ETV Bharat / sports

ತ್ರಿಕೋನ ಟಿ20 ಸರಣಿ: ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಇಂಗ್ಲೆಂಡ್ ಮನೆಗೆ, ಭಾರತ ಫೈನಲ್​ಗೆ

author img

By

Published : Feb 9, 2020, 12:55 PM IST

T20 tri-series final
ತ್ರಿಕೋನ ಟಿ20 ಸರಣಿ

ಭಾನುವಾರದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ ತಂಡ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿತ್ತು. ಭಾರತ ತಂಡ 4 ಪಂದ್ಯಗಳಲ್ಲಿ ತಲಾ ಎರಡು ಸೋಲು ಹಾಗೂ ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ 3 ಪಂದ್ಯಗಳಲ್ಲಿ 2 ಸೋಲು ಹಾಗೂ 1 ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿತ್ತು.

ಮೆಲ್ಬೋರ್ನ್(ಆಸ್ಟ್ರೇಲಿಯಾ)​: ಮೂರು ತಂಡಗಳ ಫೈನಲ್​ ಸುತ್ತು ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೊನೆಯ ಲೀಗ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಆಸೀಸ್​ ಮಹಿಳೆಯರ ವಿರುದ್ಧ ಸೋತು ಹೊರಬಿದ್ದರೆ, ರನ್​ ರೇಟ್​ ಆಧಾರದ ಮೇಲೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್​ಗೇರಿವೆ.

ಭಾನುವಾರದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ ತಂಡ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿತ್ತು. ಭಾರತ ತಂಡ 4 ಪಂದ್ಯಗಳಲ್ಲಿ ತಲಾ ಎರಡು ಸೋಲು ಹಾಗೂ ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ 3 ಪಂದ್ಯಗಳಲ್ಲಿ 2 ಸೋಲು ಹಾಗೂ 1 ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿತ್ತು.

ಫೈನಲ್​ ಪ್ರವೇಶಕ್ಕಾಗಿ ಆಸ್ಟ್ರೇಲಿಯಾ ಗೆಲ್ಲಲೇಬೇಕಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿ 132 ರನ್ ​ಗಳಿಸಿತ್ತು. ಬೆತ್​ ಮೋನಿ 50 ರನ್ ​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು. ಇತ್ತ ಇಂಗ್ಲೆಂಡ್​ ಅಗ್ರಸ್ಥಾನದಲ್ಲಿದ್ದರಿಂದ ಈ ಪಂದ್ಯವನ್ನು ಗೆಲ್ಲದಿದ್ದರೂ ರನ್​ ರೇಟ್​ಗಾಗಿ ಕಡಿಮೆಯಂದರೂ 123 ರನ್​ ಗಳಿಸಬೇಕಿತ್ತು. ಆದರೆ ಆಸೀಸ್​ ಬೌಲರ್​ಗಳ ದಾಳಿಗೆ ಕುಸಿದ ಇಂಗ್ಲೆಂಡ್​ ವನಿತೆಯರು 116 ರನ್​ಗಳಿಸಲಷ್ಟೇ ಶಕ್ತವಾಗಿ 16 ರನ್​ಗಳ ಸೋಲುಕಂಡಿತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದರು.

ಆಸ್ಟ್ರೇಲಿಯಾ ಪರ ಸೋಫಿಯಾ ಮೊಲಿನೆಕ್ಸ್ 19 ರನ್​ ನೀಡಿ 3 ವಿಕೆಟ್​, ಟಾಯ್ಲ ವೇಮಿನಿಕ್​ 18 ರನ್​ ನೀಡಿ 2 ವಿಕೆಟ್ ಪಡೆದರೆ, ಮೇಗನ್​ ಸ್ಕಟ್​ ಹಾಗೂ ಜೆಸ್​ ಜೊನಾಸೆನ್​ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರಲ್ಲದೆ ಇಂಗ್ಲೆಂಡ್​ ತಂಡವನ್ನು 116 ರನ್​ಗಳಿಗೆ ಕಟ್ಟಿಹಾಕುವ ಮೂಲಕ ಭಾರತ ತಂಡ ಫೈನಲ್​ ಪ್ರವೇಶಿಸುವಂತೆ ಮಾಡಿದರು.

ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ಭಾರತ ಬುಧವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.