ETV Bharat / science-and-technology

ಎಲೆಕ್ಟ್ರಿಕ್ ವಾಹನಗಳ ಮೇಲೆ ನಿಷೇಧ ಹೇರಲಿದೆಯಾ ಸ್ವಿಟ್ಜರ್ಲೆಂಡ್ ?

author img

By

Published : Dec 6, 2022, 4:52 PM IST

ಬ್ಲ್ಯಾಕ್‌ಔಟ್ ಮತ್ತು ವಿದ್ಯುತ್ ಕಡಿತ ತಡೆಯುವ ಸಲುವಾಗಿ ಸ್ವಿಟ್ಜರ್ಲೆಂಡ್ ಎಲೆಕ್ಟ್ರಿಕ್​ ವಾಹನಗಳ ಬಳಕೆ ಮೇಲೆ ನಿಷೇಧ ಹೇರಬಹುದು ಎಂದು ವರದಿಯಾಗಿದೆ.

electric vehicles ban in switzerland
ಎಲೆಕ್ಟ್ರಿಕ್ ವಾಹನಗಳ ಮೇಲೆ ನಿಷೇಧ

ಸ್ವಿಟ್ಜರ್ಲೆಂಡ್: ಎಲೆಕ್ಟ್ರಿಕ್ ವಾಹನಗಳನ್ನು ನಿಷೇಧಿಸುವ ಬಗ್ಗೆ ಸ್ವಿಟ್ಜರ್ಲೆಂಡ್​ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮವೊಂದರ ವರದಿಯ ಪ್ರಕಾರ, ಬ್ಲ್ಯಾಕ್‌ಔಟ್ ಮತ್ತು ವಿದ್ಯುತ್ ಕಡಿತವನ್ನು ತಡೆಯುವ ಸಲುವಾಗಿ ಅಧಿಕಾರಿಗಳು ಇಂತಹ ಪ್ರಸ್ತಾಪವೊಂದನ್ನು ಇಟ್ಟಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಅಲ್ಲಿನ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ, ಎಲೆಕ್ಟ್ರಿಕ್​ ವಾಹನಗಳನ್ನು ನಿಷೇಧಿಸಿದ ಮೊದಲ ದೇಶ ಸ್ವಿಟ್ಜರ್ಲೆಂಡ್ ಆಗಲಿದೆ.

ಸ್ವಿಟ್ಜರ್ಲೆಂಡ್ ತನ್ನ ವಿದ್ಯುತ್​ ಅವಶ್ಯಕತೆಗಳನ್ನು ಪೂರೈಸಲು ಜಲವಿದ್ಯುತ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ದೇಶದಲ್ಲಿ ಸುಮಾರು 60 ಪ್ರತಿಶತ ವಿದ್ಯುತ್, ಹೈಡ್ರೋಪವರ್​ನಿಂದ ಉತ್ಪತಿಯಾಗುತ್ತಿದೆ. ಇನ್ನೂ ಚಳಿಗಾಲದ ತಿಂಗಳಿನಲ್ಲಿ ಈ ಉತ್ಪಾದನೆ ನಿಧಾನಗೊಳ್ಳುತ್ತದೆ. ಈ ವೇಳೆ, ದೇಶವು ನೆರೆಯ ಫ್ರಾನ್ಸ್ ಮತ್ತು ಜರ್ಮನಿಯಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತದೆ. ಆದರೀಗ ಈ ಎರಡು ದೇಶಗಳು ಉಕ್ರೇನ್ ಯುದ್ಧದಿಂದಾಗಿ ಯುರೋಪಿನ ಉಳಿದ ಭಾಗಗಳಂತೆ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಇದನ್ನೂ ಓದಿ: ಡಿಜಿಟಲ್​ ರೂಪಾಂತರಕ್ಕೆ ಭಾರತದ ಒತ್ತು.. ಮುಂಬರುವ ದಿನಗಳಲ್ಲಿ 85 ಬಿಲಿಯನ್​​​ ಡಾಲರ್​​ ವೆಚ್ಚ

ಪರಮಾಣು ರಿಯಾಕ್ಟರ್ ಸ್ಥಗಿತಗಳ ಕಾರಣದಿಂದಾಗಿ ಫ್ರೆಂಚ್ ಯುಟಿಲಿಟಿ EDF 2022ರಲ್ಲಿ, 30 ವರ್ಷಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆಯನ್ನು ಮಾಡಿದೆ. ಹೀಗಾಗಿ ಸ್ವಿಟ್ಜರ್ಲೆಂಡ್ ಸಂಭವನೀಯ ಬ್ಲ್ಯಾಕ್ಔಟ್​​ಗೆ ತಯಾರಿ ನಡೆಸುತ್ತಿದೆ. ವಿದ್ಯುತ್​​ ಉಳಿಸುವ ಸಲುವಾಗಿ ಕಟ್ಟಡಗಳಲ್ಲಿ ವಿದ್ಯುತ್​ ಬಳಕೆಗೆ ನಿಷೇಧ, ಸಂಗೀತ ಕಚೇರಿ, ನಾಟಕ ಪ್ರದರ್ಶನಗಳು ಮತ್ತು ಕ್ರೀಡಾಕೂಟಗಳನ್ನು ಸಹ ನಿಷೇಧಿಸಬೇಕು ಎಂದು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆಯಂತೆ.

ಪರಿಸ್ಥಿತಿ ಹದಗೆಟ್ಟರೆ, ಸ್ವಿಟ್ಜರ್ಲೆಂಡ್ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಅಗತ್ಯ ಪ್ರವಾಸಗಳಿಗೆ ಮಾತ್ರ ಸೀಮಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.