ETV Bharat / state

ಕರ್ನಾಟಕ ಅತಿದೊಡ್ಡ ಏವಿಯೇಶನ್ ಹಬ್ ಆಗಿ ವಿಕಸಿತ: ಪ್ರಧಾನಿ ಮೋದಿ

author img

By ETV Bharat Karnataka Team

Published : Jan 19, 2024, 4:10 PM IST

Bengaluru connects India's tech potential with global demand Says PM Modi
ಕರ್ನಾಟಕ ಅತಿದೊಡ್ಡಏವಿಯೇಶನ್ ಹಬ್ ಆಗಿ ವಿಕಸಿತ: ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್​ ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.

ಬೆಂಗಳೂರು: ಕರ್ನಾಟಕದ ಬೆಂಗಳೂರು ಆವಿಷ್ಕಾರಗಳು ಮತ್ತು ಸಾಧನೆಗಳೊಂದಿಗೆ ಆಕಾಂಕ್ಷೆಗಳನ್ನು ಸಂಪರ್ಕಿಸುವ ನಗರ. ಬೆಂಗಳೂರು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಯೊಂದಿಗೆ ಬೆಸೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

  • Delighted to inaugurate @Boeing_In's Engineering & Technology Center in Bengaluru. This facility will serve as a hub for innovation and drive advancements in aviation. https://t.co/jqgAT78gwd

    — Narendra Modi (@narendramodi) January 19, 2024 " class="align-text-top noRightClick twitterSection" data=" ">

ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಏರೊಸ್ಪೇಸ್ ಪಾರ್ಕ್‌ನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್​ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ವಾಸಿಗಳಿಗೆ ಇಂದು ಮಹತ್ವದ ದಿನ. ಈ ಹಿಂದೆ ಏಷ್ಯಾದ ಅತಿದೊಡ್ಡ ಹೆಲಿಕ್ಯಾಪ್ಟರ್ ತಯಾರಿಕೆ ಕಾರ್ಖಾನೆ ಆರಂಭವಾಗಿತ್ತು. ಈಗ ಜಾಗತಿಕ ತಂತ್ರಜ್ಞಾನ ಕ್ಯಾಂಪಸ್ ಸಹ ಲಭ್ಯವಾಗುತ್ತಿದೆ. ಇದು ಕರ್ನಾಟಕ ಅತಿದೊಡ್ಡ ಏವಿಯೇಶನ್ ಹಬ್ ಆಗಿ ವಿಕಸಿತವಾಗುತ್ತಿದೆ ಎಂದು ತೋರಿಸುತ್ತದೆ ಎಂದು ಬಣ್ಣಿಸಿದರು.

ಬೋಯಿಂಗ್‌ನ ಈ ಹೊಸ ಜಾಗತಿಕ ತಂತ್ರಜ್ಞಾನ ಕ್ಯಾಂಪಸ್​ ಬೆಂಗಳೂರಿನ ಗುರುತನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕ್ಯಾಂಪಸ್​ ಜಾಗತಿಕ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ವಿನ್ಯಾಸ ಮತ್ತು ಬೇಡಿಕೆಯನ್ನು ಹೆಚ್ಚಿಸಲು ಭಾರತದ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೇ, ಇನ್ ಇಂಡಿಯಾ ಮೇಕ್​ ಪರಿಕಲ್ಪನೆಯನ್ನು ಮೇಕ್ ಫಾರ್ ದಿ ವರ್ಲ್ಡ್ ಎಂಬ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದನ್ನು ಓದಿ: ಬೆಂಗಳೂರಿನಲ್ಲಿ ಬೋಯಿಂಗ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ - ಸಿಎಂ ಸಿದ್ದರಾಮಯ್ಯ ಸಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.