ETV Bharat / state

ಸರ್ಕಾರಿ ವೈದ್ಯನ ವಿರುದ್ಧ ಲಂಚದ ಆರೋಪ... ಡಿಎಚ್​ಒ ಹೇಳಿದ್ದೇನು?

author img

By

Published : May 22, 2019, 8:03 PM IST

Updated : May 22, 2019, 8:32 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕೊಡದೇ ಇದ್ರೆ ಚಿಕಿತ್ಸೆ ಕೊಡಲ್ವಂತೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಒಂದು ಆಪರೇಷನ್ ಮಾಡಲು ನಾಲ್ಕೈದು ಸಾವಿರ ದುಡ್ಡು ಕೇಳ್ತಾರಂತೆ, ದುಡ್ಡು ಕೊಟ್ಟಿಲ್ಲ ಅಂದ್ರೆ ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾ ಮಹಿಳೆಯರಿಗೆ ಅವಾಜ್ ಹಾಕ್ತಾರೆ ಎಂಬ ಆರೋಪ ಮಾಡಲಾಗಿದೆ. ‌

ಸರ್ಕಾರಿ ಆಸ್ಪತ್ರೆ ವೈದ್ಯನ ಲಂಚವತಾರ..!

ಬೆಂಗಳೂರು: ಸರ್ಕಾರಿ ಆಸ್ಪತ್ರೆ ಬಡವರ ಪಾಲಿನ ದೇವಾಲಯವಿದ್ದಂತೆ. ಅಲ್ಲಿರುವ ವೈದ್ಯರು ದೇವರಿದ್ದಂತೆ. ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯರಿದ್ದಾರೆ. ಇವರಿಗೆ ಹಣ ಮಾಡುವುದೊಂದೇ ಕೆಲಸವಾಗಿ ಬಿಟ್ಟಿದೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿಯಾಗಬೇಕು, ಬಡವರಿಗೆ ಉಚಿತವಾಗಿ ಎಲ್ಲ ರೀತಿಯ ಚಿಕಿತ್ಸೆ ಸಿಗಬೇಕು ‌ಅಂತ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಹಾಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡೋ ವೈದ್ಯರಿಗೆ ಲಕ್ಷ ಲಕ್ಷ ಸಂಬಳ ನೀಡುತ್ತೆ. ಆದ್ರೆ ಅಷ್ಟು ಸಂಬಳ ತೆಗೆದುಕೊಳ್ಳೊ ವೈದ್ಯರು ಲಂಚ ಪಡೆಯುವುದನ್ನು ಮಾತ್ರ ಬಿಡಲ್ಲ. ಲಂಚ ಕೊಟ್ಟಿಲ್ಲ ಅಂದ್ರೆ ರೋಗಿಗಳಿಗೆ ಚಿಕಿತ್ಸೆ ಸಿಗೋದೆ ಇಲ್ಲ. ಈ ರೀತಿ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ.

ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಲಂಚದ ಆರೋಪ...!

ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರಿಗೆ ಸರ್ಕಾರದಿಂದಲೇ ಇಂತಿಷ್ಟು ದುಡ್ಡು ಕೊಡುತ್ತಾರೆ.‌ ಆದ್ರೆ, ಈ ವೈದ್ಯರೊಬ್ಬರು ಬಡವರಿಂದ ದುಡ್ಡು ವಸೂಲಿ ಮಾಡಿ ಶಸ್ತ್ರ ಚಿಕಿತ್ಸೆ ಮಾಡ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಆಶಾ ಕಾರ್ಯಕರ್ತೆಯರೊಬ್ಬರನ್ನು ಹಣ ವಸೂಲಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಎಷ್ಟು ದೂರುಗಳು ನೀಡಿದ್ರು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದಷ್ಟು ಬೇಗ ಈ ವೈದ್ಯನ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಈ ಬಗ್ಗೆ ಮಾತನಾಡಿರುವ ಡಿಎಚ್​ಒ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಎಫ್​​ಐಆರ್​ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಆರೋಪಿತ ವೈದ್ಯರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಸಿಕ್ಕಿಲ್ಲ.

.

Intro:KN_BNG_02_220519_Govt hospital_Bribe_Ambarish_7203301

Slug : ದುಡ್ಡು ಕೊಟ್ಟಿಲ್ಲ ಅಂದ್ರೆ ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ..!
ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಬಾಕ ವೈದ್ಯರ ಲಂಚವತಾರ..!

ಬೆಂಗಳೂರು: ಸರ್ಕಾರಿ ಆಸ್ಪತ್ರೆ ಬಡವರ ಪಾಲಿನ ದೇವಾಲಯವಿದ್ದಂತೆ.. ಅಲ್ಲಿರುವ ವೈದ್ಯರು ದೇವರಿದ್ದಂತೆ.... ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯರಿದ್ದಾರೆ.. ಇವರಿಗೆ ಹಣ ಮಾಡುವುದೊಂದೇ ಕಾತಜವಾಗಿಬಿಟ್ಟಿದೆ.. ಹಣ ಕೊಟ್ಟರೆ ಕೆಲಸವಾಗುತ್ತೆ.. ಇಲ್ಲ ಅಂದರೆ ಯಾವುದೇ ಕೆಲಸವಾಗುವುದಿಲ್ಲ.. ಇಷ್ಟಕ್ಕು ಇಂತಹ ಲಂಚಬಾಕ ವೈದ್ಯರು ಇರುವುದು ಎಲ್ಲಿ ಅಂತಿರ ಹಾಗಾದ್ರೆ ಈ ಸ್ಟೋರಿ ನೋಡಿ..

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವರ್ಷದಿಂದ ವರ್ಷಕ್ಕೆ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿಯಾಗಬೇಕು.. ಬಡವರಿಗೆ ಉಚಿತವಾಗಿ ಎಲ್ಲಾ ರೀತಿಯ ಚಿಕಿತ್ಸೆ ಸಿಗಬೇಕು‌ಅಂತ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಇನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡೋ ವೈದ್ಯರಿಗೆ ಲಕ್ಷ ಲಕ್ಷ ಸಂಬಳ ನೀಡುತ್ತೆ. ಆದ್ರೆ ಅಷ್ಟು ಸಂಬಳ ತಗೆದುಕೊಳ್ಳೊ ವೈದ್ಯರು ಲಂಚ ಪಡೆಯುವುದನ್ನು ಮಾತ್ರ ಬಿಡಲ್ಲ... ಲಂಚ ಕೊಟ್ಟಿಲ್ಲ ಅಂದ್ರೆ ರೋಗಿಗಳಿಗೆ ಚಿಕಿತ್ಸೆ ಸಿಗೋದೆ ಇಲ್ಲ.. ಇದು ನಡೆಯುತ್ತಿರುವುದು ಬೇರೆ ಎಲ್ಲೂ ಅಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ...

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕೊಡದೆ ಇದ್ರೆ ಚಿಕಿತ್ಸೆ ಕೊಡಲ್ವಾಂತೆ.... ಮಹಿಳೆಯರಿಗೆ ಮಕ್ಕಳು ಸಾಕು ಎನ್ನಿಸಿದಾಗ ಅಂತಿಮವಾಗಿ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ.. ಆದ್ರೆ ಆ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಮಾಡುತ್ತಾರೆ.. ಆದ್ರೆ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೋಹನ್ ದಾಸ್ ಎಂಬ ವೈದ್ಯನಿಗೆ ಒಂದು ಆಪರೇಷನ್ ಮಾಡಲು ನಾಲ್ಕೈದು ಸಾವಿರ ದುಡ್ಡು ಕೊಡಬೇಕಂತೆ... ದುಡ್ಡು ಕೊಟ್ಟಿಲ್ಲ ಅಂದ್ರೆ ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾ ಮಹಿಳೆಯರಿಗೆ ಅವಾಜ್ ಹಾಕ್ತಾರಂತೆ..‌ಇದೆಲ್ಲಾ ನೊಂದವರ ಮಾತು..

ಬೈಟ್ : ಲೀಲಾ,ನೊಂದ ಮಹಿಳೆ

ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಗೆ ಸರ್ಕಾರದಿಂದಲೇ ಇಂತಿಷ್ಟು ದುಡ್ಡು ಕೊಡುತ್ತಾರೆ..‌ ಆದ್ರೆ ಈ ವೈದ್ಯ ಬಡವರರಿಂದ ದುಡ್ಡು ವಸೂಲಿ ಮಾಡಿ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ.. ಇವರ ಲಂಚದ ದಾಹ ತೀರಿಸಿಕೊಳ್ಳಲು ಆಶಾ ಕಾರ್ಯಕರ್ತೆ ಯನ್ನು ಬಳಸಿಕೊಳ್ಳುತ್ತಾನೆ.. ಆಶಾ ಕಾರ್ಯಕರ್ತೆಯರು ಮಹಿಳೆಯರ ಬಳಿ ಲಂಚ ವಸೂಲಿ ಮಾಡಿ ನೀಡಿದ್ರೆ ನಂತರ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ... ಈ ಬಗ್ಗೆ ಎಷ್ಟು ದೂರುಗಳು ಬಂದ್ರೂ ಈ ವೈದ್ಯನನ್ನು ಯಾರು ಏನು ಮಾಡಿಕೊಳ್ಳಲು ಆಗುತ್ತಿಲ್ಲ...

ವೈದ್ಯರನ್ನು ನಾರಾಯಣ ಹರಿಗೆ ಹೋಲಿಕೆ ಮಾಡ್ತಾರೆ.. ಅದರಲ್ಲೂ ಸರ್ಕಾರಿ ವೈದ್ಯರು ಬಡವರ ಪಾಲಿಗೆ ದೇವರಾಗಿರ್ತಾರೆ.. ಅಂದ್ರೆ ಈ ರೀತಿ ಬಡವರ ಪಾಲಿಗೆ ದೇವರಾಗಬೇಕಾದ ಸರ್ಕಾರಿ ವೈದ್ಯರು ಯಮ ಆಗಿಬಿಟ್ಟಿದ್ದಾರೆ.... ಅದಷ್ಟು ಬೇಗ ಈ ವೈದ್ಯನ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.. ಇಲ್ಲ ಅಂದರೆ ವೈದ್ಯರ ಭ್ರಷ್ಟಾಚಾರಕ್ಕೆ ಮತ್ತಷ್ಟು ಅಮಾಯಕ ಜನರು ಬಲಿಯಾಗ್ತಾನೆ ಇರ್ತಾರೆ..

Body:NoConclusion:No
Last Updated :May 22, 2019, 8:32 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.