ETV Bharat / sports

ಚಿತ್ತಗಾಂಗ್​ ಟೆಸ್ಟ್: ಐದು ವಿಕೆಟ್​ ಕಬಳಿಸಿದ ಕುಲದೀಪ್​.. 150 ರನ್​ಗಳಿಗೆ ಬಾಂಗ್ಲಾ ಆಲೌಟ್

author img

By

Published : Dec 16, 2022, 10:15 AM IST

ಚಿತ್ತಗಾಂಗ್​ ಟೆಸ್ಟ್​ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು 150 ರನ್​ಗಳಿಗೆ ಕಟ್ಟಿಹಾಕಿದ್ದು, 254 ರನ್​ಗಳ ಮುನ್ನಡೆ ಸಾಧಿಸಿದೆ.

Bangladesh vs India 1st Test in Chattogram
ಐದು ವಿಕೆಟ್​ ಕಬಳಿಸಿದ ಕುಲದೀಪ್​: 150 ರನ್​ಗೆ ಬಾಂಗ್ಲಾ ಆಲೌಟ್

ಚಿತ್ತಗಾಂಗ್​: ಭಾರತದ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶ 150 ರನ್​ಗೆ ಆಲೌಟ್​ ಆಗಿದೆ. ಈ ಮೂಲಕ ಬಾಂಗ್ಲಾ ತಂಡವು 254 ರನ್​ಗಳ ಹಿನ್ನಡೆ ಅನುಭವಿಸಿದೆ. ಚೈನಾಮನ್ ಸ್ಪಿನ್ನರ್​ ಕುಲದೀಪ್​ ಯಾದವ್​ 5 ವಿಕೆಟ್​ ಕಿತ್ತು ಸಂಭ್ರಮಿಸಿದರು.

ಭಾರತದ ಮೊದಲ ಇನ್ನಿಂಗ್ಸ್​ನ 404 ರನ್​ಗಳಿಗೆ ಪ್ರತಿಯಾಗಿ ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ಪರ ಯಾರೊಬ್ಬರೂ ಸಹ ಅರ್ಧಶತಕವನ್ನೂ ಗಳಿಸಲಿಲ್ಲ. ಗುರುವಾರ 8 ವಿಕೆಟ್​ಗೆ 133 ರನ್​ ಗಳಿಸಿದ್ದ ಬಾಂಗ್ಲಾ ಇಂದು 150 ರನ್​​ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತು.

ಮೂರನೇ ದಿನದಾಟ ಆರಂಭಿಸಿದ ಎಬಾಡೋಟ್ ಹೊಸೈನ್ 15 ರನ್​ಗೆ ಕುಲದೀಪ್ ಯಾದವ್​​ ಬೌಲಿಂಗ್​ನಲ್ಲಿ ಪಂತ್​ಗೆ ಕ್ಯಾಚ್​ ನೀಡಿ ಔಟಾದರು. ಬಳಿಕ 25 ರನ್​ ಬಾರಿಸಿದ್ದ ಮೆಹಿದಿ ಹಸನ್ ಮಿರಾಜ್ ಅಕ್ಷರ್​ ಪಟೇಲ್​​ ಎಸೆತವನ್ನು ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪ್​​ ಔಟ್​ ಆಗುವ ಮೂಲಕ ಬಾಂಗ್ಲಾ ಇನ್ನಿಂಗ್ಸ್​​ಗೆ ತೆರೆಬಿದ್ದಿತು.​

ಇದಕ್ಕೂ ಮುನ್ನ ಭಾರತವು ಮೊದಲ ಇನ್ನಿಂಗ್ಸ್​ನಲ್ಲಿ ಚೇತೇಶ್ವರ ಪೂಜಾರ(90), ಶ್ರೇಯಸ್​ ಅಯ್ಯರ್(86)​ ಹಾಗೂ ಆರ್​. ಅಶ್ವಿನ್​(58) ಅವರ ಅರ್ಧಶತಕದ ಬಲದಿಂದ 404 ಪೇರಿಸಿತ್ತು.

ಇದನ್ನೂ ಓದಿ: ಪಿಎಸ್​ಎಲ್​ಗೆ​ ಇಡೀ ಜಗತ್ತು ಬೆರಗು, ಐಪಿಎಲ್​ಗಿಂತ ಕಠಿಣ ಟೂರ್ನಿ: ಮೊಹಮ್ಮದ್​ ರಿಜ್ವಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.