ETV Bharat / sports

ವಿಶ್ವ ದಾಖಲೆಯ 6,6,6,6,6,6ಕ್ಕೆ 15 ವರ್ಷ! ಮಗನೊಂದಿಗೆ ಸಿಕ್ಸರ್‌ ವೀಕ್ಷಿಸಿದ ಯುವಿ

author img

By

Published : Sep 19, 2022, 11:24 AM IST

Updated : Sep 19, 2022, 12:59 PM IST

Yuvraj Singh sixes
Yuvraj Singh sixes

ಅಂದು ಸ್ಟುವರ್ಟ್​ ಬ್ರಾಡ್​ ಎಸೆದ ಓವರ್​​ನ ಎಲ್ಲ ಎಸೆತಗಳನ್ನೂ ಸಿಕ್ಸರ್​ಗಟ್ಟಿದ್ದ ಯುವರಾಜ್ ಸಿಂಗ್ ಕ್ರಿಕೆಟ್​ ದುನಿಯಾದಲ್ಲಿ​ ಹೊಸ ದಾಖಲೆ ಬರೆದಿದ್ದರು. ಆ ಸಾಧನೆಗೀಗ 15 ವರ್ಷ.

2007ರ ಐಸಿಸಿ ಟಿ20 ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ವೇಗಿ ಸ್ಟುವರ್ಟ್​ ಬ್ರಾಡ್​ ಎಸೆದ ಓವರ್​ನ ಎಲ್ಲ ಎಸೆತಗಳನ್ನು ಸಿಕ್ಸರ್​​ಗಟ್ಟಿದ್ದ ಯುವರಾಜ್​ ಸಿಂಗ್​ ಕ್ರಿಕೆಟ್​ ದುನಿಯಾದಲ್ಲಿ ಹೊಸದೊಂದು ದಾಖಲೆ ಬರೆದಿದ್ದರು. ಇದರ ಜೊತೆಗೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕದ ಸಾಧನೆಯನ್ನೂ ಅವರು ಮಾಡಿದ್ದರು. ಈ ಐತಿಹಾಸಿಕ ಸಾಧನೆಗೀಗ 15 ವರ್ಷ ತುಂಬುತ್ತಿದೆ.

ಮಗ ಓರಿಯನ್ ಜೊತೆ ಕುಳಿತುಕೊಂಡು ತಾವು ಸಿಡಿಸಿದ ಸಿಕ್ಸರ್‌ಗಳ ವಿಡಿಯೋ ವೀಕ್ಷಣೆ ಮಾಡಿರುವ ಯುವರಾಜ್​​ ಸಿಂಗ್, ಈ ಸಂಭ್ರಮಾಚರಣೆಗೆ ಇವನಿಗಿಂತಲೂ ಉತ್ತಮ ಪಾಲುದಾರ ಬೇಕಿಲ್ಲ ಎಂದು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗೊಂದಲಕ್ಕೆ ತೆರೆ: ಈ ಪ್ಲೇಯರ್​​ ನನ್ನೊಂದಿಗೆ ಇನ್ನಿಂಗ್ಸ್ ಆರಂಭಿಸ್ತಾರೆಂದ ರೋಹಿತ್

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹರ್ಷಲ್​ ಗಿಬ್ಸ್​ ಬಳಿಕ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿರುವ 2ನೇ ಬ್ಯಾಟರ್​ ಆಗಿ ಯುವಿ ಹೊರಹೊಮ್ಮಿದ್ದರು. ಸೆಪ್ಟೆಂಬರ್​​ 19, 2007ರಂದು ಟಿ20 ವಿಶ್ವಕಪ್​​ನಲ್ಲಿ ಈ ಘಟನೆ ನಡೆದಿತ್ತು. ಆಂಡ್ರ್ಯೂ ಫ್ಲಿಂಟಾಫ್​ ಜೊತೆಗಿನ ವಾಗ್ವಾದದ ಬಳಿಕ ಕೆರಳಿದ ಯುವಿ, ಸ್ಟುವರ್ಟ್​ ಬ್ರಾಡ್​ ಎಸೆದ ಅಂತಿಮ ಓವರ್​​ನಲ್ಲಿ ಆರು ಸಿಕ್ಸರ್​ ಬಾರಿಸಿದ್ದರು. ಜೊತೆಗೆ, ಟಿ20 ಕ್ರಿಕೆಟ್​​ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿ, ವಿಶ್ವದಾಖಲೆ ನಿರ್ಮಿಸಿದ್ದರು.

ದಕ್ಷಿಣ ಆಫ್ರಿಕಾದ ಡರ್ಬನ್​ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಯುವರಾಜ್​ ಸಿಂಗ್​ ಕೇವಲ 14 ಎಸೆತಗಳಲ್ಲಿ ಮೂರು ಬೌಂಡರಿ, ಏಳು ಸಿಕ್ಸರ್​ ಸೇರಿದಂತೆ ಅಜೇಯ 58ರನ್​​​ಗಳಿಕೆ ಮಾಡಿದ್ದರು. ಪಂದ್ಯದಲ್ಲಿ ಇಂಗ್ಲೆಂಡ್​ ಪ್ರಬಲ ಪೈಪೋಟಿಯ ಹೊರತಾಗಿ 18 ರನ್​​​ಗಳ ಅಂತರದ ಸೋಲು ಕಂಡಿತ್ತು. ಈ ಹಣಾಹಣಿಯ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತ್ತು.

Last Updated :Sep 19, 2022, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.