ETV Bharat / sports

34ನೇ ವಸಂತಕ್ಕೆ ಕಾಲಿಟ್ಟ ರಹಾನೆ.. ವಿಭಿನ್ನ ರೀತಿಯಲ್ಲಿ ವಿಶ್ ಮಾಡಿದ ಸೆಹ್ವಾಗ್​

author img

By

Published : Jun 6, 2022, 12:50 PM IST

Ajinkya Rahane birthday
Ajinkya Rahane birthday

ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಅಜಿಂಕ್ಯಾ ರಹಾನೆ ಇಂದು ತಮ್ಮ 34ನೇ ವರ್ಷದ ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿದ್ದು, ಅವರಿಗೆ ಅನೇಕರು ಶುಭಾಶಯ ಕೋರಿದ್ದಾರೆ.

ಹೈದರಾಬಾದ್: ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟಿಗೆ ಏಳು-ಬೀಳು ಕಂಡಿರುವ ಟೀಂ ಇಂಡಿಯಾ ಟೆಸ್ಟ್​ನ ಮಾಜಿ ಕ್ಯಾಪ್ಟನ್ ಅಜಿಂಕ್ಯಾ ರಹಾನೆ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.

  • One of the most underrated cricketers, and the man who led India to it's greatest ever overseas Test series win. Happy Birthday @ajinkyarahane88 . May God give you the strength to fight every challenge. pic.twitter.com/0isbDzFGOc

    — Virender Sehwag (@virendersehwag) June 6, 2022 " class="align-text-top noRightClick twitterSection" data=" ">

ಟೆಸ್ಟ್​ ಕ್ರಿಕೆಟ್​​ನಲ್ಲಿ ಭಾರತ ತಂಡವನ್ನ ಸಾಗರೋತ್ತರ ದೇಶಗಳಲ್ಲಿ ಗೆಲುವಿಗೆ ಕಾರಣವಾದ ಪ್ರತಿಭೆ, ಅತ್ಯಂತ ಕಡಿಮೆ ಮೌಲ್ಯಮಾಪನಕ್ಕೊಳಗಾಗಿರುವ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ರಹಾನೆಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಸೆಹ್ವಾಗ್ ಶುಭ ಕೋರಿದ್ದು, ಪ್ರತಿಯೊಂದು ಸವಾಲು ಎದುರಿಸುವ ಶಕ್ತಿಯನ್ನ ದೇವರು ನಿಮಗೆ ನೀಡಲಿ ಎಂದಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ತಂಡದ ಚೇತೇಶ್ವರ್ ಪೂಜಾರಾ ಕೂಡ ಟ್ವೀಟ್ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯಗಳು ಬ್ರದರ್​. ಮುಂಬರುವ ದಿನಗಳಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಇದರ ಜೊತೆಗೆ ಐಸಿಸಿ, ರಾಜಸ್ಥಾನ ರಾಯಲ್ಸ್, ಹರ್ಭಜನ್ ಸಿಂಗ್ ಸಹ ರಹಾನೆಗೆ ಶುಭ ಹಾರೈಕೆ ಮಾಡಿದ್ದಾರೆ.

ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿ, ಟೆಸ್ಟ್ ತಂಡದ ಉಪನಾಯಕನ ಜವಾಬ್ದಾರಿ ಹೊತ್ತುಕೊಂಡಿದ್ದ ರಹಾನೆ ಕೆಲವೊಂದು ಟೆಸ್ಟ್​ ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿ, ಗೆಲುವು ತಂದುಕೊಟ್ಟಿದ್ದರು. ಆದರೆ, ಕಳೆದ ಕೆಲ ತಿಂಗಳಿಂದ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ, ಉಪನಾಯಕತ್ವ ಸ್ಥಾನ ಕಳೆದುಕೊಂಡಿರುವ ಜೊತೆಗೆ, ತಂಡದಿಂದ ಹೊರಬಿದ್ದಿದ್ದಾರೆ.

2011ರಲ್ಲಿ ಇಂಗ್ಲೆಂಡ್​ ವಿರುದ್ಧದ ಏಕದಿನ ಹಾಗೂ ಟಿ -20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ರಹಾನೆ, ಇಲ್ಲಿಯವರೆಗೆ 90 ಏಕದಿನ ಹಾಗೂ 20 ಟಿ-20 ಪಂದ್ಯ ಹಾಗೂ 82 ಟೆಸ್ಟ್​ಗಳನ್ನ ಆಡಿದ್ದಾರೆ. ಮೂರು ಮಾದರಿ ಪಂದ್ಯಗಳಿಂದ 8,268 ರನ್​​ಗಳಿಕೆ ಮಾಡಿದ್ದಾರೆ. ಇದೇ ವರ್ಷ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್​ ಪಂದ್ಯವನ್ನಾಡಿದ್ದಾರೆ. ಇದೀಗ ಇಂಗ್ಲೆಂಡ್​ ವಿರುದ್ಧದ ಕೊನೆ ಟೆಸ್ಟ್​ ಪಂದ್ಯದಿಂದ ಅವರನ್ನ ಕೈಬಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.