ETV Bharat / sports

ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ​​ರಾಜೀನಾಮೆ

author img

By

Published : Dec 28, 2022, 5:02 PM IST

Russell Domingo is the head coach of Bangladesh cricket team
ರಸೆಲ್ ಡೊಮಿಂಗೊ ಬಾಂಗ್ಲಾದೇಶ ಕ್ರಿಕೆಟ್​ ತಂಡದ ಮುಖ್ಯ ಕೋಚ್

ಬಾಂಗ್ಲಾದೇಶ ಕ್ರಿಕೆಟ್​ ತಂಡಕ್ಕಿದು ಆಘಾತಕಾರಿ ಬೆಳವಣಿಗೆ. ಭಾರತದೊಂದಿಗಿನ ಟೆಸ್ಟ್‌ ಸರಣಿ ಸೋಲಿನ ಬಳಿಕ ಇದೀಗ ತಂಡದ ಮುಖ್ಯ ಕೋಚ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಅವಧಿ ಪೂರ್ಣಗೊಳಿಸದೇ ದಿಢೀರ್ ಹುದ್ದೆಯಿಂದ ಕೆಳಗಿಳಿದಿರುವುದು ಕ್ರಿಕೆಟ್‌ ಮಂಡಳಿಗೆ ಬೇಸರ ತರಿಸಿದೆ.

ಬಾಂಗ್ಲಾದೇಶ ಕ್ರಿಕೆಟ್​ ತಂಡದ ಮುಖ್ಯ ಕೋಚ್ ರಸೆಲ್ ಡೊಮಿಂಗೊ ​​ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತ ವಿರುದ್ಧ ಬಾಂಗ್ಲಾದೇಶ ತವರು ಟೆಸ್ಟ್ ಸರಣಿಯಲ್ಲಿ 2-0 ಅಂತರದ ಸೋಲಿನ ನಂತರ ಅವರು ತಮ್ಮ ಹುದ್ದೆ ತೊರೆದಿದ್ದಾರೆ. ರಸೆಲ್ ಡೊಮಿಂಗೊ ​​ಅವರ ಅಧಿಕಾರವಧಿ 2023 ರ ವಿಶ್ವಕಪ್‌ವರೆಗೆ ಇತ್ತು. ಆದರೆ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸದೇ ಹುದ್ದೆಯಿಂದ ಕೆಳದಿರುವುದು ಬಾಂಗ್ಲಾದೇಶ ಕ್ರಿಕೆಟ್​ ತಂಡಕ್ಕೆ ಬೇಸರ ತಂದಿದೆ.

2018 ರಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) 2020 ಐಸಿಸಿ ವಿಶ್ವ ಟಿ20 ಅಂತ್ಯದವರೆಗೆ ರಾಷ್ಟ್ರೀಯ ತಂಡಕ್ಕೆ ಸ್ಟೀವ್ ರೋಡ್ಸ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತ್ತು. ಆದರೆ ಜುಲೈ 2019 ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ತಂಡವು 8ನೇ ಸ್ಥಾನ ಗಳಿಸಿದ ನಂತರ ಬಿಸಿಬಿಯೊಂದಿಗಿನ ರೋಡ್ಸ್ ಒಪ್ಪಂದ ಕೊನೆಗೊಳಿಸಲಾಗಿತ್ತು. ಬಳಿಕ ದಕ್ಷಿಣ ಆಫ್ರಿಕಾದ ಡೊಮಿಂಗೊ ​​ಅವರನ್ನು ಸೆಪ್ಟೆಂಬರ್ 2019ರಲ್ಲಿ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು.

ರಸೆಲ್ ಡೊಮಿಂಗೊ ​​ಅವರು ಮುಖ್ಯ ಕೋಚ್​ ಆದ ನಂತರ ಬಾಂಗ್ಲಾ ತಂಡವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟಿ20 ಸರಣಿ ಗೆದ್ದಿತ್ತು. ಬಹಳ ಮುಖ್ಯವಾಗಿ, 2022ರ ಜನವರಿಯಲ್ಲಿ ಬಾಂಗ್ಲಾದೇಶವು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಅನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಇದು ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾ ದಾಖಲಿಸಿದ ಮೊದಲ ಗೆಲುವಾಗಿತ್ತು. ನಂತರದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದು, ಭಾರತದ ವಿರುದ್ಧ ಬಾಂಗ್ಲಾ ತವರಿನಲ್ಲಿಯೇ ಈ ವರ್ಷ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತ್ತು.

ಇದನ್ನೂ ಓದಿ: ಚಿತ್ತಗಾಂಗ್​ ಟೆಸ್ಟ್: ಐದು ವಿಕೆಟ್​ ಕಬಳಿಸಿದ ಕುಲದೀಪ್​.. 150 ರನ್​ಗಳಿಗೆ ಬಾಂಗ್ಲಾ ಆಲೌಟ್

ಮೀರ್ಪುರ್​ ಟೆಸ್ಟ್ ನಂತರ ಕೋಚ್​ ಬದಲಾವಣೆ ಸುಳಿವು: ಬಾಂಗ್ಲಾದೇಶ ತಂಡವು ಭಾರತ ವಿರುದ್ದ ಮೀರ್ಪುರ್​ ಟೆಸ್ಟ್​ ಪಂದ್ಯ ಸೋತ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕಾರ್ಯಾಧ್ಯಕ್ಷ ಜಲಾಲ್ ಯೂನಸ್ ಕೋಚ್​ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದರು. ತಂಡದ ಮೇಲೆ ಪ್ರಭಾವ ಬೀರುವ ಕೋಚ್ ನಮಗೆ ಬೇಕು, ನೀವು ಶೀಘ್ರದಲ್ಲೇ ಕೆಲವು ಬದಲಾವಣೆಗಳನ್ನು ನೋಡುತ್ತೀರಿ. ಅದಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸುಳಿವು ಕೊಟ್ಟಿದ್ದರು.

ಗುಣಮಟ್ಟದ ಮತ್ತು ಹೆಚ್ಚು ಸ್ಪರ್ಧಾತ್ಮಕ ತಂಡವನ್ನು ಆಡಬಲ್ಲ ಅತ್ಯಂತ ಬಲಿಷ್ಠ ತಂಡವನ್ನು ನಾವು ಬಯಸುತ್ತೇವೆ. ನಾವು ಭಾರತವನ್ನು ಸೋಲಿಸುವ ಹತ್ತಿರ ಹೋದೆವು, ಆದರೆ ಕಠಿಣವಾಗಿತ್ತು. ಈ ಮೈದಾನದಲ್ಲಿ ನಾವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಂತಹ ಬಲಿಷ್ಠ ತಂಡಗಳನ್ನು ಸೋಲಿಸಿದ್ದೇವೆ. ಆದರೆ ಈ ಪರಿಸ್ಥಿತಿಯಲ್ಲಿ ಭಾರತ ಕಠಿಣ ಸವಾಲು ಒಡ್ಡಿತು ಎಂದು ಹೇಳಿದರು.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್! ಸದ್ಯದ ಲೆಕ್ಕ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.