ETV Bharat / sports

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಮಿಥಾಲಿ ರಾಜ್​

author img

By

Published : Jul 3, 2021, 10:53 PM IST

Updated : Jul 4, 2021, 4:56 PM IST

ಮಿಥಾಲಿ ರಾಜ್
ಮಿಥಾಲಿ ರಾಜ್

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್​ಗಳಿಸಿರುವ 2ನೇ ಬ್ಯಾಟರ್ ಎನಿಸಿಕೊಂಡಿದ್ದ ಮಿಥಾಲಿ, ಇಂದಿನ ಪಂದ್ಯದಲ್ಲಿ ಮಹಿಳಾ ಕ್ರಿಕೆಟ್​ನ ಗರಿಷ್ಠ ರನ್​ ಗಳಿಸಿದ ದಾಖಲೆಗೂ ಪಾತ್ರರಾಗಿದ್ದಾರೆ. 38 ವರ್ಷದ ಬ್ಯಾಟರ್ ಮೂರು ಮಾದರಿಯ ಕ್ರಿಕೆಟ್​ನಿಂದ 10, 277 ರನ್​ಗಳಿಸಿದ್ದಾರೆ.

ವಾರ್ಸೆಸ್ಟರ್: ಭಾರತ ಏಕದಿನ ತಂಡದ ನಾಯಕ ಮಿಥಾಲಿ ರಾಜ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 15 ರನ್​ಗಳಿಸುತ್ತಿದ್ದಂತೆ ಇಂಗ್ಲೆಂಡ್​ ತಂಡದ ಮಾಜಿ ನಾಯಕಿ ಚಾರ್ಲೋಟ್​ ಎಡ್ವರ್ಡ್ಸ್​ ಅವರನ್ನು ಹಿಂದಿಕ್ಕಿ ಈ ದಾಖಲೆಗೆ ಪಾತ್ರರಾಗಿದ್ದಾರೆ.

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ಮೈಲುಗಲ್ಲು ತಲುಪಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದ ಮಿಥಾಲಿ, ಇಂದಿನ ಪಂದ್ಯದಲ್ಲಿ ಮಹಿಳಾ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಗಳಿಸಿದ ವಿಶ್ವ ದಾಖಲೆಗೂ ಪಾತ್ರರಾಗಿದ್ದಾರೆ. 38 ವರ್ಷದ ಬ್ಯಾಟರ್ ಮೂರು ಮಾದರಿಯ ಕ್ರಿಕೆಟ್​ನಿಂದ 10,277 ರನ್​ಗಳಿಸಿದ್ದಾರೆ.

ಎಡ್ವರ್ಡ್ಸ್​ 309 ಪಂದ್ಯಗಳಿಂದ 10, 273 ರನ್​ಗಳಿಸಿದ್ದರು. ಅವರು 78 ಅರ್ಧಶತಕ ಮತ್ತು 13 ಶತಕ ಸಿಡಿಸಿದ್ದಾರೆ. ಮಿಥಾಲಿ 317 ಪಂದ್ಯಗಳಿಂದ 10, 277 ರನ್​ಗಳಿಸಿದ್ದಾರೆ. 78 ಅರ್ಧಶತಕ ಮತ್ತು 8 ಶತಕ ಸೇರಿವೆ.

ಮಿಥಾಲಿ ರಾಜ್ ಟೆಸ್ಟ್​ ಕ್ರಿಕೆಟ್​ನಲ್ಲಿ 669 ರನ್​, ಏಕದಿನ ಕ್ರಿಕೆಟ್​​ನಲ್ಲಿ 7244 ರನ್​ ಮತ್ತು ಟಿ20 ಕ್ರಿಕೆಟ್​ನಲ್ಲಿ 2364 ರನ್​ಗಳಿಸಿದ್ದಾರೆ.

ಇದನ್ನು ಓದಿ:ಪ್ರತಿಷ್ಠಿತ 'ರಾಜೀವ್ ಗಾಂಧಿ ಖೇಲ್ ರತ್ನ'ಕ್ಕೆ ಮಿಥಾಲಿ, ಅಶ್ವಿನ್ ಹೆಸರು ಶಿಫಾರಸು

Last Updated :Jul 4, 2021, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.