ETV Bharat / state

ನೆರೆ ಪೀಡಿತ ಕ್ಷೇತ್ರದ ಭೇಟಿ ಹಿಂದಿದೆ 'ಕೈ' ನಾಯಕರ ರಾಜಕೀಯ ತಂತ್ರಗಾರಿಕೆ

author img

By

Published : Aug 1, 2021, 11:02 PM IST

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್​​ ನಾಯಕರು ಹೊಸ ರಾಜಕೀಯ ತಂತ್ರವನ್ನು ರೂಪಿಸಿದ್ದಾರೆ. ಈ ಸಂಬಂಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

Congress party leaders has visited flood affected places
'ಕೈ' ನಾಯಕರ ರಾಜಕೀಯ ತಂತ್ರಗಾರಿಕೆ

ಬೆಂಗಳೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಅಧಿಕಾರವಹಿಸಿಕೊಂಡು ಸಚಿವ ಸಂಪುಟ ರಚನೆ ಕಸರತ್ತಿನಲ್ಲಿ ತೊಡಗಿದ್ದಾರೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮಾತ್ರ ನಿರಂತರ ರಾಜ್ಯ ಪ್ರವಾಸ, ನೆರೆ ವೀಕ್ಷಣೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Congress party leaders has visited flood affected places
ನೆರೆ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕರು ಭೇಟಿ

ಎರಡು ವರ್ಷ ಹಿಂದೆ ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಬಳಿಕ ಎರಡು ವರ್ಷ ಪೂರೈಸಿ ಬಿಎಸ್​ವೈ ಅಧಿಕಾರ ಪೂರ್ಣಗೊಳಿಸಿ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ಬಂದಿದ್ದಾರೆ. ಒಟ್ಟು ಮೂರು ಮಳೆಗಾಲದ ನೆರೆ ವೀಕ್ಷಣೆ ಮಾಡಿದ್ದಾರೆ. ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುತ್ತ ಬಂದಿದ್ದ ಕಾಂಗ್ರೆಸ್ ನಾಯಕರು ಈ ಸಾರಿ ವಸ್ತು ಸ್ಥಿತಿ ಅರಿತು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಪೂರಕ ಮಾಹಿತಿ ಕಲೆ ಹಾಕಲು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಸುತ್ತಿ, ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಇಲ್ಲಿ ಬಹುಮುಖ್ಯ ಅಂಶವೆಂದರೆ ರಾಜ್ಯ ಸರ್ಕಾರ ಮಾಡಲಾಗದ ನೋಡದ ಮಾಹಿತಿಯನ್ನು ಕಲೆಹಾಕುವುದು. ಅಲ್ಲದೆ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ನಿಂತು ಸವಾಲು ಹಾಕುವುದಾಗಿದೆ.

ಚುನಾವಣೆ ದೃಷ್ಟಿ:

Congress party leaders has visited flood affected places
ನೆರೆ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕರು ಭೇಟಿ

ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೆ ರಾಷ್ಟ್ರೀಯ ನಾಯಕರು ಹೆಗಲು ಕೊಟ್ಟಿದ್ದಾರೆ. ಇದರ ಜೊತೆಗೆ ಪಕ್ಷದ ಶಾಸಕರು, ಮುಖಂಡರು, ನಾಯಕರಿಗೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪಕ್ಷವನ್ನು ಕಟ್ಟುವ ಕಾರ್ಯ ಕೈಗೊಳ್ಳಬೇಕು. ನೆರೆ, ಬರ ಸಮಸ್ಯೆಯಿಂದ ಜನ ಬಳಲುತ್ತಿದ್ದರೆ ಅದನ್ನು ತಾಲೂಕು, ಜಿಲ್ಲೆ, ರಾಜ್ಯ ನಾಯಕರ ಗಮನಕ್ಕೆ ತರಬೇಕು. ನಾವು ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸೋಣ, ಸರ್ಕಾರದ ಗಮನಕ್ಕೆ ತಂದು ಒತ್ತಡ ಹೇರೋಣ. ಇದರಿಂದ ಜನರ ದೃಷ್ಟಿಯಲ್ಲಿ ನಮಗೆ ಹೆಚ್ಚಿನ ಗೌರವ ಸಿಗಲಿದೆ ಎಂದು ಕರೆ ಕೊಟ್ಟಿದ್ದಾರೆ.

ಓದಿ: ಹಿಂಸೆ-ಮುಕ್ತ ರಾಜ್ಯ ಮಾಡಿದ 'ಯಶಸ್ವಿ'.. ಸಿಎಂ ಯೋಗಿ ಕೊಂಡಾಡಿದ ಅಮಿತ್​ ಶಾ

ಪಕ್ಷದ ಸಾಧನೆ ಬಗ್ಗೆ ಸಾರೋಣ:

ಹಿಂದೆ ನಮ್ಮ ಅಧಿಕಾರದಲ್ಲಿ ನೀಡಿದ ಕೊಡುಗೆಗಳನ್ನು ಜನರಿಗೆ ವಿವರಿಸುವ ಕೆಲಸ ಆಗಬೇಕು. ಅರಿವಿನ ಕೊರತೆ ಜನರಿಗೆ ಕಾಡುತ್ತಿದೆ. ಇವರಿಗೆ ತಮ್ಮ ಸಾಧನೆ ವಿವರಿಸೋಣ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಕೆಳ ಹಂತದ ನಾಯಕರಿಗೆ ವಿವರಿಸಿದ್ದಾರೆ. ಅಲ್ಲದೆ ತಾವೆ ಖುದ್ದಾಗಿ ರಾಜ್ಯದ ವಿವಿಧೆಡೆ ತೆರಳಿ ಜನರ ಸಂಪರ್ಕಿಸುವ, ಅಹವಾಲು ಆಲಿಸುವ ಕಾರ್ಯ ಮಾಡುತ್ತಿದ್ದಾರೆ.

ಸಚಿವ ಸಂಪುಟ ರಚನೆವರೆಗೂ 'ಕೈ'ಗೆ ಕಾಲಾವಕಾಶ:

ರಾಜ್ಯದಲ್ಲಿ ಇರುವ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಜನರ ಬಳಿ ಹೋಗಿ ಕೇಳುವುದಕ್ಕೆ ಹೇಳಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಒಂದಿಷ್ಟು ಅಂಕಿಅಂಶ, ದಾಖಲೆ ಬೇಕಾಗಿದೆ. ಅಲ್ಲದೇ 2018ರ ನಂತರ ಪೂರ್ಣಪ್ರಮಾಣದ ಅಧಿಕಾರ ಇಲ್ಲದೆ ಜನರಿಂದ ಕೊಂಚ ದೂರವಾಗಿದ್ದಾರೆ. ಜನರ ಜತೆ ಬೆರೆಯುವ ಎಲ್ಲಾ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ತೀರ್ಮಾನಿಸಿರುವ ಕಾಂಗ್ರೆಸ್ ನಾಯಕರು, ತಮಗೆ ಹೈಕಮಾಂಡ್ ನಾಯಕರು ನೀಡಿದ ಮಾರ್ಗದರ್ಶನ ಆಧರಿಸಿ ಜನರಿಗೆ ಹತ್ತಿರವಾಗುವ ಯತ್ನ ಮಾಡುತ್ತಿದ್ದಾರೆ. ಸಚಿವ ಸಂಪುಟ ರಚನೆಯಾಗುವವರೆಗೂ ಇವರಿಗೆ ಮುಕ್ತ ಅವಕಾಶ ಇದ್ದು, ಆ ನಂತರ ಇತರೆ ಹೋರಾಟಗಳ ಮೂಲಕ ಜನರ ಮುಂದೆ ತಮ್ಮನ್ನು ತಾವು ತೆರೆದುಕೊಳ್ಳಲು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.