ETV Bharat / sports

ಅತಿ ಹೆಚ್ಚು ವಾರಗಳ ಕಾಲ ನಂ.1: ಫೆಡರರ್​ ಹಿಂದಿಕ್ಕಿ ವಿಶ್ವ ದಾಖಲೆ ಬರೆದ ನೊವಾಕ್ ಜೋಕೊವಿಕ್​

author img

By

Published : Mar 8, 2021, 4:44 PM IST

ನೊವಾಕ್​ ಜೋಕೊವಿಕ್​
ನೊವಾಕ್​ ಜೋಕೊವಿಕ್​

ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರುವ ಆಸ್ಟ್ರೇಲಿಯನ್ ಓಪನ್​ ಚಾಂಪಿಯನ್​ ಜೋಕೊವಿಕ್​ ಇಂದಿಗೆ ಒಟ್ಟು ವೃತ್ತಿ ಜೀವನದಲ್ಲಿ 311 ವಾರಗಳನ್ನು ಅಗ್ರ ಶ್ರೇಯಾಂಕದಲ್ಲಿ ಕಳೆದಿದ್ದಾರೆ. ಇದಕ್ಕೂ ಮುನ್ನ ಸ್ವಿಸ್​ ಸ್ಟಾರ್​ ರೋಜರ್ ಫೆಡರರ್​ 310 ವಾರಗಳ ಕಾಲ ಅಗ್ರ ಸ್ಥಾನದಲ್ಲಿದ್ದರು.

ಲಂಡನ್: ಸರ್ಬಿಯನ್ ಟೆನ್ನಿಸ್​ ತಾರೆ ನೊವಾಕ್ ಜೋಕೊವಿಕ್​ ಎಟಿಪಿ ರ‍್ಯಾಂಕಿಂಗ್​​ನಲ್ಲಿ 311 ವಾರಗಳ ಕಾಲ ನಂ.1 ಸ್ಥಾನ ಪೂರೈಸುವ ಮೂಲಕ ರೋಜರ್​ ಫೆಡರರ್​ ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದಾರೆ.

ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರುವ ಆಸ್ಟ್ರೇಲಿಯನ್ ಓಪನ್​ ಚಾಂಪಿಯನ್​ ಜೋಕೊವಿಕ್​ ಇಂದಿಗೆ ಒಟ್ಟು ವೃತ್ತಿ ಜೀವನದಲ್ಲಿ 311 ವಾರಗಳನ್ನು ಅಗ್ರ ಶ್ರೇಯಾಂಕದಲ್ಲಿ ಕಳೆದಿದ್ದಾರೆ. ಇದಕ್ಕೂ ಮುನ್ನ ಸ್ವಿಸ್​ ಸ್ಟಾರ್​ ರೋಜರ್ ಫೆಡರರ್​ 310 ವಾರಗಳ ಕಾಲ ಅಗ್ರ ಸ್ಥಾನದಲ್ಲಿದ್ದರು.

"ದಾಖಲೆ ಮುರಿದುಬಿದ್ದಿದೆ, ನೊವಾಕ್ ಜೋಕೊವಿಕ್ ಎಟಿಪಿ ರ‍್ಯಾಂಕಿಂಗ್​ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಮೊದಲ ಶ್ರೇಯಾಂಕದಲ್ಲಿದ್ದ ದಾಖಲೆಗೆ ಪಾತ್ರರಾಗಿದ್ದಾರೆ" ಎಂದು ಎಟಿಪಿ ಟೂರ್​ ತನ್ನ ಅಧಿಕೃತ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ನೊವಾಕ್​ ಜೋಕೊವಿಕ್​

33 ವರ್ಷದ ಜೋಕೊವಿಕ್​ ಮೊದಲ ಬಾರಿಗೆ 2011ರಲ್ಲಿ ಅಗ್ರಶ್ರೇಯಾಂಕ ಪಡೆದಿದ್ದರು. 2020ರ ಕೊನೆಯಲ್ಲಿ ನಂಬರ್​ ಒನ್​ ಸ್ಥಾನ ಪಡೆಯುವ ಮೂಲಕ 6ನೇ ಬಾರಿ ಅಗ್ರ ಶ್ರೇಯಾಂಕಿತ ಆಟಗಾರನಾಗಿ ಕ್ಯಾಲೆಂಡರ್​ ವರ್ಷ ಪೂರ್ಣಗೊಳಿಸಿದ್ದರು.

ಈ ವರ್ಷದ ಆರಂಭದಲ್ಲಿ ಜೋಕೊವಿಕ್​ 9ನೇ ಬಾರಿ ಆಸ್ಟ್ರೇಲಿಯನ್ ಓಪನ್​ ಗೆಲ್ಲುವ ಮೂಲಕ ವೃತ್ತಿ ಜೀವನದ 18ನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಅತಿ ಹೆಚ್ಚು ವಾರಗಳ ಕಾಲ ನಂಬರ್​ 1 ಶ್ರೇಯಾಂಕದಲ್ಲಿದ್ದವರು:

  • ನೊವಾಕ್ ಜೊಕೊವಿಕ್ 311
  • ರೋಜರ್ ಫೆಡರರ್ 310
  • ಪೀಟ್ ಸಂಪ್ರಾಸ್ 286
  • ಇವಾನ್ ಲೆಂಡ್ಲ್ 270
  • ಜಿಮ್ಮಿ ಕಾನರ್ಸ್ 268
  • ರಾಫೆಲ್ ನಡಾಲ್ 209
  • ಜಾನ್ ಮೆಕೆನ್ರೋ 170
ETV Bharat Logo

Copyright © 2024 Ushodaya Enterprises Pvt. Ltd., All Rights Reserved.