ETV Bharat / bharat

ಜನರಿಂದ ತಪ್ಪಿಸಿಕೊಳ್ಳಲು ಮಹಿಳೆಯನ್ನ ಟೆರೆಸ್​ನಿಂದ ಕೆಳಗೆಸೆದ ಕಳ್ಳರು

author img

By

Published : Jul 21, 2021, 6:52 AM IST

Updated : Jul 21, 2021, 7:51 AM IST

ಮನೆಯೊಳಗೆ ನುಗ್ಗಿದ ಕಳ್ಳರು ನೇರವಾಗಿ ಟೆರೆಸ್ ಮೇಲೆ ತಲುಪಿದ್ದಾರೆ. ಆದರೆ, ಮನೆಯೊಳಗೆ ಮಕ್ಕಳಿಗೆ ಟ್ಯೂಷನ್​ ಮಾಡುತ್ತಿದ್ದ ಪಲ್ಲವಿ ಎಂಬಾಕೆ ಕೈಯಲ್ಲಿ ಹಿಡಿದಿದ್ದ ಕೋಲಿನ ಸಮೇತ ಟೆರೆಸ್​ಗೆ ತಲುಪಿದ್ದಾಳೆ. ಅಲ್ಲೇ ಇದ್ದ ಕಳ್ಳರಿಗೆ ಪರ್ಸ್​ ವಾಪಸ್ ನೀಡುವಂತೆ ಕೇಳಿದ್ದಾಳೆ. ಆದರೆ, ದುಷ್ಕರ್ಮಿಗಳು ಆಕೆಯನ್ನ 15 ಅಡಿ ಎತ್ತರದಿಂದ ಕೆಳಗೆ ಎಸೆದಿದ್ದಾರೆ.

miscreants-threw-girl-from-terrace-after-loot-in-agra
ಜನರಿಂದ ತಪ್ಪಿಸಿಕೊಳ್ಳಲು ಮಹಿಳೆಯನ್ನ ಟೆರೆಸ್​ನಿಂದ ಕೆಳಗೆಸೆದ ಕಳ್ಳರು

ಆಗ್ರಾ (ಉ.ಪ್ರ): ಮಹಿಳೆಯೊಬ್ಬರಿಂದ ಪರ್ಸ್​​ ಎಗರಿಸಿ ಎಸ್ಕೇಪ್ ಆಗುವ ಭರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಮನೆಯೊಳಗಿದ್ದ ಮಹಿಳೆಯನ್ನ ಛಾವಣಿಯಿಂದ ಕೆಳಗೆ ಎಸೆದಿರುವ ಘಟನೆ ಜಿಲ್ಲೆಯ ಟೆಡಿ ಭಾಗಿಯಾ ಭಾಗದಲ್ಲಿ ನಡೆದಿದೆ. ಟೆರೆಸ್​​ನಿಂದ ಬಿದ್ದ ಮಹಿಳೆಯನ್ನು ಪಲ್ಲವಿ ಶರ್ಮಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಡೆದಿದ್ದೇನು..?

ಮಂಗಳವಾರ ಮಧ್ಯಾಹ್ನ ಆಟೋದಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಪರ್ಸ್​ ದೋಚಿದ್ದಾರೆ. ತಕ್ಷಣ ಮಹಿಳೆ ಕಿರುಚಾಡಿದ್ದು, ಅಲ್ಲಿದ್ದ ಜನರು ಕಳ್ಳರ ಬೆನ್ನತ್ತಿದ್ದಾರೆ. ಹೀಗಾಗಿ ಕಳ್ಳರು ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದಾರೆ. ಆದರೆ ಇದಕ್ಕೂ ಮೊದಲೇ ಓರ್ವ ಕಳ್ಳನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ.

ಇತ್ತ ಮನೆಯೊಳಗೆ ನುಗ್ಗಿದ ಕಳ್ಳರು ನೇರವಾಗಿ ಟೆರಸ್​​​ಗೆ ತಲುಪಿದ್ದಾರೆ. ಆದರೆ ಮನೆಯೊಳಗೆ ಮಕ್ಕಳಿಗೆ ಟ್ಯೂಷನ್​ ಮಾಡುತ್ತಿದ್ದ ಪಲ್ಲವಿ ಎಂಬಾಕೆ ಕೈಯಲ್ಲಿ ಹಿಡಿದಿದ್ದ ಕೋಲಿನ ಸಮೇತ ಟೆರೆಸ್​ಗೆ ತಲುಪಿದ್ದಾಳೆ. ಅಲ್ಲೇ ಇದ್ದ ಕಳ್ಳರಿಗೆ ಪರ್ಸ್​ ವಾಪಸ್ ನೀಡುವಂತೆ ಕೇಳಿದ್ದಾಳೆ. ಆದರೆ, ದುಷ್ಕರ್ಮಿಗಳು ಆಕೆಯನ್ನ 15 ಅಡಿ ಎತ್ತರದಿಂದ ಕೆಳಗೆ ಎಸೆದಿದ್ದಾರೆ.

ಬಳಿಕ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಓರ್ವ ಟೆರೆಸ್​​ನಿಂದ ಕೆಳಗೆ ಹಾರಿ ತಪ್ಪಿಸಿಕೊಂಡರೆ, ಇನ್ನೋರ್ವ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಘಟನೆಯಲ್ಲಿ ಮಹಿಳೆಯ ಬೆನ್ನು ಮೂಳೆ ಹಾಗೂ ಕೈಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಸಾರ್ವಜನಿಕರು ಇಬ್ಬರೂ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರಿದಿದೆ.

ಓದಿ: ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್: ಪ್ರತ್ಯೇಕ FIR ದಾಖಲಿಸಿದ NIA

Last Updated : Jul 21, 2021, 7:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.