ETV Bharat / sports

The Ashes 2023: 15ನೇ ಬಾರಿಗೆ ಸ್ಟುವರ್ಟ್ ಬ್ರಾಡ್​ಗೆ ವಿಕೆಟ್​ ಕೊಟ್ಟ ವಾರ್ನರ್‌: ವರ್ಷಗಳಿಂದ ಮುಂದುವರೆದ ಕಳಪೆ ಫಾರ್ಮ್​

author img

By

Published : Jun 17, 2023, 6:38 PM IST

Warner got out to Stuart Broad for the 15th time
15ನೇ ಬಾರಿಗೆ ಸ್ಟುವರ್ಟ್ ಬ್ರಾಡ್​ಗೆ ವಿಕೆಟ್​ ಕೊಟ್ಟ ವಾರ್ನರ್‌

ಆಶಸ್​ ಸರಣಿಯಲ್ಲಿ ಡೇವಿಡ್​ ವಾರ್ನರ್​ ಅವರ ಕಳಪೆ ಫಾರ್ಮ್​ ಮುಂದುವರೆದಿದೆ. 9 ರನ್ ಗಳಿಸಿ ಆಡುತ್ತಿದ್ದ ವಾರ್ನರ್​ ಬ್ರಾಡ್​ಗೆ ವಿಕೆಟ್​ ಕೊಟ್ಟಿದ್ದಾರೆ. ಇದರಿಂದ ಸ್ಟುವರ್ಟ್​ 15ನೇ ಬಾರಿಗೆ ಡೇವಿಡ್​ ಅವರ ವಿಕೆಟ್​ನ್ನು ಉಳಿಸಿದಂತಾಗಿದೆ.

ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾಕ್ಕೆ ಐಸಿಸಿ ನಡೆಸುವ ಟ್ರೋಫಿಗಳು ಪ್ರಮುಖವಾಗುತ್ತವೆ ಎಂದು ಹೇಳಲಾಗದು. ಆದರೆ ಆಶಸ್​ ಮಾತ್ರ ಅತ್ಯಂತ ಪ್ರಮುಖವಾದದ್ದು. ಎರಡು ವರ್ಷಗಳಿಗೊಮ್ಮ ನಡೆಯುವ ಬೇಲ್ಸ್​​ನ ಬೂದಿ ಮುಚ್ಚಿದ ಕೆಂಡದಂತಿರುವ ಕದನ ಎರಡೂ ದೇಶಗಳ ಆಟಗಾರರಿಗೆ ಪ್ರತಿಷ್ಠೆಯ ಕಣವಾಗಿದೆ. ಇದರಲ್ಲಿ ವರ್ಷದಿಂದ ಫಾರ್ಮ್​ನಲ್ಲಿರದ ವಾರ್ನರ್ (9)​ ಮತ್ತೆ ವೈಫಲ್ಯ ಎದುರಿಸಿದ್ದಾರೆ.

36ರ ಹರೆಯದ ವಾರ್ನರ್ ತಮ್ಮ ವೃತ್ತಿ ಜೀವನದ ಕಳಪೆ ಫಾರ್ಮ್ಅ​ನ್ನು ಎದುರಿಸುತ್ತಿದ್ದಾರೆ. ಬೃಹತ್ ಇನ್ನಿಂಗ್ಸ್​ ಕಟ್ಟುವಲ್ಲಿ ವಾರ್ನರ್​ ಸತತವಾಗಿ ಎಡವುತ್ತಿದ್ದಾರೆ. ಆಶಸ್​ನ ಎರಡನೇ ದಿನದಾಟ ಆರಂಭವಾಗುತ್ತಿದ್ದಂತೆ ವಾರ್ನರ್​ ವಿಕೆಟ್​ನ್ನು ಆಸ್ಟ್ರೇಲಿಯಾದ ಕಳೆದುಕೊಂಡಿತು. ಅದೂ ವಿಶೇಷ ಎಂದರೆ ಮತ್ತೆ ಸ್ಟುವರ್ಟ್ ಬ್ರಾಡ್ ಬೌಲಿಂಗ್​ನಲ್ಲೇ ವಾರ್ನರ್​ ವಿಕೆಟ್​ ಕೊಟ್ಟಿರುವುದು. 9 ರನ್​ ಗಳಿಸಿ ಆಡುತ್ತಿದ್ದ ವಾರ್ನರ್​ಗೆ ದಿನದ 11ನೇ ಓವರ್​ನಲ್ಲಿ ಬ್ರಾಡ್​ ಕಾಡಿದರು. ಬ್ಯಾಟ್​ ಸೈಡ್​ ಎಡ್ಜ್​ ಆದ ಬೌಲ್​ ನೇರ ವಿಕೆಟ್​​ಗೆ ಬಡಿಯಿತು. ​

ಇಂಗ್ಲೆಂಡ್​ ನಾಯಕ ಟೆಸ್ಟ್​ ಪಂದ್ಯ ಪ್ರಾರಂಭಕ್ಕೂ ಮುನ್ನ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವಾರ್ನರ್​ ಕಟ್ಟಿಹಾಕಲು ನಮ್ಮ ಬಳಿ ಸ್ಟುವರ್ಟ್ ಬ್ರಾಡ್ ಎಂಬ ಅಸ್ತ್ರ ಇದೆ ಎಂದಿದ್ದರು. ಅದರಂತೆ ವಾರ್ನರ್​ ಸ್ಟುವರ್ಟ್ ಬ್ರಾಡ್​ಗೆ ವಿಕೆಟ್​ ಕೊಟ್ಟಿದ್ದಾರೆ. ಇದು ಡೇವಿಡ್ ವಾರ್ನರ್​ 15ನೇ ಬಾರಿಗೆ ಸ್ಟುವರ್ಟ್ ಬ್ರಾಡ್ ವಿಕೆಟ್​ ಒಪ್ಪಿಸಿದ್ದಾಗಿದೆ.

ಇಂಗ್ಲೆಂಡ್​ ಇನ್ನಿಂಗ್ಸ್​​: ನಿನ್ನೆ ಆರಂಭವಾದ ಆಶಸ್​ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್​ಗೆ ಬ್ರೆಂಡಮ್​ ಮೆಕಲಮ್ ಕೋಚ್​ ಮತ್ತು ಬೆನ್​ ಸ್ಟೋಕ್ಸ್​ ನಾಯಕರಾದ ಬಳಿಕ ಆದ ನಂತರ ತಂಡ ಆಡುವ ಟೆಸ್ಟ್​ ಮಾದರಿಯೇ ಬದಲಾಗಿದೆ. ಏಕದಿನ ದಿನ ಮಾದರಿಯಲ್ಲಿ ಎಲ್ಲಾ ಬ್ಯಾಟರ್​ಗಳು ಟೆಸ್ಟ್​ನಲ್ಲಿ ರನ್​ಗಳಿಸುತ್ತಿದ್ದಾರೆ. ಅದರಂತೆ ಜೋ ರೂಟ್​ 118 ರನ್​, ಜಾನಿ ಬೈರ್‌ಸ್ಟೋವ್ 78 ಮತ್ತು ಝಾಕ್ ಕ್ರಾಲಿ 61 ರನ್​ ಗಳಿಸಿದರು. ಮೂವರು ಏಕದಿನ ಮಾದರಿಯಲ್ಲಿ ಬ್ಯಾಟ್​ ಬೀಸಿದ ಪರಿಣಾಮ 78ನೇ ಓವರ್​ನಲ್ಲಿ ಇಂಗ್ಲೆಂಡ್​ 393 ರನ್​ ಕಲೆಹಾಕಿತ್ತು. ಅಲ್ಲದೇ 8 ವಿಕೆಟ್ ಕಳೆದುಕೊಂಡು 393 ರನ್​ ಗಳಿಸಿದ್ದ ಆಂಗ್ಲರು ಡಿಕ್ಲೆರ್​ ಸಹ ಪ್ರಕಟಿಸಿದ್ದರು.

ನಂತರ ಆಸ್ಟ್ರೇಲಿಯಾ ಬ್ಯಾಟಿಂಗ್​ ಬಂದಿತ್ತು ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್​ ಡಿಕ್ಲೇರ್​ ನಂತರ 4 ಓವರ್​ಗೆ 14 ರನ್​ ಆಸ್ಟ್ರೇಲಿಯಾ ಕಲೆಹಾಕಿತ್ತು. ಎರಡನೇ ದಿನವಾದ ಇಂದು ಬ್ಯಾಟಿಂಗ್​ಗೆ ಬಂದ ಆಸಿಸ್​ ಆಟಗಾರು ವಿಕೆಟ್​ ಕಳೆದು ಕೊಂಡರು. ಮೊದಲಿಗೆ ವಾರ್ನರ್​ ಪೆವಿಲಿಯನ್​ಗೆ ತೆರಳಿದರೆ, ಅವರ ಬೆನ್ನಲ್ಲೇ ಶೂನ್ಯ ಮಾರ್ನಸ್​ ಲಬುಶೇನ್​ ವಿಕೆಟ್​ ಕೊಟ್ಟರು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಶತಕ ಗಳಿಸಿದ್ದ ಸ್ಟೀವ್​ ಸ್ಮಿತ್ 16 ರನ್​ಗೆ ವಿಕೆಟ್​ ಕೊಟ್ಟರು

ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ದಿನದ 31ನೇ ಓವರ್​ಗೆ 3 ವಿಕೆಟ್​ ಕಳೆದುಕೊಂಡು 78 ರನ್​ ಗಳಿಸಿದೆ. ಕ್ರೀಸ್​ನಲ್ಲಿ 40 ರನ್​ ಗಳಿಸಿ ಉಸ್ಮಾನ್​ ಖವಾಜಾ ಮತ್ತು 8 ರನ್​ ಟ್ರಾವೆಸ್​ ಹೆಡ್​ ಇದ್ದಾರೆ.

ಇದನ್ನೂ ಓದಿ: Ashes 2023: ತಂಡಕ್ಕಾಗಿ ಏಕಾಂಗಿ ಪ್ರದರ್ಶನ ನೀಡಿ ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದ ರೋಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.