ETV Bharat / state

ಸಿಎಂ ಬಳಿಯೇ ಬೆಂಗಳೂರು ಉಸ್ತುವಾರಿ ಇದ್ದರೆ ಅನುಕೂಲ ಹೆಚ್ಚು: ಸಚಿವ ಅಶ್ವತ್ಥ ನಾರಾಯಣ್

author img

By

Published : Oct 7, 2021, 9:54 PM IST

cm-basavaraj-bommai-is-the-incharge-minister-bangalore
ಸಚಿವ ಅಶ್ವತ್ಥ್ ನಾರಾಯಣ್

ಕೋವಿಡ್ ಹಾಗೂ ಅಮೃತ ಯೋಜನೆ ಸಂಬಂಧ ಆರ್.ಅಶೋಕ್​ಗೆ ಬೆಂಗಳೂರು ಉಸ್ತುವಾರಿ ನೀಡಲಾಗಿದೆ ಅಷ್ಟೇ. ಸದ್ಯಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರಿನ ಉಸ್ತುವಾರಿ ಸಚಿವರು‌ ಎಂದು ಸಚಿವ ಅಶ್ವತ್ಥ​​ ನಾರಾಯಣ ಹೇಳಿದರು.

ಬೆಂಗಳೂರು: ಬೆಂಗಳೂರು ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಸಿಎಂ ಬಳಿಯೇ ಉಸ್ತುವಾರಿ ಇದ್ದರೆ ಅನುಕೂಲ ಹೆಚ್ಚು ಎಂದು ಸಚಿವ ಅಶ್ವತ್ಥ ನಾರಾಯಣ್ ತಿಳಿಸಿದರು.

ವಿಕಾಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಂಬಂಧ ಪ್ರತಿಕ್ರಿಯೆ ನೀಡಿ, ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಗಳ ಬಳಿಯೇ ಇದ್ದರೆ ಅನುಕೂಲ ಹೆಚ್ಚು. ಸದ್ಯಕ್ಕೆ ಯಾರಿಗೂ ಆ ಸ್ಥಾನವನ್ನು ಕೊಟ್ಟಿಲ್ಲ. ಕೋವಿಡ್ ಹಾಗೂ ಅಮೃತ ಯೋಜನೆ ಸಂಬಂಧ ಆರ್.ಅಶೋಕ್​ಗೆ ಉಸ್ತುವಾರಿ ನೀಡಲಾಗಿದೆ ಅಷ್ಟೇ. ಸದ್ಯಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರಿನ ಉಸ್ತುವಾರಿ ಸಚಿವರು‌ ಎಂದು ತಿಳಿಸಿದರು.

ಸಿಎಂ ಬಳಿಯೇ ಬೆಂಗಳೂರು ಉಸ್ತುವಾರಿ ಇದ್ದರೆ ಅನುಕೂಲ ಹೆಚ್ಚು

ಬಿಎಸ್​ವೈ ಆಪ್ತ ಉಮೇಶ್ ಮನೆ ಮೇಲೆ ನಡೆದ ಐಟಿ ರೇಡ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಅಗ್ಗದ ದರದಲ್ಲಿ ಡೈಯಾಗ್ನೋಸ್ಟಿಕ್​ ಲ್ಯಾಬ್: ಮಲ್ಲೇಶ್ವರಂ ಕ್ಷೇತ್ರದ ಪಿಎಚ್​ಸಿಯಲ್ಲಿ ಹೈಟೆಕ್ ಡಯಾಗ್ನೋಸ್ಟಿಕ್ ಲ್ಯಾಬ್ ನಿರ್ಮಾಣ ಸಂಬಂಧ ಮಣಿಪಾಲ್ ಆಸ್ಪತ್ರೆ ಜೊತೆ ಬಿಬಿಎಂಪಿ ಒಡಂಬಡಿಕೆ ಮಾಡಿಕೊಂಡಿದೆ.

ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಾಥಮಿಕವಾಗಿ ಲ್ಯಾಬ್ ಕಾರ್ಯರಂಭ ಮಾಡಲಾಗುತ್ತದೆ. ಬಿಬಿಎಂಪಿ ಕಟ್ಟಡವನ್ನು ಕೊಡಲಿದೆ. ಮಣಿಪಾಲ್ ಆಸ್ಪತ್ರೆಯವರು ಲ್ಯಾಬ್​ಗೆ ಬೇಕಾಗುವ ಎಲ್ಲ ಸರ್ವೀಸ್ ನೀಡಲಿದ್ದಾರೆ. ಕೈಗೆಟುಕುವ ದರದಲ್ಲಿ ಎಲ್ಲರಿಗೂ ಲ್ಯಾಬ್ ಸರ್ವೀಸ್ ಸಿಗಲಿದೆ ಎಂದು ಸಚಿವರು ತಿಳಿಸಿದರು.

ಖಾಸಗಿ ಡೈಯಾಗ್ನೋಸ್ಟಿಕ್ ಗಳಿಗಿಂತ ಈ ಲ್ಯಾಬ್ ನಲ್ಲಿ ಶೇ 30 ರಷ್ಟು ಕಡಿಮೆ ದರದಲ್ಲಿ ಸೇವೆ ನೀಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರೆಫರ್ ಮಾಡಿ ಬರುವ ಬಿಪಿಎಲ್ ಕಾರ್ಡ್ ದಾರಿಗೆ ಶೇ50 ರಿಯಾಯಿತಿ ದರ ಇರಲಿದೆ. ಬಿಪಿಎಲ್ ಕಾರ್ಡ್ ರಹಿತ ರೋಗಿಗಳಿಗೆ ಶೇ 40ರಷ್ಟು ರಿಯಾಯಿತಿ ಇರಲಿದೆ. ಪ್ರಾಥಮಿಕವಾಗಿ ಮಲ್ಲೇಶ್ವರಂ ಕ್ಷೇತ್ರದದಲ್ಲಿ ಆರಂಭ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬೇರೆ ಕ್ಷೇತ್ರಗಳಲ್ಲೂ ಮಾಡುವ ಸಂಬಂಧ ಚಿಂತನೆ ಇದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.