ETV Bharat / sports

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ವನಿತೆಯರು.. ಭಾರತದ ಪರ ಶೆಫಾಲಿ ಪದಾರ್ಪಣೆ

author img

By

Published : Jun 16, 2021, 3:49 PM IST

England Women vs India Women only test
ಭಾರತ ಮಹಳಾ ತಂಡ vs ಇಂಗ್ಲೆಂಡ್ ಮಹಿಳಾ ತಂಡ

ಭಾರತ ತಂಡದ 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಟೆಸ್ಟ್​ ಪಂದ್ಯವನ್ನಾಡಿತ್ತು. ಇದೀಗ 7 ವರ್ಷಗಳ ಬಳಿಕ ಮತ್ತೆ ಬಿಳಿ ಜರ್ಸಿಯಲ್ಲಿ ಆಡಲಿದೆ. ಭಾರತ ತಂಡದ ಪರ ಲೇಡಿ ಸೆಹ್ವಾಗ್ ಎಂದೇ ಖ್ಯಾತರಾಗಿರುವ ಯುವ ಆಟಗಾರ್ತಿ ಶೆಫಾಲಿ ವರ್ಮಾ ಸೇರಿದಂತೆ ಆಲ್​ರೌಂಡರ್​ ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್​, ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಮತ್ತು ಸ್ನೇಹ್ ರಾಣಾ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ..

ಬ್ರಿಸ್ಟೋಲ್ : 7 ವರ್ಷಗಳ ನಂತರ ಟೆಸ್ಟ್​ ಕ್ರಿಕೆಟ್​ಗೆ ಮರಳಿರುವ ಭಾರತದ ವನಿತೆಯರ ವಿರುದ್ಧ ಟಾಸ್​ ಗೆದ್ದ ಅತಿಥೇಯ ಇಂಗ್ಲೆಂಡ್ ಮಹಿಳಾ ತಂಡ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಭಾರತ ತಂಡದ 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಟೆಸ್ಟ್​ ಪಂದ್ಯವನ್ನಾಡಿತ್ತು. ಇದೀಗ 7 ವರ್ಷಗಳ ಬಳಿಕ ಮತ್ತೆ ಬಿಳಿ ಜರ್ಸಿಯಲ್ಲಿ ಆಡಲಿದೆ.

ಭಾರತ ತಂಡದ ಪರ ಲೇಡಿ ಸೆಹ್ವಾಗ್ ಎಂದೇ ಖ್ಯಾತರಾಗಿರುವ ಯುವ ಆಟಗಾರ್ತಿ ಶೆಫಾಲಿ ವರ್ಮಾ ಸೇರಿದಂತೆ ಆಲ್​ರೌಂಡರ್​ ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್​, ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಮತ್ತು ಸ್ನೇಹ್ ರಾಣಾ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲೆ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ಟೆಸ್ಟ್​​ ತಂಡವನ್ನು ಪ್ರತಿನಿಧಿಸಲಿರುವ ಮೊದಲ ಕಪ್ಪು ವರ್ಣೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ವನಿತೆಯರ ತಂಡಗಳು ಒಟ್ಟು 13 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಇದರಲ್ಲಿ ಭಾರತ 2ರಲ್ಲಿ ಜಯಸಿಸಿದ್ದರೆ, ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ವಿಶೇಷವೆಂದರೆ 2 ತಂಡಗಳು ಸೋಲು ಕಂಡಿರುವುದು ತವರಿನಲ್ಲಿ. ಉಳಿದ 10 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಭಾರತ ಮಹಿಳೆಯರ ತಂಡ : ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಪೂನಮ್ ರಾವುತ್, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ತಾನಿಯಾ ಭಾಟಿಯಾ (ಪ), ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ

ಇಂಗ್ಲೆಂಡ್ ಮಹಿಳಾ ತಂಡ : ಲಾರೆನ್ ವಿನ್ಫೀಲ್ಡ್ ಹಿಲ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾಯಕಿ), ನಟಾಲಿಯಾ ಸೀವರ್, ಆ್ಯಮಿ ಎಲ್ಲೆನ್ ಜೋನ್ಸ್ (ಕೀಪರ್), ಸೋಫಿಯಾ ಡಂಕ್ಲೆ, ಜಾರ್ಜಿಯಾ ಎಲ್ವಿಸ್, ಕ್ಯಾಥರೀನ್ ಬ್ರಂಟ್, ಅನ್ಯಾ ಶ್ರಬ್ಸೋಲ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್

ಇದನ್ನು ಓದಿ:IND vs NZ: ಐಸಿಸಿ ಟೂರ್ನಮೆಂಟ್​ನಲ್ಲಿ 11 ಬಾರಿ ಮುಖಾಮುಖಿ, ಯಾವ ತಂಡ ಬೆಸ್ಟ್​ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.