ETV Bharat / state

ಬೆಂಗಳೂರಿನಲ್ಲಿ ಬೆಡ್ ಅಭಾವ, ಸಾವು ಹೆಚ್ಚಳ, ಲಸಿಕೆ ಕೊರತೆ: ಕೈಗೊಂಡ ಕ್ರಮಗಳ ವಿವರ ಇಲ್ಲಿದೆ..

author img

By

Published : Apr 14, 2021, 11:30 AM IST

BBMP Commissioner Gourav Gupta about covid in Bangalore
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

800 ಬೆಡ್​ಗಳು ಎರಡು ಕೋವಿಡ್ ಕೇರ್ ಸೆಂಟರ್​ಗಳಲ್ಲಿವೆ. ಇದಲ್ಲದೆ ಹೊಸದಾಗಿ ತೆರೆಯಲಿರುವ 10 ಕೋವಿಡ್ ಕೇರ್​ ಸೆಂಟರ್​ನಲ್ಲಿ 1,505 ಬೆಡ್‌ಗಳ ವ್ಯವಸ್ಥೆಯಾಗಲಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಹೋಟೆಲ್‌ಗಳು ಸೇರಿ ನಾಲ್ಕು ಕಡೆ, 400 ಹಾಸಿಗೆಗಳ ಖಾಸಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಹೇಳಿದರು.

ಬೆಂಗಳೂರು: ನಗರದಲ್ಲಿ ಕೋವಿಡ್ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿರುವ ಬಿಬಿಎಂಪಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ದಿನೇ ದಿನೇ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಬಿಬಿಎಂಪಿ ಕಡೆಯಿಂದ 10 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಿದ್ದೇವೆ. 1,505 ಬೆಡ್​ಗಳು ಲಭ್ಯವಿರಲಿವೆ ಎಂದು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಈಗಾಗಲೇ 800 ಬೆಡ್​ಗಳು ಎರಡು ಕೋವಿಡ್ ಕೇರ್ ಸೆಂಟರ್​ಗಳಲ್ಲಿ ವರ್ಕಿಂಗ್​ನಲ್ಲಿವೆ. ಇದಲ್ಲದೆ ಹೊಸದಾಗಿ ತೆರೆಯಲಿರುವ 10 ಕೋವಿಡ್ ಕೇರ್​ ಸೆಂಟರ್​ನಲ್ಲಿ 1,505 ಬೆಡ್‌ಗಳ ಸೇರ್ಪಡೆ ಆಗಲಿದೆ. ಇದಲ್ಲದೆ ಪ್ರೈವೆಟ್ ಆಸ್ಪತ್ರೆಗಳು ಹಾಗೂ ಖಾಸಗಿ ಹೋಟೆಲ್‌ಗಳು ಸೇರಿ ನಾಲ್ಕು ಕಡೆ, 400 ಹಾಸಿಗೆಗಳ ಖಾಸಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಿದ್ದಾರೆ. ನಿನ್ನೆ ಮುಖ್ಯ ಮಂತ್ರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಹಾಸಿಗೆಗಳ ಅಭಾವ:

ನಗರದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ಅಭಾವದ ಕುರಿತು ಪ್ರತಿಕ್ರಿಯಿಸುತ್ತಾ, 5,000 ಬೆಡ್​ಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆಯಲು ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ 2,500 ಬೆಡ್ ಖಾಸಗಿ ಆಸ್ಪತ್ರೆಯಿಂದ ಪಡೆದಿದ್ದೇವೆ. ದಾಖಲಾಗಿರುವ ರೋಗಿಗಳು ಡಿಸ್ಚಾರ್ಜ್ ಆದ ಬಳಿಕ ಬೆಡ್​ಗಳು ಖಾಲಿಯಾಗಲಿದೆ. ಆಪ್ತಮಿತ್ರ ಹೆಲ್ಪ್​ಲೈನ್ 14410 ಸಂಪರ್ಕ ಮಾಡಿ ಸಲಹೆ ಪಡೆಯಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್​ಡೌನ್​ ಇಲ್ಲ; ಏ.18 ರಂದು ಸರ್ವಪಕ್ಷ ಸಭೆ ಬಳಿಕ ಮುಂದಿನ ನಿರ್ಧಾರ: ಸಿಎಂ

ಸಾವಿನ ಪ್ರಮಾಣದಲ್ಲಿ ಏರಿಕೆ:

ನಗರದಲ್ಲಿ ಡೆತ್ ರೇಟ್ 0.5% ಇದೆ. ಸೋಂಕಿತರು ಹೆಚ್ಚಳವಾದ ಕಾರಣ, ಸಾವಿನ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಬೇಕಿದೆ. ಐಸಿಯು ಹಾಗೂ ಐಸಿಯು ವೆಂಟಿಲೇಟರ್ ಬೆಡ್​ಗಳನ್ನು ಹೆಚ್ಚು ಮಾಡಬೇಕು. ಆ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜುಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಮೈಕ್ರೋ ಕಂಟೈನ್‌ಮೆಂಟ್ ಝೋನ್:

ಪ್ರಧಾನಿ ಮೋದಿ ಸೂಚನೆಯಂತೆ ಮೈಕ್ರೋ ಕಂಟೈನ್ಮೆಂಟ್ ಝೋನ್​ ಪ್ರಕ್ರಿಯೆ ಜಾರಿಯಲ್ಲಿದೆ. ಮಾರುಕಟ್ಟೆಗಳಲ್ಲಿ ನೈಟ್ ಕರ್ಫ್ಯೂ ಚಾಲನೆಯಲ್ಲಿದೆ. ಅಗತ್ಯಬಿದ್ದರೆ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೆ. ದೊಡ್ಡ ದೊಡ್ಡ ಮಾರ್ಕೆಟ್ ವಿಕೇಂದ್ರೀಕರಣಕ್ಕೂ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

ಲಾಕ್​ಡೌನ್ ಜಾರಿಯಿಲ್ಲ:

ನಗರದಲ್ಲಿ ಲಾಕ್​ಡೌನ್ ಜಾರಿಯಾಗುವುದಿಲ್ಲ. ಮಹಾರಾಷ್ಟ್ರ ಸರ್ಕಾರದಲ್ಲಿ ಕಟ್ಟುನಿಟ್ಟಿನ ನೀತಿ ನಿಯಮಗಳು, ಲಾಕ್​ಡೌನ್ ರೀತಿಯಲ್ಲಿ ಇದೆಯೇ ಹೊರತು, ಲಾಕ್​ಡೌನ್ ಮಾಡಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದರು.

ಇದನ್ನೂ ಓದಿ: ICMR ಪೋರ್ಟಲ್​ ಸಮಸ್ಯೆ: ಬೆಂಗಳೂರಿನಲ್ಲಿ ಕಡಿಮೆ ಕೋವಿಡ್​ ಪ್ರಕರಣ ದಾಖಲು

ಲಸಿಕೆ ಅಭಾವ:

ರಾಷ್ಟ್ರಾದ್ಯಂತ ಲಸಿಕೆಗಳ ಕೊರತೆ ಕಂಡುಬರುತ್ತಿದೆ. ಈಗಾಗಲೇ ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ರಾಜ್ಯಕ್ಕೆ 10 ಲಕ್ಷ ಲಸಿಕೆ ಅಗತ್ಯವಿದೆ. ಬೆಂಗಳೂರಿಗೂ ಸಹ ಮೂರು ಲಕ್ಷ ಲಸಿಕೆ ಬೇಕಿದ್ದು, ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.