ETV Bharat / sports

ಪಾಕ್ ಸರಣಿ ರದ್ದು ಮಾಡಿಕೊಂಡ ನ್ಯೂಜಿಲ್ಯಾಂಡ್​​​: ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ

author img

By

Published : Sep 22, 2021, 6:04 PM IST

ಬರೋಬ್ಬರಿ 18 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ಕ್ರಿಕೆಟ್​​ ಸರಣಿಯಲ್ಲಿ ಭಾಗಿಯಾಗದೇ ತವರಿಗೆ ಮರಳಿದೆ. ಈ ವಿಚಾರದಲ್ಲಿ ಪಾಕ್​ ಸರ್ಕಾರ ಇದೀಗ ಭಾರತವನ್ನು ಅನವಶ್ಯಕವಾಗಿ ಎಳೆದು ತಂದಿದೆ.

ಸಚಿವ ಫವಾದ್​ ಚೌಧರಿ
ಸಚಿವ ಫವಾದ್​ ಚೌಧರಿ

ಇಸ್ಲಾಮಾಬಾದ್​​(ಪಾಕಿಸ್ತಾನ): ಭದ್ರತೆ ಕಾರಣ ನೀಡಿ, ಪಾಕ್​ ವಿರುದ್ಧದ ಕ್ರಿಕೆಟ್​ ಸರಣಿಯಿಂದ ನ್ಯೂಜಿಲ್ಯಾಂಡ್​ ತಂಡ ಹಿಂದೆ ಸರಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ.

ಅಲ್ಲಿನ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅಲ್ಲಿನ ಮಾಹಿತಿ ತಂತ್ರಜ್ಞಾನ ಸಚಿವ ಫವಾದ್​ ಚೌಧರಿ, 'ಪಾಕ್​​ ವಿರುದ್ಧದ ಏಕದಿನ ಸರಣಿಯಿಂದ ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡ ಹೊರಹೋಗಲು ಭಾರತ ಕಾರಣ. ಅಲ್ಲಿಂದಲೇ ಇ-ಮೇಲ್​ ಮೂಲಕ ಬೆದರಿಕೆ ಕರೆ ಬಂದಿದೆ' ಎಂದು ಆರೋಪಿಸಿದ್ದಾರೆ.

ಇ-ಮೇಲ್ ಅನ್ನು ಭಾರತದಲ್ಲಿ ಜನರೇಟ್ ಮಾಡಲಾಗಿದೆ. ಆದರೆ VPN ಮೂಲಕ ಸಿಂಗಾಪುರ ಎಂಬ ಸ್ಥಳ ತೋರಿಸುತ್ತಿದೆ ಎಂದಿದ್ದಾರೆ. ಈ ಹಿಂದೆ ವೆಸ್ಟ್​ ಇಂಡೀಸ್​ ತಂಡ ಪಾಕ್​ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲೂ ಇದೇ ರೀತಿಯ ನಕಲಿ ಬೆದರಿಕೆ ಕರೆ ಬಂದಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಜಿಲ್ಯಾಂಡ್​-ಇಂಗ್ಲೆಂಡ್​ ಕ್ರಿಕೆಟ್‌ ಪ್ರವಾಸ ರದ್ದತಿಯಿಂದ ನಷ್ಟ: ಕಾನೂನು ಸಲಹೆ ಮೊರೆ ಹೋದ ಪಾಕ್

ನ್ಯೂಜಿಲ್ಯಾಂಡ್ ತಂಡ ಪಾಕ್​ಗೆ ತೆರಳಿ ಏಕದಿನ ಸರಣಿಯಲ್ಲಿ ಭಾಗಿಯಾಗದೇ ಇದೀಗ ತವರಿಗೆ ಮರಳಿದ್ದು, ಇಂಗ್ಲೆಂಡ್ ಕೂಡ ಇದೇ ಹಾದಿ ತುಳಿದಿದೆ. ಇದರಿಂದ ಅಲ್ಲಿನ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊಡೆತ ಬಿದ್ದಿದೆ. ಈ ವಿಚಾರವಾಗಿ ನಿನ್ನೆ ಕೂಡ ಮಾತನಾಡಿದ್ದ ಚೌಧರಿ, ನ್ಯೂಜಿಲ್ಯಾಂಡ್​​-ಇಂಗ್ಲೆಂಡ್ ತಂಡಗಳು ಪ್ರವಾಸ ರದ್ದುಗೊಳಿಸಿರುವ ಕಾರಣ ನಮಗೆ ಸಾಕಷ್ಟು ನಷ್ಟವಾಗಿದೆ. ಎರಡೂ ಕ್ರಿಕೆಟ್ ಮಂಡಳಿಗಳ ವಿರುದ್ಧ ಕಾನೂನು ಸಲಹೆ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪಾಕ್​ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಲಾಬಿ ನಡೆಯುತ್ತಿದೆ. ಅದು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.