ETV Bharat / sitara

30 ನೇ ವಸಂತಕ್ಕೆ ಕಾಲಿಟ್ಟ ಟೈಗರ್ ಶ್ರಾಫ್...ಅಮ್ಮ ಆಯೆಶಾ, ದಿಶಾ ಪಟಾನಿಯಿಂದ ಕ್ಯೂಟ್ ವಿಶ್

author img

By

Published : Mar 2, 2020, 6:53 PM IST

Tiger shroff
ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಗರ್ಲ್​ ಫ್ರೆಂಡ್ ಎನ್ನಲಾಗುತ್ತಿರುವ ದಿಶಾ ಪಟಾನಿ, 'ಬ್ಯಾಂಗ್ ಬ್ಯಾಂಗ್' ಚಿತ್ರದ ಟೈಟಲ್ ಹಾಡಿಗೆ ಟೈಗರ್ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದನ್ನು ಷೇರ್ ಮಾಡಿ ' ನಾವು ಒಟ್ಟಿಗೆ ಡ್ಯಾನ್ಸ್ ಮಾಡಿದ ಮೊದಲ ವಿಡಿಯೋ ಇದು. ನಾನು ನಿನ್ನೊಂದಿಗೆ ಡ್ಯಾನ್ಸ್ ಮಾಡುವಾಗ ನನಗೆ ಬಹಳ ನರ್ವಸ್ ಹಾಗೂ ನಾಚಿಕೆ ಆಗಿತ್ತು. ನಿನಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಶುಭ ಕೋರಿದ್ದಾರೆ.

ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರ ಟೈಗರ್ ಶ್ರಾಫ್​​​ಗೆ ಇಂದು ಬರ್ತಡೇ ಸಂಭ್ರಮ. 30 ನೇ ವಸಂತಕ್ಕೆ ಕಾಲಿಟ್ಟಿರುವ ಟೈಗರ್ ಶ್ರಾಫ್​​​​​​​​​​​​​​​​​​ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ. ಟೈಗರ್ ತಾಯಿ ಆಯೆಶಾ ಶ್ರಾಫ್ ಮಗನ ಬಾಲ್ಯದ ಮುದ್ದು ಫೊಟೋವೊಂದನ್ನು ಸೋಷಿಯಲ್ ಮಿಡಿಯಾದಲ್ಲಿ ಷೇರ್ ಮಾಡಿಕೊಂಡು ವಿಶ್ ಮಾಡಿದ್ದಾರೆ.

ಟೈಗರ್ ಶ್ರಾಫ್​​​​​​​​​ ಸಹೋದರಿ ಕೃಷ್ಣ ಶ್ರಾಫ್ ಕೂಡಾ ಇಬ್ಬರೂ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬರ್ತಡೇ ಶುಭ ಕೋರಿದ್ದಾರೆ. ಇನ್ನು ಟೈಗರ್ ಶ್ರಾಫ್ ಗರ್ಲ್​ ಫ್ರೆಂಡ್ ಎನ್ನಲಾಗುತ್ತಿರುವ ದಿಶಾ ಪಟಾನಿ, 'ಬ್ಯಾಂಗ್ ಬ್ಯಾಂಗ್' ಚಿತ್ರದ ಟೈಟಲ್ ಹಾಡಿಗೆ ಟೈಗರ್ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದನ್ನು ಷೇರ್ ಮಾಡಿ ' ನಾವು ಒಟ್ಟಿಗೆ ಡ್ಯಾನ್ಸ್ ಮಾಡಿದ ಮೊದಲ ವಿಡಿಯೋ ಇದು. ನಾನು ನಿನ್ನೊಂದಿಗೆ ಡ್ಯಾನ್ಸ್ ಮಾಡುವಾಗ ನನಗೆ ಬಹಳ ನರ್ವಸ್ ಹಾಗೂ ನಾಚಿಕೆ ಆಗಿತ್ತು. ನಿನಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಶುಭ ಕೋರಿದ್ದಾರೆ. ಬಾಲಿವುಡ್​​​ ಇತರ ನಟ-ನಟಿಯರು ಕೂಡಾ ಟೈಗರ್ ಶ್ರಾಫ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಸದ್ಯಕ್ಕೆ ಟೈಗರ್ ಶ್ರಾಫ್ ಶ್ರದ್ಧಾ ಕಪೂರ್ ಜೊತೆ 'ಬಾಘಿ-3' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.