ETV Bharat / sports

ಟಿ20 ವಿಶ್ವಕಪ್: ಎಬಿಡಿ ಪ್ರಕಾರ, ಫೈನಲ್‌ಗೆ ಈ ಎರಡು ಟೀಂ, ಗೆಲ್ಲೋದು ಮಾತ್ರ ಇವರೇ!

author img

By

Published : Nov 9, 2022, 7:01 AM IST

Updated : Nov 9, 2022, 7:36 AM IST

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ತಮ್ಮ ಫೆವರಿಟ್​ ತಂಡಗಳ ಬಗ್ಗೆ ಹಲವರು ಮಾತನಾಡಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಫೈನಲ್​ ಎದುರಾಳಿಗಳು ಹಾಗೂ ಚಾಂಪಿಯನ್​ ಯಾರಾಗಲಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

AB de Villers Predicts India Will Defeat This Team In T20 World Cup Final
Etv Bharatಟಿ20 ವಿಶ್ವಕಪ್: ಫೈನಲ್​ನಲ್ಲಿ ಭಾರತ ಈ ತಂಡ ಸೋಲಿಸಿ ಚಾಂಪಿಯನ್​ ಆಗಲಿದೆ ಎಂದ ಎಬಿಡಿ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಅಂತಿಮ ಹಂತದತ್ತ ಸಾಗುತ್ತಿದೆ. ಇಂದಿನಿಂದ ಸೆಮಿಫೈನಲ್‌ ಪಂದ್ಯಗಳು ಆರಂಭವಾಗಲಿವೆ. ಈಗಾಗಲೇ ಹಲವು ಕ್ರಿಕೆಟ್​ ದಿಗ್ಗಜರು, ಕ್ರೀಡಾ ವಿಶ್ಲೇಷಕರು ಪ್ರಶಸ್ತಿ ಗೆಲ್ಲುವ ತಮ್ಮ ಫೆವರಿಟ್​ ತಂಡಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಫೈನಲ್​ ಎದುರಾಳಿಗಳು ಹಾಗೂ ಚಾಂಪಿಯನ್​ ಯಾರಾಗಲಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಎಬಿ ಡಿವಿಲಿಯರ್ಸ್ ಪ್ರಕಾರ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಎದುರಾಗಲಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಲಿದೆ. "ಭಾರತ ಮತ್ತು ನ್ಯೂಜಿಲೆಂಡ್ ಫೈನಲ್‌ನಲ್ಲಿ ಆಡಲಿವೆ ಹಾಗೂ ಭಾರತ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಭಾರತ ತಂಡದ ಆಟಗಾರರ ಫಾರ್ಮ್ ಕುರಿತು ಮಾತನಾಡಿದ ಡಿವಿಲಿಯರ್ಸ್, "ತಂಡದ ಎಲ್ಲರೂ ಉತ್ತಮವಾಗಿ ಆಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ, ವಿರಾಟ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ರೋಹಿತ್​ ಅವರಿಂದ ರನ್​ ಬಂದಿಲ್ಲ, ಆದರೆ ಅವರೂ ಕೂಡ ಲಯಕ್ಕೆ ಮರಳಲಿದ್ದಾರೆ. ರೋಹಿತ್​ ಅದ್ಭುತ ಆಟಗಾರ, ಭಾರತದ ಸಂಪೂರ್ಣ ಬ್ಯಾಟಿಂಗ್ ವಲಯವೇ ಪ್ರತಿಭಾನ್ವಿತರಿಂದ ಕೂಡಿದೆ. ಇಂಗ್ಲೆಂಡ್ ವಿರುದ್ಧ ಉತ್ತಮ ಆಟವನ್ನು ನಾನು ಎದುರು ನೋಡುತ್ತಿದ್ದೇನೆ. ಇದೊಂದು ದೊಡ್ಡ ಪರೀಕ್ಷೆ. ಭಾರತ ಸೆಮಿಫೈನಲ್‌ನಲ್ಲಿ ಗೆದ್ದರೆ, ಟ್ರೋಫಿ ಎತ್ತಿಹಿಡಿಯಲಿದೆ" ಎಂದು ಹೇಳಿದ್ದಾರೆ.

ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿಂದು ಮೊದಲ ಸೆಮಿಫೈನಲ್​ ಕದನದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಆಡಲಿವೆ. ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಗುರುವಾರ ಅಡಿಲೇಡ್‌ನಲ್ಲಿ ನಡೆಯಲಿದೆ. ಪ್ರಶಸ್ತಿ ಸುತ್ತಿನ ಹಣಾಹಣಿಯು ನ.13ರಂದು ಮೆಲ್ಬೋರ್ನ್​ನಲ್ಲಿದೆ.

ಇದನ್ನೂ ಓದಿ: ಸೆಮಿಫೈನಲ್​ಗೂ ಮುನ್ನ ಇಂಗ್ಲೆಂಡ್​ಗೆ ಶಾಕ್​.. ಶರವೇಗದ ಬೌಲರ್​ ಮಾರ್ಕ್​ವುಡ್​ಗೆ ಗಾಯ

Last Updated :Nov 9, 2022, 7:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.