ETV Bharat / sports

ರಾಜಸ್ಥಾನ್ ವಿರುದ್ಧ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಬೌಲಿಂಗ್ ಆಯ್ಕೆ

author img

By

Published : Apr 29, 2021, 3:13 PM IST

ಮುಂಬೈ ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಪಂಜಾಬ್ ವಿರುದ್ಧ ಸೋಲು ಕಂಡಿದೆ. ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚಾಂಪಿಯನ್ ತಂಡ ಒಮ್ಮೆಯೂ 160ರ ಗಡಿ ದಾಟಿಲ್ಲ. ಇನ್ನು ಕಳೆದ ಎರಡೂ ಪಂದ್ಯಗಳಲ್ಲೂ ಕ್ರಮವಾಗಿ 137 ಮತ್ತು 133 ರನ್​ಗಳನ್ನಷ್ಟೇ ಸಿಡಿಸಿ ಸೋಲು ಕಂಡಿದೆ.

ರಾಜಸ್ಥಾನ್ ವಿರುದ್ಧ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಬೌಲಿಂಗ್ ಆಯ್ಕೆ
ರಾಜಸ್ಥಾನ್ ವಿರುದ್ಧ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಬೌಲಿಂಗ್ ಆಯ್ಕೆ

ನವದೆಹಲಿ​: ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಇಂದು ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದು, 7ನೇ ಸ್ಥಾನದಲ್ಲಿರುವ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮುಂಬೈ ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಪಂಜಾಬ್ ವಿರುದ್ಧ ಸೋಲು ಕಂಡಿದೆ. ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚಾಂಪಿಯನ್ ತಂಡ ಒಮ್ಮೆಯೂ 160ರ ಗಡಿ ದಾಟಿಲ್ಲ. ಇನ್ನು ಕಳೆದ ಎರಡೂ ಪಂದ್ಯಗಳಲ್ಲೂ ಕ್ರಮವಾಗಿ 137 ಮತ್ತು 133 ರನ್​ಗಳನ್ನಷ್ಟೇ ಸಿಡಿಸಿ ಸೋಲು ಕಂಡಿದೆ.

ಇದೀಗ ಡೆಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ತನ್ನ ರನ್​ ಬರವನ್ನು ನೀಗಿಸಿಕೊಳ್ಳುವುದೇ ಎಂದು ನೋಡಬೇಕಿದೆ. ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಇಶಾನ್ ಕಿಶನ್ ಬದಲಿಗೆ ಆಲ್​ರೌಂಡರ್​ ನಥನ್ ಕೌಲ್ಟರ್ ನೈಲ್​ರನ್ನು ಕಣಕ್ಕಿಳಿಸಿದೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಪ್ರಮುಖ ಆಟಗಾರರು ತವರಿಗೆ ಮರಳಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ರಾಸ್ಸಿ ವಾನ್ ಡರ್ ಡಾಸೆನ್ ಗಾಯಗೊಂಡಿರುವ ಸ್ಟೋಕ್ಸ್ ಬದಲಿಗೆ ತಂಡ ಸೇರಿಕೊಂಡಿದ್ದಾರಾದರೂ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದಿನ ಪಂದ್ಯದಲ್ಲೂ ಆಡಲಿದೆ.

ಮುಖಾಮುಖಿ

ಎರಡು ತಂಡಗಳು ಐಪಿಎಲ್​ನಲ್ಲಿ 23 ಪಂದ್ಯಗಳನ್ನಾಡಿದ್ದು 11 ಜಯ ಸಾಧಿಸಿವೆ. ಒಂದು ಪಂದ್ಯ ರದ್ದಾಗಿದೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 57 ರನ್​ಗಳಿಂದ ಜಯ ಸಾಧಿಸಿದರೆ, ಮತ್ತೊಂದು ಪಂದ್ಯದಲ್ಲಿ ರಾಯ್ಲಸ್ 8 ವಿಕೆಟ್​ಗಳಿಂದ ಜಯ ಸಾಧಿಸಿತ್ತು.

ತಂಡಗಳು

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಶಿವಮ್ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತಿವಾಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕತ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕರಿಯಾ

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಥನ್ ಕೌಲ್ಟರ್ ನೈಲ್ ಜಯಂತ್ ಯಾದವ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.