ETV Bharat / sports

ಯೋ - ಯೋ ಫಲಿತಾಂಶ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ವಿರಾಟ್; ಬಿಸಿಸಿಐ ಆಕ್ಷೇಪ?

author img

By ETV Bharat Karnataka Team

Published : Aug 25, 2023, 2:20 PM IST

Virat Kohli
Virat Kohli

Virat Kohli yo yo test report on Social Media: ಸಾಮಾಜಿಕ ಜಾಲತಾಣದಲ್ಲಿ ಯೋ-ಯೋ ಪರೀಕ್ಷೆಯ ಫಲಿತಾಂಶ ಪ್ರಕಟಿಸಿರುವುದು ಬಿಸಿಸಿಐ ಒಪ್ಪಂದದ ನಿಯಮ ಉಲ್ಲಂಘನೆ ಎಂದು ಅಧಿಕಾರಿಗಳು ವಿರಾಟ್​ ವಿರುದ್ಧ ಆರೋಪಿಸಿದ್ದಾರೆ.

ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ)ಯಲ್ಲಿ ಏಷ್ಯಾಕಪ್​ಗೆ ಭಾರತ ತಂಡ ತಯಾರಿ ನಡೆಸಲಾಗುತ್ತಿದೆ. ಆಗಸ್ಟ್​ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಏಷ್ಯಾಕಪ್​ 2023 ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸಪ್ಟೆಂಬರ್​ 2 ರಂದು ಲಂಕಾದ ಕ್ಯಾಂಡಿ ಮೈದಾನದಲ್ಲಿ ಪಾಕಿಸ್ತಾನದ ಜೊತೆಗೆ ಆಡಲಿದೆ.

  • BCCI designed a program chart during the 2 week break for players who weren't part of the IRE series [The Indian Express]

    - 9 hours of sleep
    - Gym
    - Walking
    - Yoga
    - Swimming
    - Certain amounts of protein daily

    BCCI wants all players to be fit for the next 3 months. pic.twitter.com/doHZanVlUc

    — Johns. (@CricCrazyJohns) August 24, 2023 " class="align-text-top noRightClick twitterSection" data=" ">

ಬೆಂಗಳೂರಿನ ಶಿಬಿರಕ್ಕೆ ಪ್ರಕಟಿತ ಏಷ್ಯಾಕಪ್​ ತಂಡದ ಆಟಗಾರರು ಬಂದು ಈಗಾಗಲೇ ಸೇರಿದ್ದಾರೆ. ಅಲ್ಲಿ ಅವರಿಗೆ ಫಿಟ್​ನೆಸ್​ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಶಿಬಿರದ ಮೊದಲ ದಿನ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಪರೀಕ್ಷಿಸಲಾಗಿದೆ. ಯೋ-ಯೋ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರು ಪಾಸ್​ ಆಗಿದ್ದಾರೆ. ಬಿಸಿಸಿಐ 16 ಅಂಕವನ್ನು ಯೋ-ಯೋ ಪರೀಕ್ಷೆಗೆ ಸೆಟ್​ ಮಾಡಿದೆ.

  • Updates on Team India's Yo-Yo Test:- (PTI)

    •Mandated Yo-Yo parameter - 16.5
    •Kohli, Rohit, Hardik & others passed the Test.
    •Bumrah, Samson, Tilak, Krishna join team on Friday.
    •KL Rahul part of fitness drill but Not Yo-Yo Test.
    •Camp is scheduled to conclude on 29th Aug. pic.twitter.com/hwqP4BVWGH

    — CricketMAN2 (@ImTanujSingh) August 24, 2023 " class="align-text-top noRightClick twitterSection" data=" ">

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ವಿರಾಟ್ ಕೊಹ್ಲಿ ತಮ್ಮ ಸ್ಕೋರ್ ಅನ್ನು ಇನ್​ಸ್ಟಾಗ್ರಾಮ್​ನ ಸ್ಟೋರಿಯಲ್ಲಿ ಯೋ-ಯೋ ಟೆಸ್ಟ್​​ನಲ್ಲಿ 17.2 ಅಂಕ ಸಿಕ್ಕಿರುವುದಾಗಿ ಪೋಸ್ಟ್​ ಮಾಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಮಂಡಳಿಯ ಅಧಿಕಾರಿಗಳು ವಿರಾಟ್ ಕೊಹ್ಲಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೊಹ್ಲಿ ವಿರುದ್ಧವೂ ಕೆಲವು ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಹಿರಿಯ ಅಧಿಕಾರಿಗಳು ತಿಳಿಸಿರುವಂತೆ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಆಟಗಾರರು ಗೌಪ್ಯತೆಯ ನಿಯಮವನ್ನು ಅನುಸರಿಸಿ ಪೋಸ್ಟ್​ಗಳನ್ನು ಮಾಡಬೇಕು. ತರಬೇತಿಯ ಸಮಯದಲ್ಲಿ ಅವರ ವೈಯುಕ್ತಿಕ ಚಿತ್ರಗಳನ್ನು ಪೋಸ್ಟ್​ ಮಾಡಲು ಅಭ್ಯಂತರ ವಿಲ್ಲ. ಆದರೆ ಯಾವುದೇ ಸ್ಕೋರ್​ ಅಥವಾ ವರದಿಗಳನ್ನು ಹಂಚಿಕೊಳ್ಳುವಂತಿಲ್ಲ ಎಂದಿದೆ. ಈ ಒಪ್ಪಂದದ ಪ್ರಕಾರ ವಿರಾಟ್​ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದಕ್ಕಾಗಿ ಕ್ರಮ ಜರುಗಿಸ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಷ್ಯಾಕಪ್​ಗೂ ಮುನ್ನ ಫಿಟ್​ನೆಸ್​​ ಮತ್ತು ಪಂದ್ಯದ ತಯಾರಿಗಾಗಿ ಎನ್​ಸಿಎಯಲ್ಲಿ ನಿನ್ನೆಯಿಂದ (ಆಗಸ್ಟ್​ 24) ಶಿಬಿರ ಆರಂಭವಾಗಿದೆ. ತಂಡದಲ್ಲಿ ಗಾಯದ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲು ಫಿಟ್​ನೆಸ್​ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ಶಿಬಿರ 6 ದಿನಗಳ ಕಾಲ ನಡೆಯಲಿದೆ. 31 ರಂದು ಭಾರತ ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ಏಷ್ಯಾಕಪ್​ ನಂತರ ಭಾರತ ತಂಡ ಆಸ್ಟ್ರೇಲಿಯಾದ ಜೊತೆಗೆ ಏಕದಿನ ಸರಣಿ ಆಡಲಿದೆ. ಅದರ ನಂತರ ಭಾರತದಲ್ಲೇ 2023ರ ಏಕದಿನ ವಿಶ್ವಕಪ್​ನ ಪಂದ್ಯಗಳು ಆರಂಭವಾಗಲಿದೆ. ಸತತ ಪಂದ್ಯಗಳನ್ನು ಆಡಲಿರುವ ಕಾರಣ ತಂಡದ ಫಿಟ್​ನೆಸ್​ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಇದನ್ನೂ ಓದಿ: ವಿಶ್ವ ಚೆಸ್​ ಚಾಂಪಿಯನ್​ಶಿಪ್​: ಪ್ರಜ್ಞಾನಂದಗೆ ವಿಡಿಯೋ ಕಾಲ್​ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಂ ಸ್ಟಾಲಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.