ETV Bharat / entertainment

ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿಗಾಗಿ ಸಂಸದ ಪ್ರತಾಪ್ ಸಿಂಹಗೆ ನಟ ವಸಿಷ್ಠ ಸಿಂಹ ಮನವಿ

author img

By

Published : Sep 6, 2022, 5:27 PM IST

actor-vasishtha-simha-met-minister-pratap-simha
ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ದಿಗಾಗಿ ಸಂಸದ ಪ್ರತಾಪ್ ಸಿಂಹಗೆ ನಟ ವಸಿಷ್ಠ ಸಿಂಹ ಮನವಿ

ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿ ಕಾರ್ಯ ಪ್ರಾರಂಭಿಸುವಂತೆ ಸಂಸದ ಪ್ರತಾಪ್ ಸಿಂಹ ಅವರಿಗೆ ನಟ ವಸಿಷ್ಠ ಸಿಂಹ ಮನವಿ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಭಿನ್ನ ನಟನೆ, ಧ್ವನಿಯ ಮೂಲಕ ಛಾಪು ಮೂಡಿಸಿರುವ ನಟ ವಸಿಷ್ಠ ಸಿಂಹ. ಸದ್ಯ ಕನ್ನಡ ಹಾಗು ತೆಲುಗು ಚಲನಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ವಸಿಷ್ಠ ಸಿಂಹ ಇಂದು ಮೈಸೂರಿಗೆ ಆಗಮಿಸಿ ಸಂಸದ ಪ್ರತಾಪ ಸಿಂಹರನ್ನು ಭೇಟಿ ಮಾಡಿದರು. ಇದೇ ವೇಳೆ ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿ ಕೆಲಸವನ್ನು ಪ್ರಾರಂಭಿಸಲು ಸಂಸದರಲ್ಲಿ ನಟ ವಸಿಷ್ಠ ಸಿಂಹ ಮನವಿ ಮಾಡಿದರು.

ಬಳಿಕ ಮಾತನಾಡಿದ ಅವರು, ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ದಶಪಥ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಸಂಸದ ಪ್ರತಾಪ್ ಸಿಂಹ ಮಾಡುತ್ತಿದ್ದಾರೆ. ಇದರಿಂದಾಗಿ ಮೈಸೂರಿನಲ್ಲಿ ನೂರಾರು ಕಾರ್ಖಾನೆಗಳು, ಕೈಗಾರಿಕೋದ್ಯಮ ಸ್ಥಾಪನೆಯಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ಲಭಿಸುತ್ತಿದೆ. ಮೈಸೂರಿನಿಂದ ವಿವಿಧ ಕಡೆಗಳಿಗೆ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಸಾಕಷ್ಟು ಮಂದಿಗೆ ಉಪಯೋಗವಾಗಿದೆ ಎಂದು ಹೇಳಿದರು.

actor-vasishtha-simha-met-minister-pratap-simha
ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ದಿಗಾಗಿ ಸಂಸದ ಪ್ರತಾಪ್ ಸಿಂಹಗೆ ನಟ ವಸಿಷ್ಠ ಸಿಂಹ ಮನವಿ

ಹಲವು ವರ್ಷಗಳ ಹಿಂದೆ ನಾವು ಇಲ್ಲಿ ಕೇವಲ ಮೈಸೂರು ವಿಮಾನ ನಿಲ್ದಾಣವನ್ನು ಮಾತ್ರ ಕಂಡಿದ್ದೆವು. ಆದರೆ ಇಂದು ಸಾಮಾನ್ಯ ವ್ಯಕ್ತಿಯೂ ವಿಮಾನಯಾನ ಮಾಡಲು ಸಹಕಾರಿಯಾಗುವಂತೆ ಹತ್ತಾರು ವಿಮಾನಗಳನ್ನು ಮೈಸೂರು ಸಂಪರ್ಕಕ್ಕೆ ತಂದಿದ್ದಾರೆ. ಜೊತೆಗೆ ವಿಮಾನ ನಿಲ್ದಾಣವನ್ನು ವಿಸ್ತರಿಸಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.

ಮೈಸೂರು ದಸರಾ ಆಗಮಿಸುತ್ತಿದೆ. ನಮ್ಮ ಮೈಸೂರು ಕಲಾವಿದರ ತವರೂರು. ಕಲಾವಿದರ ದಸರಾಗೆ ಸರ್ಕಾರ ಗಮನ ವಹಿಸಬೇಕಿದೆ. ಮತ್ತು ಚಿತ್ರನಗರಿಯನ್ನು ಮೈಸೂರಿನ ಹಿಮ್ಮಾವು ಬಳಿ ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ಮೂರ್ನಾಲ್ಕು ವರ್ಷದ ಹಿಂದೆಯೇ ಘೋಷಿಸಿತ್ತು. ಹಾಗಾಗಿ ಸರ್ಕಾರ ಚಿತ್ರನಗರಿಯ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲಿ. ಇದರಿಂದ ನಟನೆ, ನಿರ್ದೇಶನ ಮತ್ತು ತಾಂತ್ರಿಕ ವಿಭಾಗ ಸೇರಿದಂತೆ ವಿವಿಧ ಕಲಾವಿದರ ಬದುಕಿಗೆ ಇದು ಆಸರೆಯಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಚಿತ್ರನಟ ವಸಿಷ್ಠ ಸಿಂಹ, ನಿರ್ದೇಶಕ ಕಾರ್ತಿಕ್, ಅಜಯ್ ಶಾಸ್ತ್ರಿ, ವಿಕ್ರಮ್ ಅಯ್ಯಂಗಾರ್, ಲಿಂಗರಾಜು, ದರ್ಶನ್, ಮುರಳೀಧರ್, ಕೌಶಲ್, ಪ್ರದೀಪ್ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕೋಡ್ಲು ರಾಮಕೃಷ್ಣ ನಿರ್ದೇಶನದ ಶ್ಯಾನುಭೋಗರ ಮಗಳು ಚಿತ್ರಕ್ಕೆ ರಾಗಿಣಿ ಪ್ರಜ್ವಲ್ ನಾಯಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.