ETV Bharat / bharat

ಮತದಾನದ ವೇಳೆ ಇವಿಎಂ ಧ್ವಂಸ ಮಾಡಿರುವ ಆರೋಪ: ಬಿಜೆಪಿ ಶಾಸಕ ಪ್ರಶಾಂತ ಜಗದೇವ್ ಬಂಧನ - Lok Sabha Election 2024

author img

By ETV Bharat Karnataka Team

Published : May 26, 2024, 5:27 PM IST

ಲೋಕಸಭೆಯ ಚುನಾವಣೆ ಮೂರನೇ ಹಂತದ ಮತದಾನದ ವೇಳೆ ಒಡಿಶಾದ ಖೋರ್ಧಾ ಜಿಲ್ಲೆಯ ಮತಗಟ್ಟೆಯಲ್ಲಿ ಇವಿಎಂ ಹಾನಿಗೊಳಿಸಿರುವ ಆರೋಪದಡಿ ಬಿಜೆಪಿ ಶಾಸಕ ಪ್ರಶಾಂತ ಜಗದೇವ್ ಅವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

BJP MLA Prasanta Jagadev
ಬಿಜೆಪಿ ಶಾಸಕ ಪ್ರಶಾಂತ ಜಗದೇವ್ (ETV Bharat)

ಭುವನೇಶ್ವರ(ಒಡಿಶಾ): ಲೋಕಸಭೆಯ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಒಡಿಶಾದ ಖೋರ್ಧಾ ಜಿಲ್ಲೆಯ ಮತಗಟ್ಟೆಯಲ್ಲಿ ಇವಿಎಂ ಹಾನಿಗೊಳಿಸಿರುವ ಆರೋಪದಡಿ ಬಿಜೆಪಿ ಶಾಸಕ ಪ್ರಶಾಂತ ಜಗದೇವ್ ಅವರನ್ನು ಬಂಧಿಸಲಾಗಿದೆ.

ಚಿಲಿಕಾ ಶಾಸಕ ಬಿಜೆಪಿ ಅಭ್ಯರ್ಥಿ ಜಗದೇವ್ ಅವರು ತಮ್ಮ ಪತ್ನಿಯೊಂದಿಗೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದ್ದರು. ಈ ವೇಳೆ ಇವಿಎಂ ಧ್ವಂಸ ಮಾಡಿರುವ ಕುರಿತು ಕನೋರಿಪಟ್ನಾ ಬೂತ್‌ ಸಂಬಂಧಿತ ಅಧ್ಯಕ್ಷರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಜಗದೇವ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿದ್ದು, ವಿಚಾರಣೆ ಮುಂದುವರಿದಿದೆ.

ಶಾಸಕ ಪ್ರಶಾಂತ್ ಜಗದೇವ್ ಇವಿಎಂ ಧ್ವಂಸಗೊಳಿಸಿರುವುದನ್ನು ಖಂಡಿಸಿ ಆಡಳಿತಾರೂಢ ಬಿಜೆಡಿ ಸರ್ಕಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಆದರೆ ಶಾಸಕರ ವಿರುದ್ಧ ಬೇಕಂತಲೇ ಮಾಡಿರುವ ಷಡ್ಯಂತ್ರ ಇದಾಗಿದೆ. ಇದೊಂದು ರಾಜಕೀಯ ಪ್ರೇರಿತ ದೂರು ಎಂದು ಕೌಂರಿ ಪಟ್ಟಣದ ಗ್ರಾಮಸ್ಥರು ಆರೋಪಿಸಿದ್ದಾರೆ.

ಎರಡು ಬಾರಿ ಶಾಸಕ ಆಗಿರುವ ಪ್ರಶಾಂತ ಜಗದೇವ್ ಅವರು ಹಿಂದೆಯೂ ಬಿಜೆಪಿ ಬೆಂಬಲಿತ ಗುಂಪಿನ ಮೇಲೆ ಕಾರು ಹತ್ತಿಸಿ ಬಂಧನಕ್ಕೊಳಗಾಗಿದ್ದರು. ಮಾರ್ಚ್ 2022ರಲ್ಲಿ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಖೋರ್ಧಾದ ಬಾನಾಪುರ ಬ್ಲಾಕ್ ಕಚೇರಿಯ ಹೊರಗೆ ಸೇರಿದ್ದ ಬಿಜೆಪಿ ಬೆಂಬಲಿತ ಗುಂಪಿನ ಮೇಲೆ ಕಾರನ್ನು ಹತ್ತಿಸಿದ ಪರಿಣಾಮ 20 ಜನರು ಗಾಯಗೊಂಡಿದ್ದರು. ಕಾರು ಹತ್ತಿಸಿದ ಆರೋಪದಡಿ ಶಾಸಕ ಪ್ರಶಾಂತ ಜಗದೇವ್ ಅವರನ್ನು ಬಂಧಿಸಲಾಗಿತ್ತು. ಇದಾದ ನಂತರ ಅವರನ್ನು ಆಡಳಿತಾರೂಢ ಬಿಜೆಡಿಯಿಂದ ಉಚ್ಛಾಟಿಸಲಾಗಿತ್ತು.

ನಂತರ ಅವರು ಬಿಜೆಪಿ ಸೇರಿ 2024 ರ ವಿಧಾನಸಭಾ ಚುನಾವಣೆಗೆ ಖೋರ್ಧಾ ಕ್ಷೇತ್ರದಿಂದ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾದರು. ಇದರ ಮೊದಲು ಜಗದೇವ್ ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಡಿ ಟಿಕೆಟ್‌ ಪಡೆದು ಚಿಲಿಕಾ ಸ್ಥಾನದಿಂದ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಬಿಜೆಪಿ ಶಾಸಕ ಪ್ರಶಾಂತ್ ವಿರುದ್ಧ ಷಡ್ಯಂತ್ರ: ಆರೋಪ

ಬಿಜೆಪಿ ಶಾಸಕ ಅಭ್ಯರ್ಥಿ ಪ್ರಶಾಂತ್ ಜಗದೇವ್ ಅವರು ಬೋಲ್ಗಢ ಬ್ಲಾಕ್‌ನ ಕನೋರಿಪಟ್ನಾ ಬೂತ್‌ನಲ್ಲಿ ಮತ ಚಲಾಯಿಸುತ್ತಿದ್ದಾಗ ಇವಿಎಂ ಹಾನಿಗೊಳಗಾಗಿದೆ. ಪ್ರಶಾಂತ್ ವಿರುದ್ಧದ ಹೆಣೆದಿರುವ ಷಡ್ಯಂತ್ರ ಇದಾಗಿದೆ ಎಂದು ಮತಗಟ್ಟೆಯ ಮತದಾರರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ಆಯಾ ಮತಗಟ್ಟೆಯ ಅಧ್ಯಕ್ಷರು ಬೆಳಗ್ಗೆ ವಿವಿಧ ಮತದಾರರನ್ನು ನಿಂದಿಸಿದ್ದು, ಶಾಸಕರನ್ನು ಅದೇ ರೀತಿ ನಿಂದಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಮತಗಟ್ಟೆಯೊಳಗೆ ಸಂಸದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾಗ ಮತಗಟ್ಟೆಯಲ್ಲಿದ್ದ ಮತ್ತೊಬ್ಬರು ಉದ್ದೇಶಪೂರ್ವಕವಾಗಿ ಶಾಸಕರ ಇವಿಎಂ ಯಂತ್ರವನ್ನು ಕೆಡವಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಇದನ್ನೂಓದಿ:ಜ್ಯುವೆಲರ್ಸ್ ಶಾಪ್​ ಮೇಲೆ ಐಟಿ ದಾಳಿ; 26 ಕೋಟಿ ನಗದು, 90 ಕೋಟಿ ಮೌಲ್ಯದ ಸೊತ್ತು ವಶಕ್ಕೆ - IT raids in Nashik

ETV Bharat Logo

Copyright © 2024 Ushodaya Enterprises Pvt. Ltd., All Rights Reserved.