ETV Bharat / sports

ನಾಲ್ವರು ಭಾರತೀಯರು ಸೇರಿದಂತೆ ಆಲ್​ಟೈಮ್ ODI ತಂಡ ಪ್ರಕಟಿಸಿದ ಅಖ್ತರ್

author img

By

Published : Jul 18, 2021, 5:43 PM IST

ಖಾಸಗಿ ಕ್ರೀಡಾ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಅಖ್ತರ್ ಆರಂಭಿಕರಾಗಿ ವೆಸ್ಟ್​ ಇಂಡೀಸ್​ನ ಗಾರ್ಡನ್ ಗ್ರೀನಿಡ್ಜ್​ ಮತ್ತು ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್​ರನ್ನು ಆಯ್ಕೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ಇಂಜಮಾಮ್ ಉಲ್ ಹಕ್ ಸ್ಥಾನ ಪಡೆದಿದ್ದಾರೆ. ಆದರೆ, ಪಾಕ್‌ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಸಯೀದ್ ಅನ್ವರ್​ ಅವರನ್ನು 4ನೇ ಕ್ರಮಾಂಕದಲ್ಲಿರಿಸಿದ್ದಾರೆ.

ಶೋಯಬ್ ಅಖ್ತರ್
ಶೋಯಬ್ ಅಖ್ತರ್

ನವದೆಹಲಿ : ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್​ ತಮ್ಮ ನೆಚ್ಚಿನ ಆಲ್​ಟೈಮ್ ಏಕದಿನ ತಂಡವನ್ನು ಪ್ರಕಟಿಸಿದ್ದು, ಪ್ರಸ್ತುತ ಏಕದಿನ ಕ್ರಿಕೆಟ್​ನ ರನ್​ಮಷಿನ್ ಎನಿಸಿಕೊಂಡಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ತಮ್ಮ ದೇಶದ ಬಾಬರ್​ ಅಜಮ್​ರನ್ನು ತಂಡದಿಂದ ಹೊರಗಿಟ್ಟಿದ್ದಾರೆ. ವಿಶೇಷವೆಂದರೆ ಇದರಲ್ಲಿ ನಾಲ್ವರು ಭಾರತೀಯರನ್ನು ಆಖ್ತರ್ ಆಯ್ಕೆ ಮಾಡಿದ್ದಾರೆ.

ಖಾಸಗಿ ಕ್ರೀಡಾ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಅಖ್ತರ್ ಆರಂಭಿಕರಾಗಿ ವೆಸ್ಟ್​ ಇಂಡೀಸ್​ನ ಗಾರ್ಡನ್ ಗ್ರೀನಿಡ್ಜ್​ ಮತ್ತು ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್​ರನ್ನು ಆಯ್ಕೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ಇಂಜಮಾಮ್ ಉಲ್ ಹಕ್ ಸ್ಥಾನ ಪಡೆದಿದ್ದಾರೆ. ಆದರೆ, ಪಾಕ್‌ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಸಯೀದ್ ಅನ್ವರ್​ ಅವರನ್ನು 4ನೇ ಕ್ರಮಾಂಕದಲ್ಲಿರಿಸಿದ್ದಾರೆ.

ಅಖ್ತರ್​ ತಮ್ಮ ತಂಡದ ವಿಕೆಟ್ ಕೀಪರ್ ಮತ್ತು 5ನೇ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಅಖ್ತರ್ ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಆಸ್ಟ್ರೇಲಿಯಾದ ಆ್ಯಡಂ ಗಿಲ್​ಕ್ರಿಸ್ಟ್​ ಅವರನ್ನು 6ನೇ ಕ್ರಮಾಂದಲ್ಲಿರಿಸಿದ್ದಾರೆ. ಆದರೆ, ಅವರನ್ನು ಕೇವಲ ಬ್ಯಾಟ್ಸ್​ಮನ್ ಆಗಿ ಸೇರಿಸುವುದಾಗಿ ಹೇಳಿದ್ದಾರೆ.

7ನೇ ಕ್ರಮಾಂದಲ್ಲಿ 2011ರ ವಿಶ್ವಕಪ್​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಭಾರತದ ಯುವರಾಜ್ ಸಿಂಗ್​ಗೆ ಮಣೆ ಹಾಕಿದ್ದಾರೆ. ವಾಸೀಂ ಅಕ್ರಮ್, ವಾಕರ್ ಯೂನಿಸ್ ಮತ್ತು ಕಪಿಲ್ ದೇವ್​ರನ್ನು ವೇಗಿಗಳಾಗಿ ಹಾಗೂ ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್​ ಶೇನ್​ವಾರ್ನ್​ರನ್ನು ಏಕೈಕ ಸ್ಪಿನ್ನರ್​ ಮತ್ತು ತಂಡದ ನಾಯಕನನ್ನಾಗಿ ಹೆಸರಿಸಿದ್ದಾರೆ.

ಆದರೆ, ಭಾರತ ತಂಡದ ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ,ಆಸ್ಟ್ರೇಲಿಯಾದ ವೇಗಿ ಗ್ಲೇನ್ ಮೆಕ್​ಗ್ರಾತ್ ಹಾಗೂ ತಮ್ಮದೇ ದೇಶದ ಮೊಹಮ್ಮದ್ ಯೂಸುಪ್​ ಅವರಂತಹ ಶ್ರೇಷ್ಠ ಆಟಗಾರರಿಗೆ ತಮ್ಮ ತಂಡದಲ್ಲಿ ಅವಕಾಶ ನೀಡಿಲ್ಲದಿರುವುದು ಆಶ್ವರ್ಯ ತಂದಿದೆ.

ಅಖ್ತರ್ ಘೋಷಿಸಿದ ಸಾರ್ವಕಾಲಿಕ ಏಕದಿನ ತಂಡ

ಗಾರ್ಡನ್ ಗ್ರೀನಿಡ್ಜ್, ಸಚಿನ್ ತೆಂಡೂಲ್ಕರ್, ಇಂಜಮಾಮ್-ಉಲ್-ಹಕ್, ಸಯೀದ್ ಅನ್ವರ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ಆ್ಯಡಂ ಗಿಲ್​ಕ್ರಿಸ್ಟ್, ಯುವರಾಜ್ ಸಿಂಗ್, ವಾಸೀಂ ಅಕ್ರಮ್, ವಾಕರ್ ಯೂನಿಸ್, ಕಪಿಲ್ ದೇವ್, ಶೇನ್ ವಾರ್ನ್ (ನಾಯಕ).

ಇದನ್ನೂ ಓದಿ: ಜನ್ಮದಿನದಂದೇ ಏಕದಿನ ಕ್ರಿಕೆಟ್​ಗೆ ಇಶಾನ್ ಕಿಶನ್ ಪದಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.