ETV Bharat / state

ವ್ಯಕ್ತಿ ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿದ್ದ ಪ್ರಕರಣ.. 8 ವರ್ಷದ ಬಳಿಕ ಅಕ್ಕ ಸೇರಿ ಇಬ್ಬರು ಆರೋಪಿಗಳ ಬಂಧನ

author img

By

Published : Mar 18, 2023, 1:50 PM IST

Updated : Mar 18, 2023, 6:42 PM IST

ಕೊಲೆ ಆರೋಪಿಗಳು
ಕೊಲೆ ಆರೋಪಿಗಳು

ಕೊಲೆ ಮಾಡಿ 8ವರ್ಷಗಳಿಂದ ತೆಲೆಮರೆಸಿಕೊಂಡಿದ್ದ ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿ ಬಿಸಾಡಿ 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ. 'ಸಿ' ರಿಪೋರ್ಟ್ ಆಗಿದ್ದ ಪ್ರಕರಣದ ಹಂತಕರ ಹುಡುಕಾಟದ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಭಾಗ್ಯಶ್ರೀ ಮತ್ತು ಸುಪುತ್ರ ಶಂಕರಪ್ಪ ತಳವಾರ್ ಬಂಧಿತ ಆರೋಪಿಗಳು. ನಿಂಗರಾಜು ಕೊಲೆಯಾಗಿದ್ದ ವ್ಯಕ್ತಿ.

ಪ್ರಕರಣದ ಹಿನ್ನೆಲೆ: ಬಂಧಿತ ಆರೋಪಿಗಳಾದ ಸುಪುತ್ರ ಶಂಕರಪ್ಪ ಮತ್ತು ಭಾಗ್ಯಶ್ರೀ ಸಾಸಬಾಳು ವಿಜಯಪುರದ ಮೂಲದವರು. ಆರೋಪಿ ಸುಪುತ್ರ ಶಂಕರಪ್ಪ ತಳವಾರ ತಾನು ಮದುವೆಯಾಗಿದ್ದ ಪತ್ನಿಯನ್ನು ಬಿಟ್ಟುಬಂದಿದ್ದ. ಅಲ್ಲದೇ ಬೆಂಗಳೂರಿನ‌ ಜಿಗಣಿಯ ಖಾಸಗಿ ಕಂಪೆನಿಯಲ್ಲಿ ಕೆಲಸ‌ ಮಾಡಿಕೊಂಡಿದ್ದ. ಇನ್ನು ಕೊಲೆಯಾದ ನಿಂಗರಾಜು ಆರೋಪಿ ಭಾಗ್ಯಶ್ರೀಯ ಸಹೋದರನಾಗಿರುತ್ತಾನೆ. ಶಂಕರಪ್ಪ ಜೊತೆ ಭಾಗ್ಯಶ್ರೀ ಅಕ್ರಮ ಸಂಬಂಧ ಹೊಂದಿದ್ದೇ ಕೊಲೆಗೆ ಕಾರಣವಾಗಿದೆ. ಸಹೋದರ ನಿಂಗರಾಜು ಜಿಗಣಿಯಲ್ಲಿ ವಾಸವಾಗಿದ್ದ ತನ್ನ ಸಹೋದರಿಯನ್ನು ನೋಡಲು ಬಂದಿದ್ದ. ಈ ವೇಳೆ ಒಂದೇ ಮನೆಯಲ್ಲಿ ಶೇಖರ್​ ಮತ್ತು ಭಾಗ್ಯಶ್ರೀ ವಾಸವಿರುವುದು ಕಂಡು ಬಂದಿದೆ. ಇದರಿಂದ ಕೋಪಗೊಂಡ ನಿಂಗರಾಜು ಅಕ್ಕನೊಂದಿಗೆ ಇದೇ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆ ಭಾಗ್ಯಶ್ರೀ ತನ್ನ ಪ್ರಿಯಕರ ಸುಪುತ್ರ ಶಂಕರಪ್ಪ ಜೊತೆ ಸೇರಿ ತನ್ನ ಸಹೋದರ ನಿಂಗರಾಜನನ್ನು ಕೊಲೆ ಮಾಡಿರುತ್ತಾರೆ. ನಂತರ ದೇಹವನ್ನು ತುಂಡುಗಳನ್ನಾಗಿಸಿ ಬ್ಯಾಗ್​ನಲ್ಲಿ ಹಾಕಿ ವಿವಿಧ ಭಾಗಗಳನ್ನು ಹಲವು ಸ್ಥಳಗಳಲ್ಲಿ ಬಿಸಾಡಿದ್ದಾರೆ. 2015 ಆಗಸ್ಟ್ 11 ರಂದು ಜಿಗಣಿ ಕೈಗಾರಿಕಾ ಪ್ರದೇಶದ ಕೆಐಎಡಿಬಿ ಜಾಗದ ಗಿಡದ ಪೊದೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡುಗಳಾಗಿ ಕತ್ತರಿಸಿದ್ದ ಮೃತ ದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ನಿರಂತರ ಹುಡುಕಾಟ ನಡೆಸಿದರೂ ಕೊಲೆ ಹಂತಕರ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆ ಸಿ ರಿಪೋರ್ಟ್ ಮಾಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳು ಮಹಾರಾಷ್ಟ್ರದ ನಾಸಿಕ್​ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್​ ಬಾಲದಂಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಗನಿಗೆ ಸುನ್ನತಿ ಮಾಡಿಸಿದ್ದಕ್ಕೆ ಸೊಸೆ, ಆಕೆ ತಾಯಿಯ ಬರ್ಬರ ಹತ್ಯೆ: ಪೊಲೀಸರ ಅತಿಥಿಯಾದ ಮೂವರು ಆರೋಪಿಗಳು..!

ಜಿಗಣಿ ಪಿಐ ಸುದರ್ಶನ್ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನಾರ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ನಂತರ ಆರೋಪಿಗಳು ಆಧಾರ್ ಕಾರ್ಡ್​ ಮೊಬೈಲ್ ಬಳಸದೇ ಮತ್ತು ಯಾವುದೇ ದಾಖಲೆಗಳು ಸಿಗದಂತೆ ಎಚ್ಚರ ವಹಿಸಿದ್ದರು. ಅಲ್ಲದೇ ಶಂಕರ್​ ಎಂದು ಹೆಸರು ಬದಲಿಸಿಕೊಂಡು ಮಹಾರಾಷ್ಟ್ರದಲ್ಲಿ ಪ್ರಿಯತಮೆ ಭಾಗ್ಯಶ್ರೀ ಜೊತೆ ಕೆಲಸಕ್ಕೆ ಸೇರಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಗರ್ಭಿಣಿಯ ಜೀವಂತವಾಗಿ ದಹಿಸಿದ ಕ್ರೂರಿ ಪ್ರಿಯಕರ: ಪ್ರಕರಣ ದಾಖಲು

ಇದನ್ನೂ ಓದಿ: 48ರ ಪ್ರಾಯದ ಮಹಿಳೆ ಮೇಲೆ 22 ವರ್ಷದ ಯುವಕನ ಕ್ರಶ್: ನಂಬರ್ ಬ್ಲಾಕ್ ಮಾಡ್ತೀನಿ ಅಂದಿದ್ದಕ್ಕೇ ಮರ್ಡರ್​ ಮಾಡಿದ ಕ್ಯಾಬ್ ಚಾಲಕ

Last Updated :Mar 18, 2023, 6:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.