ETV Bharat / entertainment

ಎಲ್ಲೆಡೆ 'ಪಠಾಣ್'​ ಸದ್ದು: 7 ದಿನಗಳಲ್ಲಿ 634 ಕೋಟಿ ಬಾಚಿದ ಶಾರುಖ್​ ಸಿನಿಮಾ

author img

By

Published : Feb 1, 2023, 8:39 PM IST

Pathaan collection
ಪಠಾಣ್ ಕಲೆಕ್ಷನ್

ಪಠಾಣ್​ ಸಿನಿಮಾ ತೆರೆ ಕಂಡು ಒಂದೇ ವಾರದಲ್ಲಿ 634 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.

ವಿವಾದಗಳ ನಡುವೆಯೂ ಕಳೆದ ಬುಧವಾರ (ಜನವರಿ 25) ತೆರೆ ಕಂಡಿರುವ ಪಠಾಣ್​ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದೇ ವಾರದಲ್ಲಿ 634 ಕೋಟಿ ರೂಪಾಯಿ ಸಂಗ್ರಹಿಸಿ ಮುನ್ನುಗ್ಗುತ್ತಿದೆ. ರಿಲೀಸ್​ ಆಗಿ ಒಂದೇ ವಾರದಲ್ಲಿ ಈ ಮಟ್ಟಿಗೆ ಹಣ ಸಂಗ್ರಹಿಸಿರುವ ಮೊದಲ ಬಾಲಿವುಡ್‌ ಚಿತ್ರ ಕೂಡ ಹೌದು.

ಪಠಾಣ್ ಸಕ್ಸಸ್: ಬಾಲಿವುಡ್​ ಚಿತ್ರರಂಗದ ಬಹುಬೇಡಿಕೆಯ ಕಲಾವಿದರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಈ ಪಠಾಣ್​ ಸಿನಿಮಾಗೆ ಬಾಯ್ಕಾಟ್​ ಎಚ್ಚರಿಕೆ ಇತ್ತು. ಡಿಸೆಂಬರ್​ ಎರಡನೇ ವಾರದಲ್ಲಿ ರಿಲೀಸ್​ ಆಗಿದ್ದ ಬೇಶರಂ ರಂಗ್​ ಹಾಡಿನಲ್ಲಿನ ನಟಿಯ ವೇಷಭೂಷಣ ಈ ಬೆಳವಣಿಗೆಗೆ ಕಾರಣವಾಗಿತ್ತು. ಸಿನಿಮಾ ಬಿಡುಗಡೆ ಆದ ಮೊದಲೆರಡು ದಿನಗಳಂತೂ ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ಕೂಡ ನಡೆಸಲಾಯಿತು. ಪ್ರತಿಭಟನೆಯ ತಲೆಬಿಸಿ ಒಂದು ಕಡೆ ಇದ್ದರೆ, ಚಿತ್ರಕ್ಕೆ ಸಿಕ್ಕ ಉತ್ತಮ ಸ್ಪಂದನೆ ಕೂಡ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಪಠಾಣ್ ಈ ವರ್ಷ​ ಉತ್ತಮ ಆರಂಭವನ್ನು ಕೊಟ್ಟಿದೆ.

ಪಠಾಣ್ ಕಲೆಕ್ಷನ್: ಪಠಾಣ್ ಸಿನಿಮಾ ಏಳನೇ ದಿನ ಭಾರತದಲ್ಲಿ 28 ಕೋಟಿ ರೂಪಾಯಿ, ವಿದೇಶಗಳಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈವರೆಗೆ ಅಂದರೆ ಕಳೆದ ಏಳು ದಿನಗಳಲ್ಲಿ ಭಾರತದಲ್ಲಿ 395 ಕೋಟಿ ರೂ., ವಿದೆಶದಲ್ಲಿ 239 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಪಠಾಣ್ ಕಲೆಕ್ಷನ್ - ದಿನನಿತ್ಯದ ಲೆಕ್ಕಾಚಾರ: ಜನವರಿ 23ರಂದು ಭಾರತ ಸೇರಿದಂತೆ ಸುಮಾರು 100 ದೇಶಗಳಲ್ಲಿ ಪಠಾಣ್​ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಐದನೇ ದಿನ 112 ಕೋಟಿ (ಭಾರತದಲ್ಲಿ 70 ಕೊಟಿ ರೂ. + ವಿದೇಶಗಳಲ್ಲಿ 42 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಆರನೇ ದಿನ 41.5 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಏಳನೇ ದಿನ 43 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: ಪಠಾಣ್​ ಯಶಸ್ಸು: ಸೂಪರ್ ಹಿಟ್ 'ಬ್ರಹ್ಮಾಸ್ತ್ರ' ನಟಿ ಆಲಿಯಾ ಭಟ್ ಹೀಗಂದ್ರು ನೋಡಿ!

ಪಠಾಣ್​ ಸೀಕ್ವೆಲ್​: ಚಿತ್ರದ ಅಸಾಧಾರಣ ಯಶಸ್ಸಿನ ಬಳಿಕ ಮಾಧ್ಯಮದೊಂದಿಗಿನ ಇತ್ತೀಚೆಗೆ ಚಿತ್ರತಂಡ ಸಂವಾದ ನಡೆಸಿ ಸಂತೋಷದ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿತ್ತು. ಆ ಸಂದರ್ಭ ಎಸ್‌ಆರ್‌ಕೆ ಮತ್ತು ಸಿದ್ಧಾರ್ಥ್ ಆನಂದ್ ಪಠಾಣ್​ ಸೀಕ್ವೆಲ್​ ಬಗ್ಗೆ ಸುಳಿವು ನೀಡಿದ್ದಾರೆ. ಪಠಾಣ್ 2ರಲ್ಲಿ "ದೊಡ್ಡ ಮತ್ತು ಉತ್ತಮ" ಎಂದು ಶಾರುಖ್​ ಖಾನ್​ ಹೇಳಿದರೆ, ಸಿದ್ಧಾರ್ಥ್ ಆನಂದ್​ ಮತ್ತೆ ಸೂಪರ್​ ಸ್ಟಾರ್​ ಚಿತ್ರವನ್ನು ನಿರ್ದೇಶಿಸುವುದು ಗೌರವಕರ ವಿಷಯ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.