ETV Bharat / sitara

'ಸದ್ದು ವಿಚಾರಣೆ ನಡೆಯುತ್ತಿದೆ'ಗೆ ಡಾಲಿ ಧನಂಜಯ್ ಸಾಥ್

author img

By

Published : Jan 16, 2022, 8:14 AM IST

ಡಾಲಿ ಧನಂಜಯ್
ಡಾಲಿ ಧನಂಜಯ್

'ಮಗಳು ಜಾನಕಿ' ಧಾರಾವಾಹಿ ಖ್ಯಾತಿಯ ನಟ ರಾಕೇಶ್ ಮಯ್ಯ ಅವರ 'ಸದ್ದು ವಿಚಾರಣೆ ನಡೆಯುತ್ತಿದೆ' ಸಿನಿಮಾಕ್ಕೆ ಡಾಲಿ ಧನಂಜಯ ಸಾಥ್ ನೀಡಿದ್ದಾರೆ. ಪೋಸ್ಟರ್ ರಿಲೀಸ್ ಮಾಡಿರುವ ಅವರು ಇಡೀ ಚಿತ್ರತಂಡ ಶುಭ ಹಾರೈಸಿದರು.

'ಸದ್ದು ವಿಚಾರಣೆ ನಡೆಯುತ್ತಿದೆ' ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಚಿತ್ರಲೋಕ ಪ್ರವೇಶಿಸಿರುವ ಹೊಸ ಯುವಕರ ತಂಡಕ್ಕೆ ನಟ ಡಾಲಿ ಧನಂಜಯ್ ಪ್ರೋತ್ಸಾಹ​ ನೀಡಿದ್ದಾರೆ.

ಕೊರೊನಾ ವೈರಸ್ ಹಾವಳಿ‌ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆ ಕಾಣುತ್ತಿತ್ತು. ಸದ್ಯಕ್ಕೆ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಡಾಲಿ ಧನಂಜಯ್ ಮೂಲಕ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿಸಿದೆ. ಪೋಸ್ಟರ್ ರಿಲೀಸ್ ಮಾಡಿರುವ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾದ ಪೋಸ್ಟರ್

ಮಗಳು ಜಾನಕಿ ಧಾರಾವಾಹಿ ಮೂಲಕ ಅಭಿಮಾನಿಗಳ ಮನಸ್ಸು ತಲುಪಿರುವ ರಾಕೇಶ್‌ ಮಯ್ಯ, ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ 'ಗೊಂಬೆಗಳ ಲವ್‌' ಸಿನಿಮಾ ನಟಿ ಪಾವನಾ ಗೌಡ ಅಭಿನಯಿಸಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್, ಕೃಷ್ಣ ಹೆಬ್ಬಾಳೆ, ಮಧು ನಂದನ್, ಜಹಾಂಗೀರ್, ರಾಘು ಶಿವಮೊಗ್ಗ, ರೋಹಿಣಿ ರಘುನಂದನ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ.

'ಶ್ರೀಮಾನ್ ಶ್ರೀಮತಿ' ಸೀರಿಯಲ್ ಹಾಗೂ 'ಲೌಡ್ ಸ್ಪೀಕರ್', 'ಕೃಷ್ಣ ಗಾರ್ಮೆಂಟ್', 'ಫೋರ್ ವಾಲ್ಸ್' ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾಸ್ಕರ್ ಆರ್.ನೀನಾಸಂ 'ಸದ್ದು ವಿಚಾರಣೆ ನಡೆಯುತ್ತಿದೆ' ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ಇದು ಇವರ ನಿರ್ದೇಶನದ ಮೊದಲ ಸಿನಿಮಾವಾಗಿದೆ.

ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾದ ಪೋಸ್ಟರ್
ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾದ ಪೋಸ್ಟರ್

ಅಶ್ವಿನಿ ಕೆ.ಎನ್ ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ , ರಾಜ್ ಕಾಂತ ಕ್ಯಾಮರಾ, ಸಚೀನ್ ಬಸ್ರೂರ್ ಮ್ಯೂಸಿಕ್, ಶಶೀಧರ್ ಪಿ ಸಂಕಲನ, ಗಂಗಮ್ ರಾಜ್ ಕೊರಿಯೋಗ್ರಾಫಿ, ಅರ್ಜುನ್ ರಾಜ್ ಸಾಹಸ, ಪ್ರಮೋದ್ ಮರವಂತೆ ಸಾಹಿತ್ಯ , ರವಿ ಬಸ್ರೂರ್, ಸಚಿನ್ ಬಸ್ರೂರ್ ಗಾಯನ ಸಿನಿಮಾದಲ್ಲಿರಲಿದೆ.

ಸಹ ನಿರ್ದೇಶನ ಕೆಲಸ ಪ್ರೇಮ್ ಕುಮಾರ್ ಹೆಚ್.ಆರ್ ನಿರ್ವಹಿಸಿದ್ದು, ಎಂ.ಎಂ.ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಥಿಯೇಟರ್​ಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.