ETV Bharat / sports

ಖೇಲ್​ ರತ್ನ ಪ್ರಶಸ್ತಿಗೆ ಅಂಜುಮ್​ ಮೌಡ್ಗಿಲ್ ಹೆಸರು ಶಿಫಾರಸು

author img

By

Published : May 14, 2020, 2:58 PM IST

ಅಂಜುಮ್​ ಮೌಡ್ಗಿಲ್​​​ ಭೋಪಾಲ್​ನಲ್ಲಿ ನಡೆದಿದ್ದ ನ್ಯಾಷನಲ್​ ಶೂಟಿಂಗ್​ ಚಾಂಪಿಯನ್​ಶಿಪ್​ನಲ್ಲಿ 50 ಮೀಟರ್​ 3ಪಿ ಇವೆಂಟ್​ನಲ್ಲಿ ಚಾಂಪಿಯನ್​ ಆಗಿದ್ದರು.

ನ್ಯಾಷನಲ್​ ರೈಫೈಲ್​ ಅಸೋಸಿಯೇಷನ್​ ಆಫ್​ ಇಂಡಿಯಾ
ನ್ಯಾಷನಲ್​ ರೈಫೈಲ್​ ಅಸೋಸಿಯೇಷನ್​ ಆಫ್​ ಇಂಡಿಯಾ

ನವದೆಹಲಿ: ನ್ಯಾಷನಲ್​ ರೈಫೈಲ್​ ಅಸೋಸಿಯೇಷನ್​ ಆಫ್​ ಇಂಡಿಯಾ(NRAI) ಅಂಜುಮ್​ ಮೌಡ್ಗಿಲ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್​ ರತ್ನಕ್ಕೆ ಹಾಗೂ ಜಸ್ಪಾಲ್​ ಸಿಂಗ್​ರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ.

10 ಮೀಟರ್​ ರೈಫಲ್​ ವಿಶ್ವ ಚಾಂಪಿಯನ್​ ಸೌರಭ್​ ಚೌಧರಿ ಹಾಗೂ ಅಭಿಷೇಕ್​​​​​ ವರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

26 ವರ್ಷದ ಮೌಡ್ಗಿಲ್ ​2008ರಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಇವರು ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಮೊದಲ ಎರಡು ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಇವರು 2008ರ ISSF ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಕಳೆದ ವರ್ಷ ಬೀಜಿಂಗ್​ನಲ್ಲಿ ನಡೆಸಿದ್ದ ವಿಶ್ವಚಾಂಪಿಯನ್​ಶಿಪ್​ನಲ್ಲಿ ದಿವ್ಯಾನ್ಶ್​​ ಸಿಂಗ್​ ಪನ್ವರ್​ ಜೊತೆ 10 ಮೀಟರ್​ ಏರ್​ ರೈಫಲ್ಸ್​ನಲ್ಲೂ ಚಿನ್ನದ ಪದ ಗೆದ್ದಿದ್ದರು.

ಕಳೆದ ಡಿಸೆಂಬರ್​ನಲ್ಲಿ ಭೂಪಾಲ್​ನಲ್ಲಿ ನಡೆದಿದ್ದ ನ್ಯಾಷನಲ್​ ಶೂಟಿಂಗ್​ ಚಾಂಪಿಯನ್​ಶಿಪ್​ನಲ್ಲಿ 50 ಮೀಟರ್​ 3ಪಿ ಇವೆಂಟ್​ನಲ್ಲಿ ಚಾಂಪಿಯನ್​ ಆಗಿದ್ದರು.

ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ 7.5 ಲಕ್ಷ ನಗದು, ಮೆಡಲ್​ ಹಾಗೂ ಅರ್ಜುನ ಪ್ರಶಸ್ತಿಗೆ 5ಲಕ್ಷ ನಗದಿನ ಜೊತೆಗೆ ಮೆಡಲ್​ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.