ETV Bharat / sports

ಕೊನೆಯ ಓವರ್​ನಲ್ಲಿ 15 ರನ್.. ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆದ್ದ ಮಹಿಳಾ ಕ್ರಿಕೆಟರ್​..

author img

By

Published : Nov 17, 2019, 4:28 PM IST

ತಂಡದ ಗೆಲುವಿಗೆ ಕೊನೆಯ ಎಸೆತದಲ್ಲಿ 5 ರನ್​ ಅಗತ್ಯವಿದ್ದ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್​ನ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಮರಿಝಾನ್ನೆ ಕಾಪ್​ ಅವರ ಓವರ್​ನಲ್ಲಿ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗೆ ಕರ್ಟ್ನಿ ವೆಬ್​ ಸಿಕ್ಸರ್​ ಸಿಡಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

last ball six

ಸಿಡ್ನಿ: ಮಹಿಳಾ ಕ್ರಿಕೆಟ್​ನಲ್ಲಿ ದೊಡ್ಡ ಟಿ20 ಲೀಗ್​​ಆದ ಆಸ್ಟ್ರೇಲಿಯಾದ ಬಿಗ್​ಬ್ಯಾಶ್​ನಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್​ ಮಹಿಳಾ ತಂಡದ ಆಟಗಾರ್ತಿ ಕರ್ಟ್ನಿ ವೆಬ್​ ಕೊನೆಯ ಎಸೆತದಲ್ಲಿ ಸಿಕ್ಸರ್​ ಬಾರಿಸುವ ಮೂಲಕ ತಾವೂ ಯಾವ ಪುರುಷ ಕ್ರಿಕೆಟರ್‌ಗೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಮಹಿಳಾ ಬಿಗ್​ಬ್ಯಾಶ್​ ಲೀಗ್​ನಲ್ಲಿ ಬಲಿಷ್ಠ ತಂಡದವಾದ ಸಿಡ್ನಿ ಸಿಕ್ಸರ್ ಮೊದಲು ಬ್ಯಾಟಿಂಗ್​ ನಡೆಸಿ 20 ಓವರ್​ಗಳಲ್ಲಿ 139 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಮೆಲ್ಬೋರ್ನ್​ ರೆನೆಗೇಡ್ಸ್​​ ವಿರುದ್ಧ ಡೇನಿಯಲ್​ ವೇಟ್​ ಅವರ ಅರ್ಧಶತಕ ಹಾಗೂ ಕರ್ಟ್ನಿ ವೆಬ್​ರ ಕೊನೆ ಎಸೆತದಲ್ಲಿ ಸಿಡಿಸಿದ ಆಕರ್ಷಕ ಸಿಕ್ಸರ್​ ನೆರವನಿಂದ ರೋಚಕ ಜಯ ಸಾಧಿಸಿತು.

ಕೊನೆಯ ಓವರ್​ನಲ್ಲಿ ಬೇಕಿತ್ತು 15 ರನ್​ :

ರೆನೆಗೇರ್ಡ್ಸ್​ ತಂಡಕ್ಕೆ ಕೊನೆಯ ಓವರ್​ನಲ್ಲಿ 15 ರನ್​ ಅಗತ್ಯವಿತ್ತು. ಕಾರ್ಲಿ ಲೀಸನ್​​(15) ಹಾಗೂ ಕಾರ್ಟ್ನಿ ವೆಬ್​(19) ಕ್ರೀಸ್​ನಲ್ಲಿದ್ದರು. ದಕ್ಷಿಣ ಆಫ್ರಿಕಾದ ವೇಗಿ ಮರಿಝಾನ್ನೆ ಕಾಪ್ ಬೌಲಿಂಗ್​ನಲ್ಲಿದ್ದರು. ಮೊದಲ ಎಸೆತದಲ್ಲಿ ಕಾರ್ಲಿ ಲೀಸನ್​ ಸಿಂಗಲ್​ ತೆಗೆದುಕೊಂಡರು, ನಂತರದ 2 ಎಸೆತಗಳಲ್ಲಿ ವೆಬ್​ 2 ಹಾಗೂ 4 ರನ್​ ಬಾರಿಸಿದರು. 4ನೇ ಎಸೆತದಲ್ಲಿ ಒಂದು ರನ್​ ಪೂರೈಸಿ ಲೀಸನ್ ರನ್​ಔಟ್​ ಆದರು. ಕೊನೆ ಎರಡು ಎಸೆತದಲ್ಲಿ 7ರನ್​ ಅಗತ್ಯವಿತ್ತು, 5ನೇ ಎಸೆತದಲ್ಲಿ 2 ರನ್​ ತೆಗೆದುಕೊಂಡ ವೆಬ್​ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿ ಮೆಲ್ಬೋರ್ನ್​ ರೆನೆಗೇಡ್ಸ್​ ತಂಡಕ್ಕೆ ಗೆಲುವು ತಂದುಕೊಟ್ಟರು.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.