ETV Bharat / sports

ಪಿಎಸ್​ಎಲ್​ಗೆ​ ಇಡೀ ಜಗತ್ತು ಬೆರಗು, ಐಪಿಎಲ್​ಗಿಂತ ಕಠಿಣ ಟೂರ್ನಿ: ಮೊಹಮ್ಮದ್​ ರಿಜ್ವಾನ್

author img

By

Published : Dec 16, 2022, 9:39 AM IST

ಪಿಎಸ್​ಎಲ್ ಯಶಸ್ವಿಯಾಗುವುದಿಲ್ಲ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಆದರೆ ಆಟಗಾರರಾಗಿ ನಮಗೂ ಸಹ ಪಿಎಸ್​ಎಲ್​​ ಯಶಸ್ಸು ಕಂಡಿದೆ ಎಂದು ಪಾಕ್​ ಕ್ರಿಕೆಟಿಗ ಮೊಹಮ್ಮದ್​ ರಿಜ್ವಾನ್ ಅಭಿಪ್ರಾಯಪಟ್ಟಿದ್ದಾರೆ.

Pakistan Super League
ಪಿಎಸ್​ಎಲ್​ಗೆ​ ಇಡೀ ಜಗತ್ತು ಬೆರಗು, ಐಪಿಎಲ್​ಗಿಂತ ಕಠಿಣ ಟೂರ್ನಿ: ಮೊಹಮ್ಮದ್​ ರಿಜ್ವಾನ್

ಇಂಡಿಯನ್​ ಪ್ರೀಮಿಯರ್ ಲೀಗ್​ ಕ್ರಿಕೆಟ್​ ಜಗತ್ತಿನಲ್ಲೇ ಶ್ರೀಮಂತ ಟೂರ್ನಿ ಎಂಬ ಜನ ಮನ್ನಣೆ ಪಡೆದಿದೆ. ದೇಶ, ವಿದೇಶದ ಆಟಗಾರರು ಈ ಟೂರ್ನಿಯಲ್ಲಿ ಆಡಲು ಉತ್ಸುಕರಾಗಿರುತ್ತಾರೆ. ಆದರೆ, ಪಾಕ್​ ಆಟಗಾರ ಮೊಹಮ್ಮದ್​ ರಿಜ್ವಾನ್, ಪಿಎಸ್​ಎಲ್​ ಇಡೀ ಜಗತ್ತನ್ನು ಬೆರಗುಗೊಳಿಸಿದೆ. ಪಾಕಿಸ್ತಾನ ಕ್ರಿಕೆಟ್​ ಲೀಗ್ ವಿಶ್ವದಲ್ಲೇ ಅತ್ಯಂತ ಕಠಿಣವಾಗಿದೆ. ಹಲವು ಆಟಗಾರರು ಹೇಳುತ್ತಾರೆ ಎಂದು ​ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್‌ನ 8ನೇ ಆವೃತ್ತಿಗೆ ತಂಡಗಳ ಪರಿಷ್ಕರಣೆ ಗುರುವಾರ ನಡೆಯಿತು. ಈ ವೇಳೆ, ಪಾಕ್​ನ ಹಲವು ಪ್ರಮುಖ ಆಟಗಾರರು ಹಾಗೂ ಲೀಗ್‌ಗೆ ಸಂಬಂಧಿಸಿದ ಮಾಜಿ ಕ್ರಿಕೆಟಿಗರು ಭಾಗವಹಿಸಿದ್ದರು. ಪಾಕಿಸ್ತಾನದ ಸ್ಟಾರ್ ವಿಕೆಟ್‌ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೂಡ ಇದ್ದರು.

ಟೂರ್ನಿ ಬಗ್ಗೆ ಮಾತನಾಡಿದ ರಿಜ್ವಾನ್​, 'ಪಿಎಸ್​ಎಲ್​ ಟೂರ್ನಿಗೆ ಇಡೀ ಜಗತ್ತು ಬೆರಗಾಗಿದೆ. ಪಿಎಸ್​ಎಲ್ ಯಶಸ್ವಿಯಾಗುವುದಿಲ್ಲ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿದ್ದವು. ಆದರೆ, ಆಟಗಾರರಾಗಿ ನಮಗೂ ಸಹ ಪಿಎಸ್​ಎಲ್​​ ಯಶಸ್ಸು ಕಂಡಿದೆ. ಐಪಿಎಲ್​ ಕೂಡ ಇದೆ, ಆದರೆ ನೀವು ಪ್ರಪಂಚದಾದ್ಯಂತ ಯಾವುದೇ ಆಟಗಾರನನ್ನು ಕೇಳಿದರೂ, ಪಾಕಿಸ್ತಾನ ಸೂಪರ್ ಲೀಗ್ ವಿಶ್ವದಲ್ಲೇ ಅತ್ಯಂತ ಕಠಿಣ ಎಂದು ಅವರು ಹೇಳುತ್ತಿದ್ದರು. ಪಾಕಿಸ್ತಾನ ತಂಡದಲ್ಲಿ ಉತ್ತಮ ಆಟಗಾರರು ಬರುತ್ತಿದ್ದಾರೆ ಎಂದರೆ ಅದರಲ್ಲಿ ಪಿಎಸ್ಎಲ್ ಕೊಡುಗೆಯೂ ಇದೆ' ಎಂದು ರಿಜ್ವಾನ್ ಹೇಳಿದರು.

ರಿಜ್ವಾನ್ ಪ್ರಸ್ತುತ ಮುಲ್ತಾನ್ ಸುಲ್ತಾನ್ಸ್ ತಂಡದ ನಾಯಕರಾಗಿದ್ದಾರೆ. 2021ರ ಆವೃತ್ತಿಯಲ್ಲಿ ಫ್ರಾಂಚೈಸಿಯು ಪಿಎಸ್ಎಲ್ ಪ್ರಶಸ್ತಿ ಗೆದ್ದಿತ್ತು.

ಇದನ್ನೂ ಓದಿ: 'ಇದು ಟಿ20 ಅಲ್ಲ, ಟೆಸ್ಟ್ ಕ್ರಿಕೆಟ್': ಲಿಟ್ಟನ್​ಗೆ ಬ್ಯಾಟಿಂಗ್​ ಸಲಹೆ ನೀಡಿದ್ದೆ ಎಂದ ಸಿರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.