ETV Bharat / sports

7 ದಿನಗಳ ಕ್ವಾರಂಟೈನ್ ಮುಗಿಸಿ ತರಬೇತಿಗೆ ಹಾಜರಾದ ಮಂಬೈ ಇಂಡಿಯನ್ಸ್​ನ ಪೊಲಾರ್ಡ್​

author img

By

Published : Apr 7, 2021, 5:06 PM IST

ವೆಸ್ಟ್​ ಇಂಡೀಸ್​ನಿಂದ ಬಂದು ಚೆನ್ನೈನಲ್ಲಿ ಮುಂಬೈ ಯುನಿಟ್ ಸೇರಿದ್ದ ಪೊಲಾರ್ಡ್, ಬಿಸಿಸಿಐ ಫ್ರೋಟೋಕಾಲ್​ಗಳ ಪ್ರಕಾರ 7 ದಿನಗಳ ಕ್ವಾರಂಟೈನ್​ ಮುಗಿಸಿದ್ದಾರೆ. ಆದ್ದರಿಂದಲೇ ಮುಂಬೈ ಇಂಡಿಯನ್ಸ್​ ತರಬೇತಿ ಶಿಬಿರಗಳಲ್ಲಿ ಕಾಣಿಸುತ್ತಿರಲಿಲ್ಲ..

ಕೀರನ್ ಪೊಲಾರ್ಡ್​
ಕೀರನ್ ಪೊಲಾರ್ಡ್​

ನವದೆಹಲಿ : ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡ ಈಗಾಗಲೇ ಚೆನ್ನೈನಲ್ಲಿ ತರಬೇತಿ ಶಿಬಿರ ಆರಂಭಿಸಿದೆ. 14ನೇ ಆವೃತ್ತಿಯ ಲೀಗ್​ಗೆ ಕೇವಲ 2 ದಿನಗಳಿದೆ. ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಇದೀಗ ಆಪತ್ಬಾಂಧವ ಕೀರನ್ ಪೊಲಾರ್ಡ್​ 7 ದಿನಗಳ ಖಡ್ಡಾಯ ಕ್ವಾರಂಟೈನ್ ಮುಗಿಸಿದ್ದಾರೆ. ಇಂದಿನಿಂದ ತಂಡದ ಜೊತೆಗೆ ತರಬೇತಿ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮುಂಬೈ ಇಂಡಿಯನ್ಸ್​ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ವಿಡಿಯೋ ಮತ್ತು ಫೋಟೊಗಳಲ್ಲಿ ಪೊಲಾರ್ಡ್​ ಕಾಣದೆ ಇರುವುದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

"ವೆಸ್ಟ್​ ಇಂಡೀಸ್​ನಿಂದ ಬಂದು ಚೆನ್ನೈನಲ್ಲಿ ಮುಂಬೈ ಯುನಿಟ್ ಸೇರಿದ್ದ ಪೊಲಾರ್ಡ್, ಬಿಸಿಸಿಐ ಫ್ರೋಟೋಕಾಲ್​ಗಳ ಪ್ರಕಾರ 7 ದಿನಗಳ ಕ್ವಾರಂಟೈನ್​ ಮುಗಿಸಿದ್ದಾರೆ. ಆದ್ದರಿಂದಲೇ ಮುಂಬೈ ಇಂಡಿಯನ್ಸ್​ ತರಬೇತಿ ಶಿಬಿರಗಳಲ್ಲಿ ಕಾಣಿಸುತ್ತಿರಲಿಲ್ಲ" ಎಂದು ಫ್ರಾಂಚೈಸಿ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದೆ.

ಐಪಿಎಲ್​ ಎಸ್​ಒಪಿ ಭಾರತ ಮತ್ತು ಇಂಗ್ಲೆಂಡ್​ ಸರಣಿಯಲ್ಲಿ ಪಾಲ್ಗೊಂಡಿದ್ದ ಆಟಗಾರರನ್ನು ಮಾತ್ರ ನೇರವಾಗಿ ಐಪಿಎಲ್ ಬಯೋಬಬಲ್​ಗೆ ಸೇರುವ ಅವಕಾಶ ನೀಡಿತ್ತು. ಉಳಿದವರು ಖಡ್ಡಾಯ ಕ್ವಾರಂಟೈನ್​ಗೆ ಒಳಗಾಗಬೇಕಿತ್ತು. ಪುಣೆ ಬಬಲ್​ನಿಂದ ಹೊರ ಹೋಗಿದ್ದ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕೂಡ ಆರ್​ಸಿಬಿ ಬಳಗ ಸೇರುವ ಮುನ್ನ 7 ದಿನಗಳ ಕ್ವಾರಂಟೈನ್​ಗೆ ಒಳಗಾಗಿದ್ದರು.

ಬಿಸಿಸಿಐ ಐಪಿಎಲ್​ನ ಯಶಸ್ವಿಯಾಗಿ ನೆರವೇರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಆಟಗಾರರು, ಕುಟುಂಬಸ್ಥರು, ಸಿಬ್ಬಂದಿ ಬಬಲ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನು ಓದಿ:ದೇವದತ್​ ಪಡಿಕ್ಕಲ್​ ಕೋವಿಡ್​ ಟೆಸ್ಟ್ ಮತ್ತೆ​ ನೆಗೆಟಿವ್: ಆರ್​ಸಿಬಿ ಸೇರಿದ ಯುವ ಓಪನರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.