ETV Bharat / sports

ದ.ಆಫ್ರಿಕಾದಿಂದ ದಿಢೀರ್ ಭಾರತಕ್ಕೆ ಮರಳಿದ ಕೊಹ್ಲಿ; ಟೆಸ್ಟ್ ಸರಣಿಯಿಂದ ಗಾಯಕ್ವಾಡ್ ಔಟ್​

author img

By ETV Bharat Karnataka Team

Published : Dec 22, 2023, 3:47 PM IST

Virat Kohli returns to India: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಿಂದ ಬಿಡುವು ಪಡೆದಿರುವ ವಿರಾಟ್​ ಕೊಹ್ಲಿ ಕೌಟುಂಬಿಕ ತುರ್ತು ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಿದ್ದಾರೆ.

Virat Kohli
Virat Kohli

ಹೈದರಾಬಾದ್​​: ಕೌಟುಂಬಿಕ ತುರ್ತು ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ಆಟಗಾರ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಅಭ್ಯಾಸ ಪಂದ್ಯಗಳ ನಡುವೆ ತವರಿಗೆ ಮರಳಿದ್ದಾರೆ. ವರದಿಯಂತೆ, ಅಭ್ಯಾಸ ಪಂದ್ಯಗಳನ್ನು ಬಿಟ್ಟುಬಿಡಲು ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐನಿಂದ ಅನುಮತಿ ಪಡೆದಿರುವ ಕೊಹ್ಲಿ ಮೂರು ದಿನಗಳ ಹಿಂದೆ ಮುಂಬೈಗೆ ಆಗಮಿಸಿದ್ದಾರೆ.

  • Virat Kohli returns home due to a family emergency. He'll be back in time for the Boxing Day Test.

    Ruturaj Gaikwad ruled out of the Test series. (Cricbuzz). pic.twitter.com/Cl9PRUfcV7

    — Mufaddal Vohra (@mufaddal_vohra) December 22, 2023 " class="align-text-top noRightClick twitterSection" data=" ">

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ವಿರಾಟ್​ ಕೊಹ್ಲಿ ಮರಳುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಿಸಿಸಿಐನ ಮೂಲಗಳು ತಿಳಿಸಿರುವಂತೆ, "ತುರ್ತು ಪರಿಸ್ಥಿತಿಯ ನಿಖರವಾದ ವಿವರ ಸ್ಪಷ್ಟವಾಗಿಲ್ಲ. ಆದರೆ ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ಗಾಗಿ ಅವರು ಜೋಹಾನ್ಸ್‌ಬರ್ಗ್‌ಗೆ ಹಿಂತಿರುಗುತ್ತಾರೆ".

ಗಾಯಕ್ವಾಡ್​ ಔಟ್​: ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಕಾಣಿಸಿಕೊಂಡ ರುತುರಾಜ್ ಗಾಯಕ್ವಾಡ್ ಟೆಸ್ಟ್​ ತಂಡದಿಂದ ಹೊರಗುಳಿದಿದ್ದಾರೆ. ಎರಡನೇ ಏಕದಿನ ಪಂದ್ಯದ ವೇಳೆ ಇವರ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಮೂರನೇ ಏಕದಿನ ಪಂದ್ಯದಿಂದ ಹೊರಗಿಡಲಾಗಿತ್ತು. ಗಾಯಕ್ವಾಡ್ ಬದಲಿಗೆ ಪಾಟಿದಾರ್​​ ಪಾದಾರ್ಪಣೆ ಪಂದ್ಯ ಆಡಿದ್ದರು.

ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಉಂಗುರ ಬೆರಳಿಗಾದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕ್ರಿಕೆಟಿಗ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಗಾಯಕ್ವಾಡ್ ಟೆಸ್ಟ್ ಸರಣಿಯ ಸಮಯದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗದು. ಹೀಗಾಗಿ ಶನಿವಾರ ಭಾರತಕ್ಕೆ ಮರಳಲಿದ್ದಾರೆ ಎಂದು ವರದಿ ತಿಳಿಸಿದೆ.

"ಗಾಯಕ್ವಾಡ್ ಎರಡು ಟೆಸ್ಟ್‌ಗಳಲ್ಲಿ ಒಂದಕ್ಕಿಂತ ಮೊದಲು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳಿಲ್ಲ ಎಂದು ಬಿಸಿಸಿಐ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲು ನಿರ್ಧರಿಸಲಾಗಿದೆ." ಎಂದು ಬಿಸಿಸಿಐ ತಿಳಿಸಿದೆ.

ಮೂರು ಸ್ವರೂಪದ ತಂಡಗಳು ಈಗ ಜೊಹಾನ್ಸ್‌ಬರ್ಗ್‌ನಲ್ಲಿ ಏಕದಿನ ಸರಣಿ ಮತ್ತು ಮೂರು ದಿನಗಳ ಅಭ್ಯಾಸದಲ್ಲಿ ತೊಡಗಿಕೊಂಡಿವೆ. ಅಭ್ಯಾಸ ಪಂದ್ಯ ಮುಕ್ತಾಯದ ನಂತರ ಮೊದಲ ಟೆಸ್ಟ್‌ಗಾಗಿ ತಂಡ ಸೆಂಚುರಿಯನ್‌ಗೆ ಪ್ರಯಾಣಿಸಲಿದೆ.

ಡಬ್ಲ್ಯುಟಿಸಿ ಟೆಸ್ಟ್​ ಆವೃತ್ತಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದೆ. ಡಿಸೆಂಬರ್ 26-30ರವರೆಗೆ ಸೆಂಚುರಿಯನ್‌ನಲ್ಲಿ ಮತ್ತು ಜನವರಿ 3-7ರವರೆಗೆ ಕೇಪ್‌ಟೌನ್‌ನಲ್ಲಿಯೂ ಪಂದ್ಯಗಳು ನಡೆಯಲಿವೆ. ಇದು 2023-2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ ಭಾರತದ ಎರಡನೇ ಸರಣಿಯಾಗಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಭಾರತ ಗೆದ್ದಿತ್ತು.

ಬಾಕ್ಸಿಂಗ್​ ಡೇ ಟೆಸ್ಟ್​​: ಭಾರತ ಕೊನೆಯ ಬಾರಿಗೆ ಡಿಸೆಂಬರ್ 2021 ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಿತ್ತು. ಆ ಸಮಯದಲ್ಲಿ, ಭಾರತವು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕಾವು ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್‌ನಲ್ಲಿ ಪಂದ್ಯಗಳನ್ನು ಗೆದ್ದು ಸರಣಿ 2-1ರಿಂದ ಸರಣಿ ವಶಪಡಿಸಿಕೊಂಡಿತ್ತು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಗೆಲುವಿಗೆ ಮುಳುವಾದ ಸಾಯಿ ಸುದರ್ಶನ್​ ಲಾಂಗ್​ಡೈವ್​ ಕ್ಯಾಚ್​..! ಹೇಗಿತ್ತು ಗೊತ್ತಾ ಆ ಕ್ಷಣ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.