ETV Bharat / bharat

ಹಿಂಸೆ-ಮುಕ್ತ ರಾಜ್ಯ ಮಾಡಿದ 'ಯಶಸ್ವಿ'.. ಸಿಎಂ ಯೋಗಿ ಕೊಂಡಾಡಿದ ಅಮಿತ್​ ಶಾ

author img

By

Published : Aug 1, 2021, 8:10 PM IST

Updated : Aug 1, 2021, 10:51 PM IST

2017ರಲ್ಲಿ ನಾವು ಯುಪಿಯನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಷ್ಕರಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಇಂದು 2021ರಲ್ಲಿ ಯೋಗಿ ಆದಿತ್ಯನಾಥ್ ಮತ್ತು ಅವರ ತಂಡ ಯುಪಿಯನ್ನು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ..

ಯೋಗಿಯನ್ನು ಕೊಂಡಾಡಿದ ಅಮಿತ್​ ಶಾ

ಲಖನೌ : 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನವೇ ಕೇಂದ್ರದ ನಾಯಕರು ರಾಜ್ಯವನ್ನು ಕೊಂಡಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರವನ್ನು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.

ಅಪ್ರಾಪ್ತೆ ಮೇಲೆ ಗ್ಯಾಂಗ್​ ರೇಪ್​.. ಆಕೆಯ ತಮ್ಮನ ಮುಂದೆಯೇ ದುಷ್ಕರ್ಮಿಗಳ ಅಟ್ಟಹಾಸ!

ಉತ್ತರಪ್ರದೇಶ ರಾಜ್ಯ ವಿಧಿ ವಿಜ್ಞಾನ ಸಂಸ್ಥೆ ನಿರ್ಮಾಣಕ್ಕೆ ಅಡಿಪಾಯ ಹಾಕಿದ ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಾ, ಬಿಜೆಪಿ ಸರ್ಕಾರಗಳು ಬಡ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು. 2019ರವರೆಗೆ ಆರು ವರ್ಷಗಳಿಂದ ನಾನು ಯುಪಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಹಾಗಾಗಿ, ನನಗೆ ಯುಪಿ ಚೆನ್ನಾಗಿ ತಿಳಿದಿದೆ.

ಪಶ್ಚಿಮ ಯುಪಿಯಲ್ಲಿ ಭಯದ ವಾತಾವರಣವಿತ್ತು. ಇದರಿಂದಾಗಿ ಜನರು ಅಲ್ಲಿಂದ ಬೇರೆಡೆಗೆ ಹೋಗುತ್ತಿದ್ದರು. ಮಹಿಳೆಯರು, ಅಸುರಕ್ಷಿತರು, ಭೂ ಮಾಫಿಯಾ, ಹಗಲು ಹೊತ್ತಿನಲ್ಲಿ ಗುಂಡಿನ ದಾಳಿ ಮತ್ತು ಗಲಭೆಗಳು ವ್ಯಾಪಕವಾಗಿ ನಡೆಯುತ್ತಿದ್ದವು, ಈಗ ಅದೆಲ್ಲ ಇಲ್ಲ ಎಂದಿದ್ದಾರೆ.

ಮಕ್ಕಳ ಕಳ್ಳಸಾಗಣೆ ಪ್ರಕರಣ: 16 ಮಂದಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

2017ರಲ್ಲಿ ನಾವು ಯುಪಿಯನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಷ್ಕರಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಇಂದು 2021ರಲ್ಲಿ ಯೋಗಿ ಆದಿತ್ಯನಾಥ್ ಮತ್ತು ಅವರ ತಂಡ ಯುಪಿಯನ್ನು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಕೊಂಡಾಡಿದ್ದಾರೆ.

ಜನರಿಂದ ತಪ್ಪಿಸಿಕೊಳ್ಳಲು ಮಹಿಳೆಯನ್ನ ಟೆರೆಸ್​ನಿಂದ ಕೆಳಗೆಸೆದ ಕಳ್ಳರು

ಬಿಜೆಪಿ ಸರ್ಕಾರಗಳು ಜಾತಿ, ಕುಟುಂಬಗಳ ಆಧಾರದ ಮೇಲೆ ಅಥವಾ ತಮಗೆ ಹತ್ತಿರವಿರುವ ಜನರಿಗಾಗಿ ಕೆಲಸ ಮಾಡುವುದಿಲ್ಲ. ಬಿಜೆಪಿ ಸರ್ಕಾರ ಬಡವರ ಅಭಿವೃದ್ಧಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಷ್ಕರಿಸಲು ಕೆಲಸ ಮಾಡುತ್ತವೆ ಎಂದಿದ್ದಾರೆ.

ಮುಖ್ಯಮಂತ್ರಿಯನ್ನು 'ಯಶಸ್ವಿ' ಎಂದು ಕರೆದ ಶಾ, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕೀರ್ತಿ ಯೋಗಿ ಅವರಿಗೆ ಸಲ್ಲುತ್ತದೆ ಎಂದು ಕೊಂಡಾಡಿದ್ದಾರೆ.

ಇಂದು ಉತ್ತರಪ್ರದೇಶ 44 ಅಭಿವೃದ್ಧಿ ಯೋಜನೆಗಳಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಯೋಜನೆಗಳನ್ನು ಜಾರಿ ಮಾಡುವುದು ತುಂಬಾ ಸುಲಭ. ಆದರೆ, ಅವುಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟದ ಕೆಲಸ. ಮಧ್ಯವರ್ತಿಗಳನ್ನು ಮಟ್ಟ ಹಾಕುವುದು ಮತ್ತು ಯಾವುದೇ ಲಂಚವಿಲ್ಲದೆ ಫಲಾನುಭವಿಗಳಿಗೆ ಪ್ರಯೋಜನಗಳನ್ನು ತಲುಪಿಸುವುದು ಬಹಳ ಕಠಿಣವಾಗಿದೆ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಯುಪಿ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಕೆಲಸ ಮಾಡಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಆರ್ಥಿಕತೆಯು 11 ಲಕ್ಷ ಕೋಟಿಯಿಂದ 22 ಲಕ್ಷ ಕೋಟಿಗೆ ಬೆಳೆದಿದೆ ಎಂದಿದ್ದಾರೆ.

Last Updated : Aug 1, 2021, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.