ETV Bharat / sports

ಐಪಿಎಲ್​ ಆವೃತ್ತಿಯೊಂದರಲ್ಲಿ ರಾಜಸ್ಥಾನ್​ ಪರ ಗರಿಷ್ಠ ರನ್​ ದಾಖಲಿಸಿದ ಜಾಸ್ ಬಟ್ಲರ್

author img

By

Published : Apr 30, 2022, 10:50 PM IST

Jos Buttler record
ಜಾಸ್ ಬಟ್ಲರ್ ದಾಖಲೆ

ಜಾಸ್ ಬಟ್ಲರ್​ ಪ್ರಸ್ತುತ ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಿಂದ ತಲಾ ಮೂರು ಶತಕ ಮತ್ತು ಅರ್ಧಶತಕಗಳ ಸಹಿತ 566 ರನ್​ಗಳಿಸಿದ್ದಾರೆ. ಇದು ರಾಜಸ್ಥಾನ್ ರಾಯಲ್ಸ್​ ತಂಡ ಪರ ಬ್ಯಾಟರ್​ ಒಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಮೋಘ ಲಯದಲ್ಲಿರುವ ಇಂಗ್ಲೆಂಡ್ ಬ್ಯಾಟರ್ ಜಾಸ್ ಬಟ್ಲರ್​ ರಾಜಸ್ಥಾನ್ ಪರ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್​ ಗಳಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಜಾಸ್ ಬಟ್ಲರ್​ ಪ್ರಸ್ತುತ ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಿಂದ ತಲಾ ಮೂರು ಶತಕ ಮತ್ತು ಅರ್ಧಶತಕಗಳ ಸಹಿತ 566 ರನ್​ಗಳಿಸಿದ್ದಾರೆ. ಇದು ರಾಜಸ್ಥಾನ್ ರಾಯಲ್ಸ್​ ತಂಡ ಪರ ಬ್ಯಾಟರ್​ ಒಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಬಟ್ಲರ್​ಗೂ ಮುನ್ನ ಅಜಿಂಕ್ಯ ರಹಾನೆ ಅತಿ ಹೆಚ್ಚು ರನ್​ಗಳಿಸಿದ ದಾಖಲೆ ಹೊಂದಿದ್ದರು. ರಹಾನೆ 2012ರ ಆವೃತ್ತಿಯಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳ ಸಹಿತ 560 ರನ್​ಗಳಿಸಿದ್ದರು. ಕಳೆದ 10 ವರ್ಷಗಳ ಕಾಲ ಇದೇ ರಾಯಲ್ಸ್​ ತಂಡದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೀಗ ಬಟ್ಲರ್​ ಇನ್ನೂ 5 ಲೀಗ್ ಪಂದ್ಯಗಳಿರುವಾಗಲೇ ರಾಯಲ್ಸ್ ತಂಡದ ಗರಿಷ್ಠ ಸ್ಕೋರರ್​ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಬಟ್ಲರ್ 2018ರ ಆವೃತ್ತಿಯಲ್ಲಿ 548 ರನ್​ಗಳಿಸಿದ್ದು 3ನೇ ಅತ್ಯುತ್ತಮ ಪ್ರದರ್ಶನವಾಗಿದೆ. 2013ರಲ್ಲಿ ಶೇನ್ ವಾಟ್ಸನ್​ 543, 2015ರಲ್ಲಿ ರಹಾನೆ 540 ರನ್​ಗಳಿಸಿದ್ದರು.

ವಿರಾಟ್​ ಕೊಹ್ಲಿ ದಾಖಲೆ ಮೇಲೆ ಕಣ್ಣು: 2016ರ ಆವೃತ್ತಿಯಲ್ಲಿ ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 4 ಶತಕಗಳ ಸಹಿತ 973 ರನ್​ಗಳಿಸಿದ್ದರು. ಇದೀಗ ಬಟ್ಲರ್​ 9 ಪಂದ್ಯಗಳಿಂದ 566 ರನ್​ಗಳಿಸಿದ್ದಾರೆ. ಇನ್ಮೂ 5 ಲೀಗ್​ ಪಂದ್ಯಗಳು ಹಾಗೂ ರಾಜಸ್ಥಾನ್ ರಾಯಲ್ಸ್​ ಪ್ಲೇ ಆಫ್​ ಪ್ರವೇಶಿಸುವ ಅವಕಾಶ ಹೆಚ್ಚಿರುವುದರಿಂದ ಕನಿಷ್ಟ ಒಂದು ಪಂದ್ಯ ಹೆಚ್ಚುವರಿಯಾಗಿ ಸಿಗಲಿದೆ. ಈ ಆರು ಪಂದ್ಯಗಳಲ್ಲಿ ಬಟ್ಲರ್​ 282 ರನ್​ಗಳಿಸಿದರೆ ಡೇವಿಡ್​ ವಾರ್ನರ್(848)​ ದಾಖಲೆಯನ್ನು, 407 ರನ್​ಗಳಿಸಿದರೆ ವಿರಾಟ್​ ಕೊಹ್ಲಿ ದಾಖಲೆಯನ್ನು ಬ್ರೇಕ್ ಮಾಡುವ ಅವಕಾಶವಿದೆ.

ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನವನ್ನು ಉಳಿಸಿಕೊಂಡರೆ 7 ಪಂದ್ಯ , ಫೈನಲ್ ಪ್ರವೇಶಿಸಿದರೆ 8 ಪಂದ್ಯಗಳನ್ನಾಡುವ ಅವಕಾಶ ಬಟ್ಲರ್​ಗೆ ಸಿಗಲಿದ್ದು, ಖಂಡಿತ ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶ ಸಿಗಲಿದೆ.

ಇದನ್ನೂ ಓದಿ:ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ ಕ್ಯಾಪ್ಟನ್ಸಿ.. ಐ ಅವಾಯ್ಡ್​, ಬಟ್​ ಕ್ಯಾಪ್ಟನ್ಸಿ ಲೈಕ್ಸ್​ ಮಿ.. ಐ ಕಾಂಟ್ ಅವಾಯ್ಡ್​​.. ಕೆಜಿಎಫ್​​ ಶೈಲಿಯಲ್ಲಿ ಧೋನಿ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.