ETV Bharat / sitara

ಐದು ವಾರ ವಿಸ್ತರಣೆಯಾಯ್ತು ಬಿಗ್​ಬಾಸ್​..! ಕಾರಣ..?

author img

By

Published : Nov 27, 2019, 8:45 AM IST

Bigg Boss 13 extended
ಬಿಗ್​ಬಾಸ್

13ನೇ ಆವೃತ್ತಿಯ ಹಿಂದಿ ಬಿಗ್​ಬಾಸ್ ಕಾರ್ಯಕ್ರಮವನ್ನು ಐದು ವಾರಗಳ ಕಾಲ ವಿಸ್ತರಣೆ ​​​ ಮಾಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೈದರಾಬಾದ್: ಕನ್ನಡದಲ್ಲಿ ಏಳನೇ ಆವೃತ್ತಿಯ ಬಿಗ್​ಬಾಸ್ ಕಾರ್ಯಕ್ರಮ ಒಂದು ತಿಂಗಳು ಪೂರೈಸಿದ್ದರೆ ಅತ್ತ ಹಿಂದಿಯಲ್ಲಿ 13ನೇ ಆವೃತ್ತಿಯ ಬಿಗ್​ಬಾಸ್ 9 ವಾರ ಕಂಪ್ಲೀಟ್ ಮಾಡಿದೆ. ಇದೇ ವೇಳೆ, ಹಿಂದಿ ಬಿಗ್​ಬಾಸ್ ಅಡ್ಡದಿಂದ ಹೊಸ ಸುದ್ದಿ ಹೊರಬಿದ್ದಿದೆ.

ಬಿಗ್​ಬಾಸ್ ನೂರು ದಿನದ ಕಾರ್ಯಕ್ರಮವಾಗಿದ್ದು, ಕನ್ನಡದಲ್ಲಿ ಒಂದು ಆವೃತ್ತಿ ಮಾತ್ರ 120 ದಿನಗಳ ಕಾಲ ನಡೆದಿತ್ತು. ಪ್ರಸ್ತುತ ಹಿಂದಿ ಬಿಗ್​ಬಾಸ್ ಸಹ ಇದೇ ದಾರಿಯನ್ನು ಅನುಸರಿಸಲು ಮುಂದಾಗಿದೆ. ಲಭ್ಯ ಮಾಹಿತಿ ಪ್ರಕಾರ ಹಿಂದಿ ಬಿಗ್​ಬಾಸ್ ಐದು ವಾರಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

ಹಿಂದಿ ಬಿಗ್​ಬಾಸ್ ಐದು ವಾರಗಳ ಕಾಲ ವಿಸ್ತರಣೆಯಾದಲ್ಲಿ ಗ್ರ್ಯಾಂಡ್ ಫಿನಾಲೆ ಮುಂದಿನ ಫೆಬ್ರವರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ನಿರ್ವಹಣೆ ಜವಾಬ್ದಾರಿಯನ್ನು ಸಲ್ಮಾನ್ ಖಾನ್ ವಹಿಸಿದ್ದು, ಐದು ವಾರದ ವಿಸ್ತರಣೆಯಲ್ಲೂ ಅವರನ್ನೇ ಉಳಿಸಿಕೊಳ್ಳಲು ಚಾನೆಲ್​​​​​ ಭಾರಿ ಸಂಭಾವನೆ ನೀಡಲು ಮುಂದಾಗಿದೆ.

Bigg Boss 13
ಹಿಂದಿ ಬಿಗ್​ಬಾಸ್ ಮನೆ

'ದಬಾಂಗ್ 3' ಪ್ರಚಾರ ಹಾಗೂ 'ರಾಧೆ: ಯುವರ್ ಮೋಸ್ಟ್​ ವಾಂಟೆಡ್ ಭಾಯ್' ಚಿತ್ರೀಕರಣಕ್ಕೆ ಬಿಗ್​ಬಾಸ್ ಅವಧಿ ವಿಸ್ತರಣೆ ಅಡ್ಡಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಗ್​ ಆಫರ್​ ನೀಡಿದೆ. ಪ್ರಸ್ತುತ ಒಂದು ಸಂಚಿಕೆಗೆ ಸಲ್ಲುಮಿಯಾ ₹6.5 ಕೋಟಿ ಪಡೆಯುತ್ತಿದ್ದು, ವಿಸ್ತರಣೆಯಾದ ವಾರದಲ್ಲಿ ₹8.5 ಕೋಟಿ ಜೇಬಿಗಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ಬಿಗ್​ಬಾಸ್ ಆವೃತ್ತಿಗೆ ನಿರೀಕ್ಷಿತ ಪ್ರಮಾಣದಲ್ಲಿ ಟಿಆರ್​ಪಿಯಲ್ಲಿ ಬಂದಿರಲಿಲ್ಲ. ಆದರೆ ಈ ಬಾರಿಯ ಸೀಸನ್​ ಭಾರಿ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆಯುತ್ತಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡು ಅವಧಿ ವಿಸ್ತರಣೆಗೆ ಚಾನೆಲ್​ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Intro:Body:

ಹೈದರಾಬಾದ್: ಕನ್ನಡದಲ್ಲಿ ಏಳನೇ ಆವೃತ್ತಿಯ ಬಿಗ್​ಬಾಸ್ ಕಾರ್ಯಕ್ರಮ ಒಮದು ತಿಂಗಳು ಪೂರೈಸಿದ್ದರೆ ಅತ್ತ ಹಿಂದಿಯಲ್ಲಿ 13ನೇ ಆವೃತ್ತಿಯ ಬಿಗ್​ಬಾಸ್ 9 ವಾರ ಕಂಪ್ಲೀಟ್ ಮಾಡಿದೆ. ಇದೇ ವೇಳೆ ಹಿಂದಿ ಬಿಗ್​ಬಾಸ್ ಅಡ್ಡದಿಂದ ಹೊಸ ಸುದ್ದಿ ಹೊರಬಿದ್ದಿದೆ.

ಬಿಗ್​ಬಾಸ್ ನೂರು ದಿನದ ಕಾರ್ಯಕ್ರಮವಾಗಿದ್ದು, ಕನ್ನಡದಲ್ಲಿ ಒಂದು ಆವೃತ್ತಿ ಮಾತ್ರ 120 ದಿನಗಳ ಕಾಲ ನಡೆದಿತ್ತು. ಪ್ರಸ್ತುತ ಹಿಂದಿ ಬಿಗ್​ಬಾಸ್ ಸಹ ಇದೇ ದಾರಿಯನ್ನು ಅನುಸರಿಸಲು ಮುಂದಾಗಿದೆ. ಲಭ್ಯ ಮಾಹಿತಿಯಂತೆ ಹಿಂದಿ ಬಿಗ್​ಬಾಸ್ ಐದು ವಾರಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

ಹಿಂದಿ ಬಿಗ್​ಬಾಸ್ ಐದು ವಾರಗಳ ಕಾಲ ವಿಸ್ತರಣೆಯಾದಲ್ಲಿ ಗ್ರ್ಯಾಂಡ್ ಫಿನಾಲೆ ಮುಂದಿನ ಫೆಬ್ರವರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ನಿರ್ವಹಣೆ ಜವಾಬ್ದಾರಿಯನ್ನು ಸಲ್ಮಾನ್ ಖಾನ್ ವಹಿಸಿದ್ದು, ಐದು ವಾರದ ವಿಸ್ತರಣೆಯಲ್ಲೂ ಅವರನ್ನೇ ಉಳಿಸಿಕೊಳ್ಳಲು ಚಾನೆಲ್​​​​​ ಭಾರಿ ಸಂಭಾವನೆ ನೀಡಲು ಮುಂದಾಗಿದೆ.

'ದಬಾಂಗ್ 3' ಪ್ರಚಾರ ಹಾಗೂ 'ರಾಧೆ: ಯುವರ್ ಮೋಸ್ಟ್​ ವಾಂಟೆಡ್ ಭಾಯ್' ಚಿತ್ರೀಕರಣಕ್ಕೆ ಬಿಗ್​ಬಾಸ್ ಅವಧಿ ವಿಸ್ತರಣೆ ಅಡ್ಡಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಗ್​ ಆಫರ್​ ನೀಡಿದೆ. ಪ್ರಸ್ತುತ ಒಂದು ಸಂಚಿಕೆಗೆ ಸಲ್ಲುಮಿಯಾ ₹6.5 ಕೋಟಿ ಪಡೆಯುತ್ತಿದ್ದು, ವಿಸ್ತರಣೆಯಾದ ವಾರದಲ್ಲಿ ₹8.5 ಕೋಟಿ ಜೇಬಿಗಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ಬಿಗ್​ಬಾಸ್ ಆವೃತ್ತಿಗೆ ನಿರೀಕ್ಷಿತ ಪ್ರಮಾಣದಲ್ಲಿ ಟಿಆರ್​ಪಿಯಲ್ಲಿ ಬಂದಿರಲಿಲ್ಲ. ಆದರೆ ಈ ಬಾರಿಯ ಸೀಸನ್​ ಭಾರಿ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆಯುತ್ತಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡು ಅವಧಿ ವಿಸ್ತರಣೆಗೆ ಚಾನೆಲ್​ ಮುಂದಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.