ETV Bharat / sports

ಹರಿಣಗಳನ್ನು ಬಗ್ಗುಬಡಿದು ಸರಣಿ ಕೈವಶ ಮಾಡಿದ ಭಾರತದ ವನಿತೆಯರು...!

author img

By

Published : Oct 4, 2019, 12:59 PM IST

ಹರಿಣಗಳನ್ನು ಬಗ್ಗುಬಡಿದು ಸರಣಿ ಕೈವಶ ಮಾಡಿದ ಭಾರತದ ವನಿತೆಯರು

ಸೂರತ್​ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರ ಟೀಂ 5 ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಮಣಿಸಿ ಸರಣಿ ವಶಪಡಿಸಿಕೊಂಡಿದೆ.

ಸೂರತ್​: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತೀಯ ವನಿತೆಯರ ಟೀಂ ಪ್ರಾಬಲ್ಯ ಸಾಧಿಸಿದ್ದು, ಇನ್ನೂ ಒಂದು ಪಂದ್ಯ ಉಳಿದಿರುವಂತೆ 3-0ಯಲ್ಲಿ ಸರಣಿ ಜಯಿಸಿದೆ.

ಸೂರತ್​ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 5 ವಿಕೆಟ್​ಗಳಿಂದ ದಕ್ಷಿಣಆಫ್ರಿಕಾದ ಮಹಿಳಾ ತಂಡ ಮಣಿಸಿ ಸರಣಿ ವಶಪಡಿಸಿಕೊಂಡಿದೆ. ಟಾಸ್​ ಗೆದ್ದು ಹರಿಣಗಳಿಗೆ ಬ್ಯಾಟಿಂಗ್​ ಆಹ್ವಾನ ನೀಡಿದ ಹರ್ಮನ್​ಪ್ರೀತ್​ ಕೌರ್​ ನಿರ್ಧಾರವನ್ನು ಭಾರತೀಯ ಬೌಲರ್​ಗಳು ಸಮರ್ಥಿಸಿಕೊಂಡರು. ಭಾರತದ ಸ್ಪಿನ್​ ಬೌಲಿಂಗ್​ ಮುಂದೆ ಪರದಾಡಿದ ದ.ಆಫ್ರಿಕಾ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 98 ರನ್​ಗಳಿಸಿತು.

ರಾಧಾ ಯಾದವ್ 3 ಹಾಗೂ ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರು. ಶಿಖಾ ಪಾಂಡೆ, ಹರ್ಮನ್​ಪ್ರೀತ್ ಕೌರ್ ಹಾಗೂ ಪೂನಂ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. 99 ರನ್​ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ನಾಯಕಿ ಹರ್ಮನ್​ಪ್ರೀತ್ ಕೌರ್ ಗೆಲುವು ಸಾಧ್ಯವಾಗಿಸಿದರು. ಕೌರ್ 34 ರನ್, ಶಫಾಲಿ ಶರ್ಮಾ 14 ಹಾಗೂ ದೀಪ್ತಿ ಶರ್ಮಾ 16 ರನ್ ಗಳಿಸಿ ಐದು ವಿಕೆಟ್ ನಷ್ಟಕ್ಕೆ ಗೆಲುವು ಭಾರತದ ಪಾಲಾಯಿತು.

ಇಂದು ಸೂರತ್​ನಲ್ಲಿ 6ನೇ ಟಿ20 ಪಂದ್ಯ ನಡೆಯಲಿದ್ದು, ಈಗಾಗಲೇ ಸರಣಿ ಗೆದ್ದಿರುವ ಭಾರತಕ್ಕೆ ಈ ಪಂದ್ಯ ಅಷ್ಟೇನೂ ಮಹತ್ವ ಹೊಂದಿಲ್ಲ.

Intro:Body:

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ ಮಹಿಳಾ ತಂಡ



ಸೂರತ್​: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತೀಯ ವನಿತೆಯರು ಪ್ರಾಬಲ್ಯ ಸಾಧಿಸಿದ್ದು, ಇನ್ನು ಒಂದು ಪಂದ್ಯ ಉಳಿದಿರುವಂತೆ 3-0ಯಲ್ಲಿ ಸರಣಿ ಜಯಿಸಿದೆ.



ಸೂರತ್​ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 5 ವಿಕೆಟ್​ಗಳಿಂದ ದ.ಆಫ್ರಿಕಾದ ಮಹಿಳಾ ತಂಡ ಮಣಿಸಿ ಸರಣಿ ವಶಪಡಿಸಿಕೊಂಡಿದೆ.



ಟಾಸ್​ ಗೆದ್ದು ಹರಿಣಗಳಿಗೆ ಬ್ಯಾಟಿಂಗ್​ ಆಹ್ವಾನ ನೀಡಿದ  ಹರ್ಮನ್​ಪ್ರೀತ್​ ಕೌರ್​ ನಿರ್ಧಾರವನ್ನು ಭಾರತೀಯ ಬೌಲರ್​ಗಳು ಸಮರ್ಥಿಸಿಕೊಂಡರು. ಭಾರತದ ಸ್ಪಿನ್​ ಬೌಲಿಂಗ್​ ಮುಂದೆ ಪರದಾಡಿದ ದ.ಆಫ್ರಿಕಾ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 98 ರನ್​ಗಳಿಸಿತು.



ರಾಧಾ ಯಾದವ್ 3 ಹಾಗೂ ದೀಪ್ತಿ ಶರ್ಮ 2 ವಿಕೆಟ್ ಕಿತ್ತರು. ಶಿಖಾ ಪಾಂಡೆ, ಹರ್ಮನ್​ಪ್ರೀತ್ ಕೌರ್ ಹಾಗೂ ಪೂನಮ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.



99 ರನ್​ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ನಾಯಕಿ ಹರ್ಮನ್​ಪ್ರೀತ್ ಕೌರ್ ಗೆಲುವು ಸಾಧ್ಯವಾಗಿಸಿದರು. ಕೌರ್ 34 ರನ್, ಶಫಾಲಿ ಶರ್ಮ 14 ಹಾಗೂ ದೀಪ್ತಿ ಶರ್ಮ 16 ರನ್ ಗಳಿಸಿ ಐದು ವಿಕೆಟ್ ನಷ್ಟಕ್ಕೆ ಗೆಲುವು ಭಾರತದ ಪಾಲಾಯಿತು.



ಪ್ರವಾಸಿ ತಂಡದ ಪರ ಶಬ್ನಿಮ್​ ಇಸ್ಮಾಯಿಲ್ 2 ವಿಕೆಟ್ ಪಡೆದು ಮಿಂಚಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.