ETV Bharat / sports

ಭಾರತೀಯ ಪತ್ರಕರ್ತನ ಮೊಬೈಲ್​ ಕಸಿದ ಪಾಕ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷ: ವಿಡಿಯೋ

author img

By

Published : Sep 12, 2022, 8:11 PM IST

ಏಷ್ಯಾ ಕಪ್​ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಕುದಿಯುತ್ತಿದೆ. ಪಾಕ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷ ರಮಿಜ್​ ರಾಜಾ ವರ್ತನೆಯೇ ಇದಕ್ಕೆ ಸಾಕ್ಷಿ. ಭಾರತೀಯ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಲಾಗದೇ ರಮಿಜ್​ ರಾಜಾ ಆತನ ಮೊಬೈಲ್​ ಕಸಿಯಲು ಹೋದ ಪ್ರಸಂಗ ನಡೆದಿದೆ.

chairman-ramiz-raja-snatches-indian-journalists-phone
ಭಾರತೀಯ ಪತ್ರಕರ್ತನ ಮೊಬೈಲ್​ ಕಸಿದ ಪಾಕ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷ

ಹೈದರಾಬಾದ್: ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಏಷ್ಯಾ ಕಪ್​ ಕೈ ಚೆಲ್ಲಿದ ಬಗ್ಗೆ ಭಾರತೀಯ ಪತ್ರಕರ್ತನ ಪ್ರಶ್ನೆಯಿಂದ ಕುಪಿತಗೊಂಡ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ರಮೀಜ್​ ರಾಜಾ ಆ ಪತ್ರಕರ್ತನ ಫೋನ್ ಕಸಿದುಕೊಳ್ಳಲು ಮುಂದಾದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಿಸಿಬಿ ಅಧ್ಯಿಕ್ಷನ ವಿರುದ್ಧ ಟೀಕೆ ವ್ಯಕ್ತವಾಗಿದೆ.

"ಏಷ್ಯಾ ಕಪ್​ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋತಿದೆ. ಈ ಬಗ್ಗೆ ಪಾಕಿಸ್ತಾನದ ಜನರಿಗೆ ಏನು ಉತ್ತರಿಸುತ್ತೀರಿ" ಎಂದು ಭಾರತೀಯ ಪತ್ರಕರ್ತ ಪ್ರಶ್ನಿಸುತ್ತಾನೆ. ಇದರಿಂದ ಕೋಪಗೊಂಡ ರಮಿಜ್​ ರಾಜಾ "ನೀವು ಭಾರತೀಯ ಜರ್ನಲಿಸ್ಟೇ" ಎಂದು ಮರು ಪ್ರಶ್ನಿಸಿ, ಆತನ ಪ್ರಶ್ನೆಗೆ ಉತ್ತರಿಸಿದೇ ಕೈಯಲ್ಲಿದ್ದ ಮೊಬೈಲ್​ ಅನ್ನು ಕಸಿದುಕೊಳ್ಳಲು ಯತ್ನ ನಡೆಸಿದರು.

  • Reaction of PCB chairman Ramiz Raja after Pakistan lose Asia Cup 2022 and looked at the reply of PCB chairman on Journalist. pic.twitter.com/3u8TLdxYNm

    — CricketMAN2 (@ImTanujSingh) September 11, 2022 " class="align-text-top noRightClick twitterSection" data=" ">

ಪಾಕಿಸ್ತಾನ ಸೋತರೂ ಉತ್ತಮವಾಗಿ ಆಡಿದೆ. ಈ ಬಗ್ಗೆ ಸಂತೋಷ ಪಡಬೇಕು. ಆಟದಲ್ಲಿ ಸೋಲು ಗೆಲುವು ಸಹಜ ಎಂದು ಬಳಿಕ ಮಾಧ್ಯಮದವರಿಗೆ ಉತ್ತರಿಸಿದರು.

ಈ ಘಟನೆಯನ್ನು ಭಾರತೀಯ ಪತ್ರಕರ್ತ ಟ್ವಿಟ್ಟರ್​ನಲ್ಲಿ ವಿಡಿಯೋ ಸಮೇತ ಹರಿಬಿಟ್ಟಿದ್ದಾರೆ. "ನನ್ನ ಪ್ರಶ್ನೆಯೇ ತಪ್ಪಾಗಿತ್ತೆ?. ಪಾಕಿಸ್ತಾನದ ಅಭಿಮಾನಿಗಳು ಸೋಲಿನಿಂದ ಕೋಪಗೊಂಡಿಲ್ಲವೆ?. ಕ್ರಿಕೆಟ್​ ಮಂಡಳಿಯ ಅಧ್ಯಕ್ಷರಾಗಿ ನೀವು ಇದನ್ನು ಮಾಡುವುದು ಸರಿಯೇ?. ನೀವು ನನ್ನ ಫೋನ್ ಕಸಿಯಬಾರದಿತ್ತು. ಈ ವರ್ತನೆ ಸರಿಯಲ್ಲ ಅಧ್ಯಕ್ಷರೇ" ಎಂದು ಟ್ವೀಟಿಸಿದ್ದಾರೆ.

ಇನ್ನು ಭಾನುವಾರ ನಡೆದ ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಶ್ರೀಲಂಕಾದ ಬೌಲರ್​ಗಳನ್ನು ಎದುರಿಸಲಾಗದೇ ಸೋಲೊಪ್ಪಿಕೊಂಡರು. ಈ ಮೂಲಕ ಶ್ರೀಲಂಕಾ ಆರನೇ ಬಾರಿಗೆ ಏಷ್ಯಾ ಕಪ್​ ಎತ್ತಿ ಹಿಡಿಯಿತು. 10 ವರ್ಷಗಳ ಬಳಿಕ ಏಷ್ಯಾ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪಾಕ್​ಗೆ ಭಾರೀ ನಿರಾಸೆ ಮೂಡಿತು. ಪಾಕಿಸ್ತಾನ ಫೈನಲ್​ನಲ್ಲಿ 24 ರನ್‌ಗಳಿಂದ ಸೋತಿತು.

ಓದಿ: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ: ಜಸ್ಪ್ರೀತ್​, ಹರ್ಷಲ್​ ಕಮ್​ಬ್ಯಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.