ETV Bharat / sports

36 ರನ್​ ಬಾರಿಸಿದರೆ ಈ ಆಟಗಾರನ ದಾಖಲೆ ಮುರಿಯುವ ವಿರಾಟ್​ ಕೊಹ್ಲಿ

author img

By

Published : Sep 17, 2022, 11:02 PM IST

Virat on the verge of breaking Rohit's record
ದಾಖಲೆ ಮುರಿಯುವ ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ ಏಷ್ಯಾ ಕಪ್​ನಲ್ಲಿ ಆಕರ್ಷಕ ಆಟವಾಡಿ ರೋಹಿತ್​ ಹೆಸರಲ್ಲಿದ್ದ ಅತ್ಯಧಿಕ ರನ್​ ಬಾರಿಸಿದ ಆಟಗಾರ ದಾಖಲೆಯನ್ನು ಉಡೀಸ್​ ಮಾಡಿದ್ದರು. ಇನ್ನೂ 36 ರನ್​ ಮಾಡಿದರೆ ರೋಹಿತ್​ರ ಮತ್ತೊಂದು ದಾಖಲೆ ಮಣ್ಣಾಗಲಿದೆ.

ಟಿ20 ವಿಶ್ವಕಪ್‌ಗೆ ಪೂರ್ವ ತಯಾರಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಆಸೀಸ್ ಮತ್ತು ಭಾರತ ಮೂರು ಟಿ20 ಸರಣಿ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಅಪರೂಪದ ದಾಖಲೆಗಳನ್ನು ಬರೆಯುವ ಅವಕಾಶವಿದೆ.

ಏಷ್ಯಾಕಪ್​ನಲ್ಲಿ ಅದ್ಭುತವಾಗಿ ಕಮ್​ಬ್ಯಾಕ್​ ಮಾಡಿ ತಮ್ಮ ಹಳೆಯ ಖದರ್​ ತೋರಿಸಿದ್ದಾರೆ. ಹಾಗಾಗಿ ಈ ದಾಖಲೆಗಳನ್ನು ಕೊಹ್ಲಿ ಬರೆಯುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಏಷ್ಯಾ ಕಪ್​ನಲ್ಲಿ 122 ರನ್​ ಬಾರಿಸುವ ಮೂಲಕ ಭಾರತದ ಪರವಾಗಿ ಅತ್ಯಧಿಕ ರನ್​ ಬಾರಿಸಿದ ದಾಖಲೆ ಬರೆದುಕೊಂಡರು. 118 ರನ್​ ಗಳಿಸಿದ್ದ ರೋಹಿತ್​ ದಾಖಲೆ ಮುರಿದರು. ಚುಟುಕು ಕ್ರಿಕೆಟ್​ನಲ್ಲಿ ವಿರಾಟ್​ 3,584 ರನ್​ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (3,620) ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ.

ಇಬ್ಬರ ನಡುವಿನ ಅಂತರ ಕೇವಲ 36 ರನ್ ಮಾತ್ರ. ಫಾರ್ಮ್‌ಗೆ ಮರಳಿರುವ ಕೊಹ್ಲಿಗೆ ಈ ದಾಖಲೆ ಮುರಿಯಲು ಹೆಚ್ಚೇನು ಸಮಯ ಬೇಕಿಲ್ಲ. 36 ರನ್​ ಬಾರಿಸಿ ರೋಹಿತ್‌ರನ್ನು ಹಿಂದಿಕ್ಕುವ ಮೂಲಕ ಅತಿಹೆಚ್ಚು ರನ್​ ಗಳಿಸಿದ ಬ್ಯಾಟರ್​ ಎಂಬ ದಾಖಲೆ ಸೃಷ್ಟಿಸಬಹುದು.

ಬೇರೆ ದಾಖಲೆ ಏನು?:

  • ಐಪಿಎಲ್​, ಅಂತಾರಾಷ್ಟ್ರೀಯ ಸೇರಿದಂತೆ ಚುಟುಕು ಕ್ರಿಕೆಟ್​ನಲ್ಲಿ 11 ಸಾವಿರ ಗಡಿ ದಾಟಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಬಹುದು. ಪ್ರಸ್ತುತ ವಿರಾಟ್​ 349 ಪಂದ್ಯಗಳಲ್ಲಿ 40.37 ಸರಾಸರಿಯಲ್ಲಿ 10,902 ರನ್ ಗಳಿಸಿದ್ದಾರೆ.
  • ವಿರಾಟ್ ಕೊಹ್ಲಿ ಎಲ್ಲಾ ಮೂರು ಮಾದರಿಗಳಲ್ಲಿ 468 ಪಂದ್ಯಗಳನ್ನಾಡಿದ್ದು, 71 ಶತಕಗಳೊಂದಿಗೆ 24,002 ರನ್ ಗಳಿಸಿದ್ದಾರೆ. ಇನ್ನು 63 ರನ್ ಗಳಿಸಿದರೆ ರಾಹುಲ್ ದ್ರಾವಿಡ್​ರ 24,064 ರನ್ ಶಿಖರವನ್ನು ಮೀರಿಸಲಿದ್ದಾರೆ.

ಓದಿ: ವಿಶ್ವಕಪ್​ನಲ್ಲಿ ಜಡೇಜಾ ಅಲಭ್ಯತೆ ಭಾರತಕ್ಕೆ ನಷ್ಟ ತರಲಿದೆ: ಶ್ರೀಲಂಕಾ ಕ್ರಿಕೆಟರ್​ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.