ETV Bharat / state

ಕರ್ತವ್ಯ ಲೋಪ ಆರೋಪದಡಿ ಅಶೋಕನಗರ ಠಾಣೆಯ ಇನ್ಸ್​​​​ಪೆಕ್ಟರ್​​​ ಅಮಾನತು

author img

By

Published : Jun 27, 2023, 11:24 AM IST

Updated : Jun 27, 2023, 12:40 PM IST

ಇನ್‌ಸ್ಪೆಕ್ಟರ್ ಅಮಾನತು
ಇನ್‌ಸ್ಪೆಕ್ಟರ್ ಅಮಾನತು

ಅಶೋಕ ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಕಾಂತ್‌ ಎಫ್‌. ತೋಟಗಿ ಅವರನ್ನು ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬೆಂಗಳೂರು: ತಮ್ಮ ವ್ಯಾಪ್ತಿಯ ಪಬ್, ಬಾರ್​ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ನಿರ್ಲಕ್ಷ್ಯವಹಿಸಿದ ಆರೋಪದಡಿ ಅಶೋಕ ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಕಾಂತ್‌ ಎಫ್‌. ತೋಟಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.

ನಗರದ ವಿವಿಧ ಸ್ಥಳಗಳಲ್ಲಿರುವ ಖಾಸಗಿ ಹೋಟೆಲ್‌ಗಳು, ಬಾ‌ರ್​ಗಳು, ಪಬ್​ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ರಿಚ್‌ಮಂಡ್ ರಸ್ತೆಯ ಹೋಟೆಲ್​ವೊಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡುತ್ತಿರುವುದು, ಹೊರ ರಾಜ್ಯಗಳ ಯುವತಿಯರಿಂದ ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿದ್ದರು. ದಾಳಿಯ ವೇಳೆ 54 ಜನ ಗ್ರಾಹಕರನ್ನು ವಶಕ್ಕೆ ಪಡೆದು 19 ಯುವತಿಯರನ್ನು ರಕ್ಷಿಸಲಾಗಿತ್ತು.

ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಧಿ ಮೀರಿ ಹೋಟೆಲ್ ಕಾರ್ಯ ನಿರ್ವಹಣೆ ಹಾಗೂ ಯುವತಿಯರನ್ನು ಇರಿಸಿಕೊಂಡು ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪದಡಿ ಅಶೋಕನಗರ ಠಾಣಾ ಇನ್ಸ್‌ಪೆಕ್ಟರ್ ಶ್ರೀಕಾಂತ್‌ ಎಫ್‌. ತೋಟಗಿ ಅವರನ್ನು ಅಮಾನತುಗೊಳಿಸಲಾಗಿದೆ.

ಕರ್ತವ್ಯದ ವೇಳೆ ಮದ್ಯಪಾನ- ಮೂವರು ಪೊಲೀಸರು ಅಮಾನತು: ರಾಮನಗರದಲ್ಲಿ ಮೊನ್ನೆ ತಾನೇ ಮಾಗಡಿ ಪೊಲೀಸ್​ ಠಾಣೆಯ ಎಎಸ್​ಐ ಮಂಜುನಾಥ್​ ಕೆ.ಎನ್, ​ಡಿಸಿಆರ್​ಬಿ ಘಟಕದ ಎಎಸ್​ಐ ಗೋವಿಂದಯ್ಯ ಜಿ.ಎಸ್​ ಮತ್ತು ಚನ್ನಪಟ್ಟಣ ಪುರ ಪೊಲೀಸ್​ ಠಾಣೆ ಹೆಡ್‌ ಕಾನ್​ಸ್ಟೆಬಲ್​ ನಾರಾಯಣ ಮೂರ್ತಿ ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಪಾನಮತ್ತರಾಗಿ, ಮೈಮೇಲೆ ಪ್ರಜ್ಞೆ ಇಲ್ಲದೇ ಯೂನಿಫಾರ್ಮ್ ಕಳಚಿಟ್ಟಿದ್ದು, ನಂತರ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಬಂದಿತ್ತು.

ಇದರ ಹಿನ್ನೆಲೆ ಮೂವರು ಪೋಲಿಸರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಅಮಾನತು ಮಾಡಿದ್ದರು. ಕರ್ತವ್ಯನಿರತ ಪೊಲೀಸರು ಪಾನಮತ್ತರಾಗಿ, ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಕಂಡು ಬಂದಿದೆ. ಇಬ್ಬರು ಎಎಎಸ್ಐ, ಓರ್ವ ಹೆಡ್ ಕಾನ್ಸ್‌ಟೇಬಲ್ ಸದ್ಯ ಅಮಾನತಿನಲ್ಲಿಟ್ಟು ಇಲಾಖೆಯಿಂದ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿಕೆ ನೀಡಿದ್ದರು.

ಲಾರಿ ಚಾಲಕರಿಂದ ಲಂಚ-ಎಎಸ್ಐ ಜೀಪ್​ ಚಾಲಕ ಅಮಾನತು: ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಪೊಲೀಸ್​ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದ ವಿಡಿಯೋ ಜೂನ್​ ತಿಂಗಳ ಪ್ರಾರಂಭದಲ್ಲಿ ಭಾರಿ ವೈರಲ್​ ಆಗಿದ್ದವು. ಈ ಕಾರಣದಿಂದ ಜಿಲ್ಲಾ ಪೊಲೀಸ್​ ಇಲಾಖೆ ಓರ್ವ ಎಎಸ್ಐ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ: ವಿಮಾನದ ಪ್ರಯಾಣಿಕರ ಮಧ್ಯೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಬಂಧನ

Last Updated :Jun 27, 2023, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.