ETV Bharat / sports

No Ball: ಭಾರತಕ್ಕೆ ನೆರವಾದ ಕಮಿನ್ಸ್​ ನೋಬಾಲ್​; ಲಗಾನ್​ ಸಿನಿಮಾ ವಿಡಿಯೋ ಬಳಸಿ ನೆಟ್ಟಿಗರಿಂದ ಟ್ರೋಲ್‌ ದಾಳಿ

author img

By

Published : Jun 9, 2023, 7:52 PM IST

Etv Bharat
Etv Bharat

ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್​ ನೋಬಾಲ್​​ಗಾಗಿ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 6 ನೋಬಾಲ್​ಗಳನ್ನು ಹಾಕಿದ್ದರು.

ಒವೆಲ್​ (ಲಂಡನ್​): ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಪ್ಯಾಟ್​ ಕಮಿನ್ಸ್​ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಭಾರತದ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್​ ಠಾಕೂರ್ ಜೊತೆಯಾಟದ ನೆರವಿನಿಂದ ಭಾರತ ಮೂರನೇ ದಿನ ಸ್ವಲ್ಪ ಚೇತರಿಕೆ ಕಂಡುಕೊಂಡಿದ್ದು ಫಾಲೋ ಆನ್‌​ ಭೀತಿಯಿಂದ ತಪ್ಪಿಸಿಕೊಂಡಿತು.

ಆದರೆ ಈ ನಡುವೆ, ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್​ ನೋಬಾಲ್​ಗಾಗಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಆಸ್ಟ್ರೇಲಿಯಾ ತಂಡ ಇದುವರೆಗೆ 8 ನೋಬಾಲ್​ಗಳನ್ನು ಹಾಕಿದರೆ ಅದರಲ್ಲಿ 6 ಕಮಿನ್ಸ್​ ಅವರದ್ದೇ ಇದೆ. ಪ್ಯಾಟ್​ ಅವರ ನೋಬಾಲ್​ ಭಾರತಕ್ಕೆ ಎರಡು ಜೀವದಾನ ನೀಡಿದೆ. ನಿನ್ನೆ ಅಜಿಂಕ್ಯ ರಹಾನೆ ವಿಕೆಟ್​ ತಪ್ಪಿದರೆ, ಇಂದು ಶಾರ್ದೂಲ್​ ಠಾಕೂರ್​ ಅವರ ವಿಕೆಟ್​ ಉಳಿದಿದೆ.

  • Final prep in Sydney before flying out to England in a couple of days. All the boys buzzing for the Uk trip. Huge few months coming up 💪🏼 🏏

    P.s. yes I know this is a no ball 🤦🏼‍♂️ @newbalance pic.twitter.com/rSF9WqOxJU

    — Pat Cummins (@patcummins30) May 23, 2023 " class="align-text-top noRightClick twitterSection" data=" ">

ಟ್ರೋಲ್ ಏಕೆ?: ಆಸ್ಟ್ರೇಲಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮುಗಿದ ನಾಲ್ಕು ದಿನದಲ್ಲಿ ಆ್ಯಶಸ್​ ಸರಣಿಗೆ ಆಡಲಿದೆ. ಇದಕ್ಕಾಗಿ ಕಾಂಗರೂ ಪಡೆ ಇನ್ನು ಕೆಲವು ತಿಂಗಳು ಇಂಗ್ಲೆಂಡ್​ನಲ್ಲೇ ಇರಲಿದ್ದಾರೆ. ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ಆ್ಯಶಸ್​ ಸರಣಿಗಾಗಿ ಆಸಿಸ್​ ಆಟಗಾರರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಹೀಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್​ಗೆ ದೊಡ್ಡ ಪ್ರವಾಸವನ್ನೇ ಕೈಗೊಂಡಿದೆ. ಈ ಪ್ರವಾಸಕ್ಕೂ ಮೊದಲು ಪ್ಯಾಟ್​ ಕಮಿನ್ಸ್​ ತಮ್ಮ ಟ್ವಿಟರ್​ನಲ್ಲಿ ಒಂದು ಪೋಸ್ಟ್​ ಮಾಡಿದ್ದರು. ಅದರಲ್ಲಿ "ಒಂದೆರಡು ದಿನಗಳಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವ ಮೊದಲು ಸಿಡ್ನಿಯಲ್ಲಿ ಅಂತಿಮ ತಯಾರಿ. ಎಲ್ಲ ಹುಡುಗರು ಯುಕೆ ಪ್ರವಾಸಕ್ಕಾಗಿ ತಯಾರಾಗುತ್ತಿದ್ದಾರೆ" ಎಂದು ಬರೆದುಕೊಂಡಿದ್ದರು. ಅದರಲ್ಲಿ ಅವರು ಸಿಡ್ನಿ ಪಿಚ್​ನಲ್ಲಿ ಬೌಲಿಂಗ್​ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಶೂ ಒಂದರ ಜಾಹೀರಾತು ಮಾಡಿದ್ದಾರೆ. ಆದರೆ ಅವರು ಮಾಡಿದ್ದು​ ನೋಬಾಲ್​ ಆಗಿತ್ತು. ಅವರು ವಿಡಿಯೋ ಕ್ಯಾಪ್ಶನ್​ನಲ್ಲಿ "ಇದು ನೋಬಾಲ್​ ಎಂದು ತಿಳಿದಿದೆ" ಎಂದೂ ಬರೆದುಕೊಂಡಿದ್ದರು.

ಆದರೆ ಈಗ ಅವರು ಸತತ ನೋಬಾಲ್‌ ಗಳನ್ನು ಮಾಡುತ್ತಿರುವುದರಿಂದ ಟ್ವಿಟರ್​ನಲ್ಲಿ ನೋಬಾಲ್ ಎಂಬ ಟ್ರೆಂಡಿಂಗ್​ ಆಗಿದೆ. ಅಲ್ಲದೇ ಅವರ ವಿಡಿಯೋವನ್ನು ಶೇರ್​ ಮಾಡಿ ನೋಬಾಲ್​ ಹಾಕುವುದನ್ನು ಕಮಿನ್ಸ್​ ಅಭ್ಯಾಸ ಮಾಡುತ್ತಿದ್ದರು ಎಂದು ಕಾಲೆಳೆಯುತ್ತಿದ್ದಾರೆ. ಇನ್ನೂ ಕೆಲವರು ಭಾರತದ ಸಂಕಷ್ಟದ ಪರಿಸ್ಥಿತಿ ಹಾಗೂ ಕಮಿನ್ಸ್​ ನೋಬಾಲ್​ ಎರಡನ್ನೂ ಲಗಾನ್​ ಸಿನಿಮಾಕ್ಕೆ ಹೋಲಿಸುತ್ತಿದ್ದಾರೆ.

ಲಗಾನ್​ ಸಿನಿಮಾದಲ್ಲಿ ಗೆಲುವಿಗೆ ಕೆಲವೇ ರನ್​ ಬೇಕಿದ್ದಾಗ ಅಮೀರ್​ ಖಾನ್​ ವಿಕೆಟ್​ ಹೋಗುತ್ತದೆ ಎಂದಾದಾಗ ಅಂಪೈರ್​ ನೋಬಾಲ್​ ಎಂದು ನೀಡಿದ್ದನ್ನು ಮತ್ತು ಅದರಲ್ಲಿ ಅಮೀರ್​ ಖಾನ್​ ಅವರ ನಟನೆಯ ವಿಡಿಯೋ ವೈರಲ್​ ಆಗುತ್ತಿದೆ. ಇದಕ್ಕೆ ಕಾರಣ ನಿನ್ನೆ ಅಜಿಂಕ್ಯ ರಹಾನೆ ಮತ್ತು ಇಂದು ಶಾರ್ದೂಲ್​ ಠಾಕೂರ್​ ಅವರ ವಿಕೆಟ್​ ಅವರ ನೋಬಾಲ್​ನಿಂದಾಗಿ ಉಳಿದುಕೊಂಡಿದೆ. ಅಲ್ಲದೇ ಇದು ಎರಡೂ ವಿಕೆಟ್​ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದೆ.

ರಿವ್ಯೂ​ ಅದೃಷ್ಠ: ನಿನ್ನೆ ಅಜಿಂಕ್ಯಾ ರಹಾನೆ ಮತ್ತು ಇವತ್ತು ಶಾರ್ದೂಲ್​ ಠಾಕೂರ್​ ಮೂರನೇ ಅಂಪೈರ್​ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಔಟ್​​ ಆಗಿ ಪೆವಿಲಿಯನ್​ ಹಾದಿಹಿಡಿಯ ಬೇಕಿತ್ತು. ಎರಡೂ ಬಾರಿ ಭಾರತ ರಿವ್ಯೂ​ ತೆಗೆದುಕೊಂಡಿದ್ದರಿಂದ ಇಬ್ಬರು ಬ್ಯಾಟರ್​ಗಳು ಉತ್ತಮ ರನ್​ ಕೊಡುಗೆ ನೀಡಲು ಸಾಧ್ಯವಾಯಿತು. ​

ಇದನ್ನೂ ಓದಿ: WTC Final: ಭಾರತಕ್ಕೆ ರಹಾನೆ- ಶಾರ್ದೂಲ್​ ಬಲ, 296 ರನ್‌ಗಳಿಗೆ ಆಲೌಟ್​; ಆಸ್ಟ್ರೇಲಿಯಾಕ್ಕೆ 173 ರನ್‌ಗಳ​ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.