಹಾಗೆಯೇ ನೀವು ಪಹಣಿ, ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ನೀಡದೆ, ನೋಂದಣಿ ಆಗದೆ ಇದ್ದಲ್ಲಿ ಈ ಕೊಡಲೇ ನೀವು ಗ್ರಾಮ ಲೆಕ್ಕಾಧಿಕಾರಿ ಬಳಿ ನೋಂದಣಿ ಮಾಡಿಕೊಳ್ಳಿ. ಡಿಸೆಂಬರ್ 7 ರವರೆಗೆ ಹೆಸರು ನೋಂದಣಿ ಮಾಡಿ ಬೆಳೆ ಹಾನಿ ಪರಿಹಾರ ಪಡೆಯುವ ಕೊನೆಯ ದಿನಾಂಕವಾಗಿದೆ. ಹಾಗೆಯೇ ಈಗ 3 ನೇ ಕಂತಿನ ಪರಿಹಾರ ಹಣ ಜಮೆ ಆಗುತ್ತಿದೆ. ಈಗಾಗಲೇ ಕೆಲವು ರೈತರಿಗೆ 1 ಮತ್ತು 2 ನೇ ಕಂತಿನ ಹಣ ಜಮೆ ಆಗಿದೆ. ಹಾಗೆಯೇ 1 ನೇ ಮತ್ತು 2 ನೇ ಹಾಗೂ 3 ನೇ ಕಂತಿನ ಹಣ ಜಮೆ ಆಗದೆ ಇದ್ದಲ್ಲಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.